ಅದೆಷ್ಟೋ ಮಂದಿಯ ಕನಸಿನ ಕಾರು ಖರೀದಿಸಿದ ಕರ್ನಾಟಕದ ಅಳಿಯ ರಣವೀರ್‌ ಸಿಂಗ್‌, ಇದ್ರ ಬೆಲೆ ಕೇಳಿದ್ರೆ ಬೆರಗಾಗ್ತೀರಿ

ಬಾಲಿವುಡ್‌ನ ಸ್ಟಾರ್‌ ನಟ, ಕರ್ನಾಟಕದ ಅಳಿಯ ರಣವೀರ್ ಸಿಂಗ್ ಅವರು ಸದಾ ತಮ್ಮ ವಿಭಿನ್ನ ಸ್ಟೈಲ್ ಹಾಗೂ ಲೈಫ್‌ಸ್ಟೈಲ್‌ನಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಅದೆಷ್ಟೋ ವಾಹನ ಪ್ರೇಮಿಗಳ ಕನಸಿನ ಕಾರನ್ನು ಖರೀದಿಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ತಮ್ಮ ಕಾರುಗಳ ಕಲೆಕ್ಷನ್‌ಗೆ ಹೊಸದೊಂದು ಸೂಪರ್ ಕಾರನ್ನು ಸೇರಿಸಿರುವ ರಣವೀರ್, ಮುಂಬೈ ರಸ್ತೆಗಳಲ್ಲಿ ಅದರಲ್ಲಿ ರೌಂಡ್ಸ್ ಹಾಕುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಬೆಲೆ ಎಷ್ಟು?

ರಣವೀರ್ ಸಿಂಗ್ ಅವರು ಖರೀದಿಸಿರುವುದು ಅಂತಿಂತಾ ಕಾರಲ್ಲ. ಕೋಟ್ಯಂತರ ಕಾರು ಪ್ರೇಮಿಗಳ ಡ್ರೀಮ್ ಕಾರ್ ಆಗಿರುವ 'ಫೆರಾರಿ 296 ಜಿಟಿಬಿ' (Ferrari 296 GTB). ಬರೋಬ್ಬರಿ 6.36 ಕೋಟಿ ರೂಪಾಯಿ ಮೌಲ್ಯದ ಈ ಕಡು ಕಪ್ಪು ಬಣ್ಣದ ಐಷಾರಾಮಿ ಕಾರು ಮುಂಬೈ ರಸ್ತೆಗಿಳಿಯುತ್ತಿದ್ದಂತೆ ಜನರ ಕಣ್ಣು ಕೋರೈಸಿದೆ. ತಮ್ಮ ನೆಚ್ಚಿನ ನಟ ಫೆರಾರಿಯಲ್ಲಿ ರಾಜನಂತೆ ಮುನ್ನುಗ್ಗುತ್ತಿರುವುದನ್ನು ನೋಡಲು ಅಭಿಮಾನಿಗಳು ಹಾಗೂ ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಮುಗಿಬಿದ್ದಿದ್ದರು.

Ranveer Singh

ಕಾರಿನ ವಿಶೇಷತೆ ಏನೆಲ್ಲ?

ಇದು ಫೆರಾರಿ ಕಂಪನಿಯ ಮೊದಲ ಪ್ಲಗ್-ಇನ್ ಹೈಬ್ರಿಡ್ (PHEV) ಸ್ಪೋರ್ಟ್ಸ್ ಕಾರ್ ಆಗಿದೆ. ಅಂದರೆ ಇದು ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಎರಡರ ಸಂಯೋಜನೆಯಲ್ಲಿ ಕೆಲಸ ಮಾಡುತ್ತದೆ. ಇದು ಎಲೆಕ್ಟ್ರಿಕ್ ಮೋಟಾರ್ ಜೊತೆ ಸೇರಿ ಒಟ್ಟಾರೆಯಾಗಿ ಬರೋಬ್ಬರಿ 830 ಹಾರ್ಸ್‌ಪವರ್ (hp) ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕಾರು ಕೇವಲ 2.9 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಇದರ ಗರಿಷ್ಠ ವೇಗ (Top Speed) ಗಂಟೆಗೆ 330 ಕಿಲೋಮೀಟರ್‌ಗಿಂತಲೂ ಹೆಚ್ಚಾಗಿದೆ.

ಜನರನ್ನ ಬೀದಿ ನಾಯಿಗೆ ಹೋಲಿಸಿದ್ರಾ ನಟ ರಾಘವ ಲಾರೆನ್ಸ್‌; ಏನಿದು ವಿವಾದ?
ಜನರನ್ನ ಬೀದಿ ನಾಯಿಗೆ ಹೋಲಿಸಿದ್ರಾ ನಟ ರಾಘವ ಲಾರೆನ್ಸ್‌; ಏನಿದು ವಿವಾದ?

