Rupee Gains: ಅಮೆರಿಕ-ಇರಾನ್ ಶಾಂತಿ ಒಪ್ಪಂದ; ರೂಪಾಯಿ ಮೌಲ್ಯ ಜಿಗಿತ

ನವದೆಹಲಿ: ನಿರಂತರವಾಗಿ ಅಮೆರಿಕಾದ ಡಾಲರ್ ಎದುರು ಕುಸಿಯುತ್ತಿದ್ದ ಭಾರತದ ರೂಪಾಯಿ ಮೌಲ್ಯದಲ್ಲಿ ಭಾರೀ ಬೆಳವಣಿಗೆ ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸತತ ಏರಿಳಿತ ಎದುರಿಸುತ್ತಿದ್ದ ಭಾರತೀಯ ರೂಪಾಯಿಗೆ ಈಗ ಜಾಗತಿಕ ರಾಜತಾಂತ್ರಿಕ ಬೆಳವಣಿಗೆಗಳು ಹೊಸ ಚೈತನ್ಯ ತುಂಬಿವೆ. ಡಾಲರ್ ಎದುರು ನಮ್ಮ ರೂಪಾಯಿ ಬೆಲೆ ಏರಿಕೆ ಕಂಡಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧ ಭೀತಿ, ಉದ್ವಿಗ್ನತೆ ಮತ್ತು ಜಾಗತಿಕ ಅನಿಶ್ಚಿತತೆಗಳ ಕಾರಣದಿಂದಾಗಿ ರೂಪಾಯಿ ಕುಸಿದಿತ್ತು. ಇದೀಗ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಶಾಂತಿ ಒಪ್ಪಂದವು ಜಾಗತಿಕ ವಾಣಿಜ್ಯ ವಲಯದಲ್ಲಿ ಹರ್ಷ ಮೂಡಿಸಿದೆ. ಇದರ ನೇರ ಪರಿಣಾಮವಾಗಿ, ಜೂನ್ 16, 2026ರ ಮಂಗಳವಾರದ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯವು 10 ಪೈಸೆ ಬಲಗೊಂಡು 94.61 ರೂಪಾಯಿ ಮಟ್ಟದಲ್ಲಿ ಆರಂಭವಾಗಿದೆ. ಕಳೆದ ಸೆಷನ್‌ನಲ್ಲಿ 94.71 ರೂಪಾಯಿ ತಲುಪಿದ್ದ ರೂಪಾಯಿ ಮೌಲ್ಯ, ಕೇವಲ ಎರಡು ವಹಿವಾಟು ದಿನಗಳಲ್ಲೇ ಶೇಕಡಾ ಒಂದರಷ್ಟು ಚೇತರಿಸಿಕೊಂಡಿದ್ದು ವಿಶೇಷ ಸಂಗತಿಯಾಗಿದೆ.

Rupee Gains

ರೂಪಾಯಿಯ ಮೌಲ್ಯ ಬಲವರ್ಧನೆಗೆ ಕಾರಣವೇನು?

ಭಾರತೀಯ ರೂಪಾಯಿಯ ಈ ದಿಢೀರ್ ಬಲವರ್ಧನೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಕಂಡು ಬಂದ ಭಾರಿ ಕುಸಿತವೇ ಪ್ರಮುಖ ಕಾರಣವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಮಾತುಕತೆಯು ಯಶಸ್ವಿಯಾಗಿರುವುದರಿಂದ ಜಾಗತಿಕ ಇಂಧನ ಪೂರೈಕೆಗೆ ಇದ್ದ ಅಡ್ಡಿ ಆತಂಕಗಳು ಸಂಪೂರ್ಣವಾಗಿ ದೂರವಾಗಲಿವೆ ಎಂಬ ವಿಶ್ವಾಸ ಹೂಡಿಕೆದಾರರಲ್ಲಿ ಮೂಡಿದೆ.

ಡಾಕ್ಟರ್ ಚೀಟಿ ಇಲ್ಲದೆ ಶೀತ, ಕೆಮ್ಮಿನ ಸಿರಪ್ ಸಿಗಲ್ಲ; ಸ್ವಯಂ ಚಿಕಿತ್ಸೆಗೆ ಬ್ರೇಕ್, ಕೇಂದ್ರದಿಂದ ಹೊಸ ನಿಯಮ
ಡಾಕ್ಟರ್ ಚೀಟಿ ಇಲ್ಲದೆ ಶೀತ, ಕೆಮ್ಮಿನ ಸಿರಪ್ ಸಿಗಲ್ಲ; ಸ್ವಯಂ ಚಿಕಿತ್ಸೆಗೆ ಬ್ರೇಕ್, ಕೇಂದ್ರದಿಂದ ಹೊಸ ನಿಯಮ

