Gold Rate Today: ಇಂದಿನ ಚಿನ್ನದ ಬೆಲೆ ಮತ್ತಷ್ಟು ಅಗ್ಗ: 22k, 24k ಬಂಗಾರದ ದರ 2ನೇ ದಿನವು ಕುಸಿತ
ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ನಿರಂತರ ಏರಿಳಿತ ಮುಂದುವರಿದಿದ್ದು, ಇಂದು ಬುಧವಾರ ಚಿನ್ನದ ಬೆಲೆಯಲ್ಲಿ ಸತತವಾಗಿ ಎರಡನೇ ದಿನವು ಕುಸಿತವಾಗಿದೆ. ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಇಳಿಕೆಯ ಹಾದಿ ಹಿಡಿದ ಚಿನ್ನದ ಬೆಲೆ ಕಂಡ ಗ್ರಾಹಕರು ಚಿನ್ನ ಖರೀದಿಸಲು ಇದು ಸಕಾಲ ಎಂದು ಭಾವಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಹಳದಿ ಲೋಹದ ಬೆಲೆ ಮತ್ತಷ್ಟು ಇಳಿಕೆ ಆಗತ್ತದೆ! ಆಗ ಕೊಳ್ಳೋಣ ಅಂತಲೂ ಕೆಲವು ಕಾಯುತ್ತಿದ್ದಾರೆ. ಇವತ್ತಿನ ಚಿನ್ನ-ಬೆಳ್ಳಿಯ ಬೆಲೆ ಅಪ್ಡೇಟ್ಸ್ ಮುಂದಿದೆ.
ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನಕ್ಕೆ ಬೇಡಿಕೆ ಕುಸಿತವಾದಂತೆ ಕಾಣುತ್ತದೆ. ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಅಥವಾ ಬಂಡವಾಳ ಹೂಡಿಕೆದಾರರಿಂದ ಹೂಡಿಕೆ ಹಿಂತೆಗೆತ ಹೆಚ್ಚಾದ ಬೆನ್ನಲ್ಲೇ ಬೇಡಿಕೆ ಕುಸಿದಿದೆ ಎನ್ನಲಾಗಿದೆ. ಇದರಿಂದಲೇ ದರದಲ್ಲಿ ಭಾರೀ ಬದಲಾವಣೆ ಆಗುತ್ತಿದೆ. 2026ರ ಆರಂಭದಲ್ಲಿ ಏರುಗತಿಯಲ್ಲಿದ್ದ ಚಿನ್ನ-ಬೆಳ್ಳಿ ದರ ಇದೀಗ ನೆಗಟಿವ್ ಟ್ರೆಂಡ್‌ನಲ್ಲಿ ಸಾಗುತ್ತಿದೆ.

ಸತತ ಎರಡನೇ ದಿನವು ಚಿನ್ನದ ಬೆಲೆ ಕುಸಿತ
ಇಂದು ಬುಧವಾರ ಜೂನ್ 24 ರಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಆಗಿದೆ. 18 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯು 200 ರೂಪಾಯಿ ಇಳಿಕೆ ಕಂಡು, ಒಟ್ಟು ಬೆಲೆ 1,08,250 ರೂಪಾಯಿ ತಲುಪಿದೆ.
ಅದೇ ರೀತಿ 24 ಕ್ಯಾರಟ್ 10 ಗ್ರಾಂ ದರದಲ್ಲಿ 270 ರೂಪಾಯಿ ಇಳಿಕೆ ಕಂಡಿದ್ದು, ಅದರ ಒಟ್ಟು ಬೆಲೆ 1,44,370 ರೂಪಾಯಿಗೆ ಕುಸಿದಿದೆ. 22 ಕ್ಯಾರಟ್ 10 ಗ್ರಾಂ ಬಂಗಾರವು 250 ರೂಪಾಯಿ ಇಳಿಕೆ ಆಗಿದ್ದು, ಒಟ್ಟು ದರ ಇವತ್ತು 1,32,300 ರೂಪಾಯಿ ಮುಟ್ಟಿದೆ. ಹೀಗೆ ನಿರಂತರ ದರ ಇಳಿಕೆಯನ್ನೇ ಕಾಯುತ್ತಿದ್ದ ಕೆಲವು ಗ್ರಾಹಕರು ಖರೀದಿಗೆ ಮುಂದಾಗಿದ್ದಾರೆ. ಇನ್ನು ಕೆಲವರು ಮತ್ತಷ್ಟು ಇಳಿಕೆ ಆಗಲಿ ಆಗ ಚಿನ್ನಾಭರಣ ಖರೀದಿಸೋಣವೆಂದು ಕಾಯುತ್ತಿದ್ದಾರೆ.
ಬೆಳ್ಳಿ ದರದಲ್ಲಿ ಸ್ಥಿರ, ಇಂದಿನ ಬೆಲೆ ಎಷ್ಟಿದೆ?
ಬಿಳಿ ಲೋಹ ಬೆಳ್ಳಿಯ ದರವು ಸಹಿ ನಿರಂತರಿವಾಗಿ ಇಳಿಕೆಯಾಗುತ್ತಿದೆ. ಜೂನ್ 23ರಂದು 2,50,000 ರೂಪಾಯಿ ಇದ್ದ ದರದಲ್ಲಿ 5000 ರೂ ಕುಸಿದಿತ್ತು. ಬಳಿಕ ಅದೇ ಯಥಾಸ್ಥಿತಿ ಬುಧವಾರವು ಮುಂದುವರಿದಿದ್ದು, ಯಾವುದೇ ಬದಲಾವಣೆ ಆಗಿಲ್ಲ.
ಬೆಂಗಳೂರು, ಇತರ ನಗರಗಳ 22k ಚಿನ್ನದ ಬೆಲೆಪಟ್ಟಿ
ಚೆನ್ನೈ : 13,350 ರೂಪಾಯಿ
ಮುಂಬೈ : 13,230 ರೂಪಾಯಿ
ದೆಹಲಿ : 13,245 ರೂಪಾಯಿ
ಕೊಲ್ಕತ್ತಾ : 13,230 ರೂಪಾಯಿ
ಬೆಂಗಳೂರು :13,230 ರೂಪಾಯಿ
ಹೈದರಾಬಾದ್ :13,230 ರೂಪಾಯಿ
ಕೇರಳ :13,230 ರೂಪಾಯಿ
ಪುಣೆ :13,230 ರೂಪಾಯಿ
ವಿವಿಧ ನಗರಗಳ 24k ಚಿನ್ನದ ದರಪಟ್ಟಿ
ಚೆನ್ನೈ : 14,564 ರೂಪಾಯಿ
ಮುಂಬೈ : 14,443 ರೂಪಾಯಿ
ದೆಹಲಿ : 14,448 ರೂಪಾಯಿ
ಕೊಲ್ಕತ್ತಾ : 14,443 ರೂಪಾಯಿ
ಬೆಂಗಳೂರು : 14,443 ರೂಪಾಯಿ
ಹೈದರಾಬಾದ್ : 14,443 ರೂಪಾಯಿ
ಕೇರಳ : 14,443 ರೂಪಾಯಿ
ಪುಣೆ : 14,443 ರೂಪಾಯಿ













Click it and Unblock the Notifications