'ಜಗತ್ತಿನಲ್ಲಿ ಒಬ್ಬರಿಂದ ಅತ್ಯಾಚಾರ ಮಾಡಲು ಸಾಧ್ಯವೇ ಇಲ್ಲ' ಕುಷ್ಟಗಿ ಮಾಜಿ ಶಾಸಕ
'ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ, ಇಡೀ ಜಗತ್ತಿನಲ್ಲಿ ಒಬ್ಬರಿಂದ ಅತ್ಯಾಚಾರ ಮಾಡಲು ಸಾಧ್ಯವೇ ಇಲ್ಲ' ಎಂದು ಕುಷ್ಟಗಿ ಮಾಜಿ ಶಾಸಕರೊಬ್ಬರು ಹೇಳಿದ್ದಾರೆ. ಇವರು ಹೇಳಿದ್ದಾರೆನ್ನುವ ಆಡಿಯೋ ವೈರಲ್ ಆಗಿದೆ. ಅತ್ಯಾಚಾರ ನೆಡದಿದೆ ನ್ಯಾಯ ಕೊಡಿಸಿ ಎಂದು ಕೇಳಿದ ಸಂತ್ರಸ್ತೆಯ ಸಂಬಂಧಿಕರಿಗೆ ಈ ರೀತಿ ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಕಾಂಗ್ರೆಸ್ ಮುಖಂಡ ಅತ್ಯಾಚಾರ ಆರೊಪ ಕೇಳಿ ಬಂದಿದ್ದು ಕೇಸ್ ದಾಖಲಾದ್ರೂ ಕ್ರಮಕ್ಕೆ ಸಂಬಂಧಪಟ್ಟವರಿಂದ ಮೀನಾಮೇಷ ಎಣಿಸಲಾಗುತ್ತಿದೆ. ಹೀಗಾಗಿ ಸಂತ್ರಸ್ಥ ಮಹಿಳೆಯ ಮಾವ ನ್ಯಾಯಕ್ಕೆ ಎಸ್ಪಿ, ಮಾಜಿ ಶಾಸಕರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಮಾಜಿ ಶಾಸಕ ಈ ರೀತಿ ಹೇಳಿರುವ ಆಡಿಯೋ ವೈರಲ್ ಆಗಿದೆ.

ಕಾಂಗ್ರೆಸ್ ಮುಖಂಡ ಸಂಗನಗೌಡ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯೊಬ್ಬರು ಅಕ್ಟೋಬರ್ ಹತ್ತರಂದು ಎಂ. ಗುಡದೂರು ಗ್ರಾಮದ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ದೂರು ದಾಖಲಿಸಿಕೊಂಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದಾಗಿ ಎಸ್ಪಿಗೆ ದೂರು ನೀಡಿದ್ದ ಸಂತ್ರಸ್ತೆಯ ಮಾವ ಯಮೂನರಪ್ಪ, ನೊಂದ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಅಮರೇಗೌಡ ಬಯ್ಯಾಪುರ ಅವರ ಬಳಿಯೂ ಮನವಿ ಮಾಡಿದ್ದರು ಎನ್ನಲಾಗಿದೆ.
ಸಂತ್ರಸ್ತೆ ಸಂಬಂಧಿಕರೊಂದಿಗೆ ಮಾತನಾಡುವಾಗ ಆರೋಪಿ ಪರವಾಗಿಯೇ ನಿಲುವು ತಾಳಿರುವ ಮಾಜಿ ಶಾಸಕರು, ಎಸ್‌ಪಿಗೆ ದೂರು ನೀಡಬಾರದಿತ್ತು ಎಂದಿದ್ದಾರೆ. ಅಮರೇಗೌಡ ಬಯ್ಯಾಪುರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ''ನಿಮ್ಮ ಮರ್ಯಾದೆಯನ್ನು ನೀವೆ ಕಳೆದುಕೊಳ್ಳುತ್ತಿದ್ದೀಯಾ, ಒಬ್ಬರಿಂದ ಹೇಗೆ ಅತ್ಯಾಚಾರ ಮಾಡಲು ಸಾಧ್ಯ?
ನೀನು ಒಬ್ಬನನ್ನು ಕರೆದುಕೊಮಡು ಬಾ, ನಾನು ಓರ್ವ ಮಹಿಳೆಯನ್ನು ಕಳುಹಿಸುತ್ಥೆನೆ. ಆ ವ್ಯಕ್ತಿ ಆಕೆಯನ್ನು ಅತ್ಯಾಚಾರ ಮಾಡಲಿ ನೋಡೋಣ, ಒಬ್ಬನಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ. ಸೂಕ್ಷ್ಮ ವಿಚಾರ ಇದು, ಮರ್ಯಾದೆ ಪ್ರಶ್ನೆ ಇದೆ ಯೋಚಿಸು'' ಎಂದು ಸಂತ್ರಸ್ತೆ ಮಾನವಿಗೆ ಹೇಳುವ ಫೋನ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.












Click it and Unblock the Notifications