ಹೈಬ್ರಿಡ್ ತಂತ್ರಜ್ಞಾನ ಇರುವುದರಿಂದ, ಕೇವಲ ಎಲೆಕ್ಟ್ರಿಕ್ ಬ್ಯಾಟರಿ ಬಳಸಿ ಯಾವುದೇ ಶಬ್ದವಿಲ್ಲದೆ ಈ ಕಾರನ್ನು ಚಲಾಯಿಸಬಹುದು. ಈ ಮೋಡ್‌ನಲ್ಲಿ ಕಾರಿನ ಗರಿಷ್ಠ ವೇಗ ಗಂಟೆಗೆ 135 ಕಿಲೋಮೀಟರ್ ಆಗಿರುತ್ತದೆ. ಗಾಳಿಯ ಪ್ರತಿರೋಧವನ್ನು ಸೀಳಿ ನುಗ್ಗುವಂತೆ ಇದರ ಬಾಡಿಯನ್ನು ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಕಾರಿನ ಒಳಗಡೆ ಸಂಪೂರ್ಣವಾಗಿ ಡಿಜಿಟಲ್ ಡಿಸ್ಪ್ಲೇ ಇದ್ದು, ಡ್ರೈವರ್‌ಗೆ ರೇಸ್ ಕಾರ್ ಚಲಾಯಿಸಿದ ಅನುಭವ ನೀಡುತ್ತದೆ. ಸ್ಟೀರಿಂಗ್ ವೀಲ್ ಮೇಲೆಯೇ ಹೆಚ್ಚಿನ ಕಂಟ್ರೋಲ್‌ಗಳನ್ನು ನೀಡಲಾಗಿದೆ.

ವಿವಾದದಿಂದ ರಿಲೀಫ್

ರಣವೀರ್ ಸಿಂಗ್ ಹೊಸ ಕಾರು ಖರೀದಿಸಿದ ಬೆನ್ನಲ್ಲೇ ಸಿನಿಮಾ ರಂಗದಲ್ಲೂ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಬಹುನಿರೀಕ್ಷಿತ 'ಡಾನ್ 3' (Don 3) ಸಿನಿಮಾದಿಂದ ರಣವೀರ್ ಸಿಂಗ್ ಹೊರನಡೆದಿದ್ದರಿಂದ ಅವರ ವಿರುದ್ಧ ಚಲನಚಿತ್ರ ಕಾರ್ಮಿಕರ ಒಕ್ಕೂಟ (FWICE) ಅಸಹಕಾರ ನೋಟಿಸ್ ಜಾರಿ ಮಾಡಿತ್ತು. ರಣವೀರ್ ಅವರ ದಿಢೀರ್ ನಿರ್ಧಾರದಿಂದ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್ ಅವರಿಗೆ ಸುಮಾರು 45 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಒಕ್ಕೂಟಕ್ಕೆ ದೂರು ಸಲ್ಲಿಕೆಯಾಗಿತ್ತು. ಆದರೆ, ಈಗ ಒಕ್ಕೂಟವು ರಣವೀರ್ ಮೇಲಿದ್ದ ನೋಟಿಸ್ ಅನ್ನು ಅಧಿಕೃತವಾಗಿ ಹಿಂಪಡೆದಿದೆ. ಈ ಇಡೀ ವಿವಾದದ ಬಗ್ಗೆ ರಣವೀರ್ ಆಗಲಿ ಅಥವಾ ಫರ್ಹಾನ್ ಅಖ್ತರ್ ಆಗಲಿ ಎಲ್ಲೂ ತುಟಿ ಬಿಚ್ಚಿಲ್ಲ.

'ಡಾನ್' ಪಟ್ಟದ ಸುತ್ತ

ಬಾಲಿವುಡ್‌ನ ಅತ್ಯಂತ ಯಶಸ್ವಿ ಆಕ್ಷನ್ ಸರಣಿಯಾದ 'ಡಾನ್' ಚಿತ್ರದ ಮೊದಲ ಎರಡು ಭಾಗಗಳಲ್ಲಿ ಕಿಂಗ್ ಖಾನ್ ಶಾರುಖ್ ಖಾನ್ ನಟಿಸಿದ್ದರು. ಆ ಬಳಿಕ 2023 ರಲ್ಲಿ ಪ್ರಕಟವಾದ 'ಡಾನ್ 3' ಚಿತ್ರಕ್ಕೆ ಶಾರುಖ್ ಜಾಗದಲ್ಲಿ ರಣವೀರ್ ಸಿಂಗ್ ಅವರನ್ನು ನಾಯಕನನ್ನಾಗಿ ಘೋಷಿಸಲಾಗಿತ್ತು. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಬೇಕಿತ್ತು. ಆದರೆ ರಣವೀರ್ ನಿರ್ಗಮನದಿಂದಾಗಿ ಚಿತ್ರದ ಭವಿಷ್ಯದ ಬಗ್ಗೆ ಕುತೂಹಲ ಮೂಡಿದೆ.

ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಹವಾ

ರಣವೀರ್ ಸಿಂಗ್ ಅವರು ಇತ್ತೀಚೆಗಷ್ಟೇ ತೆರೆಕಂಡಿದ್ದ ಅದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' (Dhurandhar: The Revenge) ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಮಾರ್ಚ್ 19ರಂದು ಬಿಡುಗಡೆಯಾಗಿದ್ದ ಈ ಆಕ್ಷನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಮುನ್ನುಗ್ಗಿತ್ತು. ಈ ಚಿತ್ರದಲ್ಲಿ ರಣವೀರ್ ಜೊತೆಗೆ ಸಂಜಯ್ ದತ್, ಆರ್.ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಘಟಾನುಘಟಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+