85 ವರ್ಷದ ವೃದ್ಧೆ ಮೇಲೆ ಅತ್ಯಾಚಾರ: ಬ್ಲೇಡ್‌ನಿಂದ ತುಟಿ ಕತ್ತರಿಸಿದ ಕ್ರೂರಿ ಬಂಧನ!
ದೆಹಲಿ ಸೆಪ್ಟೆಂಬರ್ 2: 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಬ್ಲೇಡ್‌ನಿಂದ ತುಟಿ ಕತ್ತರಿಸಿದ ಕ್ರೂರ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 28 ವರ್ಷದ ಆರೋಪಿಯನ್ನು ಬಂಧನ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ದೆಹಲಿಯ ನೇತಾಜಿ ಸುಭಾಷ್ ಪ್ಲೇಸ್ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ವರದಿ ಮಾಡಿದ ಘಟನೆಗೆ ಸಂಬಂಧಿಸಿದಂತೆ 28 ವರ್ಷದ ಆಕಾಶ್ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾತಿ ಮಲಿವಾಲ್ ಅವರು ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಹ್ಯಾಂಡಲ್‌ನಲ್ಲಿ ಘಟನೆಯ ಬಗ್ಗೆ ದೆಹಲಿ ಪೊಲೀಸರನ್ನು ಪ್ರಶ್ನಿಸಿದ್ದರು.

ವೃದ್ಧೆ ತನ್ನ ಮನೆಯೊಳಗೆ ಮಲಗಿದ್ದಾಗ ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆರೋಪಿಗಳು ಮಹಿಳೆಯ ಮನೆಯೊಳಗೆ ನುಸುಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಮಹಿಳೆಗೆ ಥಳಿಸಿ, ಬ್ಲೇಡ್‌ನಿಂದ ತುಟಿಗಳನ್ನು ಕತ್ತರಿಸಿದ್ದಾರೆ.
ವಿವರಗಳ ಪ್ರಕಾರ, ವಯಸ್ಸಾದ ಮಹಿಳೆಯ ಖಾಸಗಿ ಅಂಗಗಳಿಗೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ. ನೋಟಿಸ್‌ನಲ್ಲಿ ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ವಿವರಗಳೊಂದಿಗೆ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರತಿಯನ್ನು ನೀಡುವಂತೆ ಕೇಳಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ಮಗಳ ಮೇಲೆ ಮಲತಂದೆಯಿಂದ ಅತ್ಯಾಚಾರ!
ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಮಲತಂದೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ರಾಂಚಿಯ ಬೊಕಾರೋ ಪ್ರದೇಶದಲ್ಲಿ ನಡೆದಿದೆ. ಮಾನವೀಯ ತಲೆ ತಗ್ಗಿಸುವ ಈ ಕೃತ್ಯ ನಡೆದ ನಂತರ ಬಾಲಕಿ ತನ್ನ ತಾಯಿಗೆ ವಿಷಯ ತಿಳಿಸಿದರೂ ಕೂಡ ಆಕೆ ಬಾಯಿ ಮುಚ್ಚಿಕೊಂಡು ಸುಮ್ಮನೆ ಇರುವಂತೆ ಹೇಳಿದ್ದಾಳೆ ಎಂದು ಸಂತ್ರಸ್ತ ಬಾಲಕಿ ದೂರಿದ್ದಾಳೆ.
ಅಲ್ಲದೇ, ಆರೋಪಿಯು ತನ್ನ ತಂಗಿಯ ಮೇಲೂ ಕೆಟ್ಟ ಕಣ್ಣಿಟ್ಟಿದ್ದಾನೆ ಎಂದು ಅಪ್ರಾಪ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಬಾಲಕಿ ನೀಡಿದ ದೂರಿನನ್ವಯ ಪೊಲೀಸರು ತಾಯಿ ಮತ್ತು ಮಲ ತಂದೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿ ನೀಡಿದ ದೂರಿನ ಮೇರೆಗೆ ತಾಯಿ ಮತ್ತು ಆಕೆಯ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅಲ್ಲದೇ ಆರೋಪಿಗಳನ್ನು ವಿಚಾರಣೆಗೂ ಒಳಪಡಿಸಿದ್ದಾರೆ.
ಮೂಲಗಳ ಪ್ರಕಾರ ಆರು ವರ್ಷಗಳ ಹಿಂದೆ ಬಾಲಕಿಯ ತಂದೆ ಸಾವನ್ನಪ್ಪಿದ್ದಾರೆ. ಮೂರು ತಿಂಗಳ ಹಿಂದೆ ಆಕೆಯ ತಾಯಿ ದೇವಸ್ಥಾನದಲ್ಲಿ ಬೊಕಾರೊದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ. ಆ ನಂತರ ಬಾಲಕಿಯರು ತಾಯಿಯ ಜೊತೆಗೆ ವಾಸಿಸುತ್ತಿದ್ದರು.
ಇಬ್ಬರು ಬಾಲಕಿಯರು ತಮ್ಮ ತಾಯಿಯೊಂದಿಗೆ ರಾಂಚಿಯ ಬಾಡಿಗೆ ಮನೆಯಲ್ಲಿ ವಾಸಿಸಲು ಶುರು ಮಾಡಿದ ಕೆಲವು ದಿನಗಳ ನಂತರ ಮಲತಂದೆ ನನ್ನೊಂದಿಗೆ ಚೆಲ್ಲಾಟವಾಡಲು ಪ್ರಾರಂಭಿಸಿದ್ದಾರೆ. ನಂತರ ಅವರು ಬಲವಂತದ ಲೈಂಗಿಕ ಸಂಪರ್ಕ ಮಾಡಿದರು ಎಂದು ಬಾಲಕಿ ಆರೋಪ ಮಾಡಿದ್ದಾಳೆ.
ಅಲ್ಲದೇ, ಸುಮಾರು ಒಂದು ತಿಂಗಳ ಕಾಲ ಆತ ನನ್ನೊಂದಿಗೆ ಸೆಕ್ಸ್ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೇ ನನ್ನ ತಂಗಿಯ ಮೇಲೂ ಕೆಟ್ಟ ದೃಷ್ಟಿ ಇತ್ತು. ತಪ್ಪು ಉದ್ದೇಶದಿಂದ ಆಕೆಯನ್ನು ಮುಟ್ಟುತ್ತಿದ್ದ. ಈ ವಿಷಯವನ್ನು ನನ್ನ ತಾಯಿಗೆ ತಿಳಿಸಿದಾಗ ಅವರು ಮೌನವಾಗಿರಲು ಹೇಳಿದರು ಎಂದು ಬಾಲಕಿ ಆರೋಪಿಸಿದ್ದಾಳೆ.
ನಂತರ ಅವರಿಬ್ಬರ ಕಣ್ತಪ್ಪಿಸಿ ನಾವಿಬ್ಬರೂ ರಾಂಚಿಯಿಂದ ಓಡಿ ಹೋಗಿ ಅಜ್ಜಿಯ ಬಳಿ ಬಂದು ನಮ್ಮ ಕಷ್ಟವನ್ನು ಹೇಳಿಕೊಂಡೆವು ಎಂದು ಸಂತ್ರಸ್ತೆ ಹೇಳಿದ್ದಾರೆ. ಸದ್ಯ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ನ್ಯಾಯಾಲಯದಲ್ಲಿ 164 ಹೇಳಿಕೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಆರೋಪಿ ತಾಯಿ ಮತ್ತು ಆಕೆಯ ಎರಡನೇ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.












Click it and Unblock the Notifications