ಇನ್ನೂ ತತ್‌ಕ್ಷಣದ ಪರಿಣಾಮವಾಗಿ ಜಾಗತಿಕ ಗುಣಮಟ್ಟದ ಬ್ರೆಂಟ್ ಕಚ್ಚಾ ತೈಲದ ಬೆಲೆ ಒಂದೇ ದಿನದಲ್ಲಿ ಸುಮಾರು ಶೇಕಡಾ 5ರಷ್ಟು ಕುಸಿದಿತ್ತು. ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 82 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಇದು ತೈಲ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತಕ್ಕೆ ಆರ್ಥಿಕವಾಗಿ ದೊಡ್ಡ ನಿರಾಳತೆ ತರಲಿದೆ.

ತೈಲದ ಬೆಲೆ ಇಳಿಕೆ, ರೂಪಾಯಿ ಮೌಲ್ಯದ ಭವಿಷ್ಯ

ಕಡಲ ಮಾರ್ಗದ ಮೂಲಕ ಜಾಗತಿಕ ಇಂಧನ ಸಾಗಣೆಯ ಪ್ರಮುಖ ಕೇಂದ್ರಬಿಂದುವಾಗಿರುವ 'ಹಾರ್ಮುಜ್ ಜಲಸಂಧಿ'ಯನ್ನು (Strait of Hormuz) ಮುಕ್ತವಾಗಿಡಲು ಉಭಯ ದೇಶಗಳು ಸಮ್ಮತಿಸಿರುವುದು ಮಾರುಕಟ್ಟೆಗೆ ಬಲ ನೀಡಿದೆ. ತೈಲ ಸಾಗಣೆಯ ಸರಪಳಿಗೆ ಎದುರಾಗಿದ್ದ ಭದ್ರತಾ ಭೀತಿ ತಿಳಿಗೊಂಡಿರುವುದರಿಂದ ಮುಂಬರುವ ದಿನಗಳಲ್ಲಿ ಭಾರತೀಯ ರೂಪಾಯಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಮುಂಬರುವ ವಾರಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು 94.00 ರೂಪಾಯಿಯಿಂದ 93.80 ರೂಪಾಯಿ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ ಎಂದು ವಿದೇಶಿ ವಿನಿಮಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಕಚ್ಚಾ ತೈಲ ಬೆಲೆ ಮತ್ತಷ್ಟು ಕುಸಿದರೆ ರೂಪಾಯಿ ಮೌಲ್ಯವು 93.50 ರೂಪಾಯಿ ತನಕವೂ ಬಲಗೊಳ್ಳಬಹುದು ಎಂದು ಊಹಿಸಲಾಗಿದೆ.

Abhijit Deepke: ಜೈಪುರದಲ್ಲಿ ಪ್ರತಿಭಟನೆ ವೇಳೆ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಹಲ್ಲೆ: ವಿಡಿಯೋ
Abhijit Deepke: ಜೈಪುರದಲ್ಲಿ ಪ್ರತಿಭಟನೆ ವೇಳೆ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಹಲ್ಲೆ: ವಿಡಿಯೋ

ಯುದ್ಧದ ಬಳಿಕ ದ್ವಿಪಕ್ಷೀಯ ಶಾಂತಿ ಒಪ್ಪಂದದ ಅಂತಿಮ ಹಂತದ ಸೂಕ್ಷ್ಮ ಮತ್ತಷ್ಟು ಮಾಹಿತಿಗಳು ಬಹಿರಂಗಗೊಳ್ಳಬೇಕಿದೆ. ಜಾಗತಿಕ ಭೌಗೋಳಿಕ ರಾಜಕೀಯ ವಲಯದಲ್ಲಿ ಲೆಬನಾನ್ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಅನುಸರಿಸಲಿರುವ ಮುಂದಿನ ನಡೆಯೂ ಕೂಡ ಮಾರುಕಟ್ಟೆಯ ಗತಿಯನ್ನು ನಿರ್ಧರಿಸಲಿದೆ.

ಭಾರತ ತನ್ನ ಶೇಕಡಾ 80ಕ್ಕೂ ಅಧಿಕ ತೈಲ ಅಗತ್ಯತೆಯನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ, ಸಾಗರೋತ್ತರ ಮಾರುಕಟ್ಟೆಯ ಈ ಧನಾತ್ಮಕ ಸ್ಥಿತ್ಯಂತರಗಳು ದೇಶೀಯ ಹಣದುಬ್ಬರ ನಿಯಂತ್ರಣ ಬಿಗಿಗೊಳಿಸಲಿವೆ. ವಿದೇಶಿ ವಿನಿಮಯ ಮೀಸಲು ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಆರ್ಥಿಕ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+