Yellow Line: ನಮ್ಮ ಮೆಟ್ರೋಗೆ ಬಂತು 13ನೇ ರೈಲು, ಮೊದಲ ವಾರ್ಷಿಕೋತ್ಸವಕ್ಕೆ ಭರ್ಜರಿ ಗುಡ್‌ನ್ಯೂಸ್ ಸಾಧ್ಯತೆ

ಬೆಂಗಳೂರು: ಐಟಿ ಕೇಂದ್ರ ಬೆಂಗಳೂರಿನಲ್ಲಿ ಐಟಿ ಕಾರಿಡಾರ್‍‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕಾಗಿ ಮತ್ತೊಂದು ಹೊಸ ರೈಲು ಆಗಮಿಸಿದೆ. ಟಿಟಾಗರ್‍‌ನಿಂದ ಬೆಂಗಳೂರು ಮೆಟ್ರೋ ಹೆಬ್ಬಗೋಡಿ ಡಿಪೋಗೆ ಆಗಮಿಸಿರುವ ಡ್ರೈವರ್ ಲೆಸ್ ರೈಲನ್ನು ಕೆಳಗಿಳಿಸಿ ಜೋಡಿಸುವ ಪ್ರಕ್ರಿಯೆ ನಡೆದಿದೆ. ಕೆಲವೇ ವಾರಗಳಲ್ಲಿ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಸಹ ಸಿಗಲಿದೆ.

ಆರ್.ವಿ.ರಸ್ತೆ-ಬೊಮ್ಮಸಂದ್ರ ನಿಲ್ದಾಣದವರೆಗಿನ ಎಲೆಕ್ಟ್ರಾನಿಕ್ ಸಿಟಿ ಹಳದಿ ಮಾರ್ಗದಲ್ಲಿ ಸದ್ಯ ಒಟ್ಟು ಎಂಟು ರೈಲುಗಳು ಸೇವೆ ನಿಡುತ್ತಿವೆ. ಇತ್ತೀಚೆಗೆ (ಜೂನ್ 3) ಎರಡು ಹೊಸ ರೈಲುಗಳ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಒಟ್ಟು ಹತ್ತು ರೈಲುಗಳು ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಇದೀಗ ಪಶ್ಚಿಮ ಬಂಗಾಳದ ಟಿಟಾಗರ್ ರೈಲ್ ಸಿಸ್ಟಮ್ ಕಂಪನಿಯಿಂದ ಆರು ಬೋಗಿಗಳ ಹೊಸ 13ನೇ ಹೊಸ ರೈಲು ಸೆಟ್ ರವಾನಿಸಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಬರಮಾಡಿಕೊಂಡಿದ್ದಾರೆ.

Electronic City Namma Metro

ರಾತ್ರಿ ವೇಳೆ ಟ್ರಯಲ್ ರನ್

ಈ ರೈಲನ್ನು ಜೋಡಿಸಿ ಇನ್ಸ್‌ಪೆಕ್ಷನ್ ಬೇ ಲೈನ್‌ಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಟ್ರಯಲ್ ರನ್ ಕಾರ್ಯ ಆರಂಭಿಸಲಾಗುತ್ತದೆ. ಇಂಜಿನ್ ಕಾರ್ಯಕ್ಷಮತೆ, ಸಿಗ್ನಲಿಂಗ್ ವ್ಯವಸ್ಥೆ, ವೇಗ ಎಲ್ಲವನ್ನು ಪರೀಕ್ಷಿಸಲಾಗುತ್ತದೆ. ಹಗಲು ಮೆಟ್ರೋ ಪ್ರಯಾಣಿಕರಿಗೆ ತೊಂದರೆ ಆಗದಂತೆ ರಾತ್ರಿ ವೇಳೆ ಸಾಮಾನ್ಯವಾಗಿ ಹೊಸ ಮೆಟ್ರೊ ರೈಲುಗಳ ಪರೀಕ್ಷೆ ಕಾರ್ಯ ನಡೆಯುತ್ತದೆ. ಮುಂದಿನ ಜುಲೈ ಮಧ್ಯಭಾಗದ ಹೊತ್ತಿಗೆ ಇದರ ಪ್ರಾಯೋಗಿಕ ಪರೀಕ್ಷೆ ಮುಗಿಯಲಿವೆ.

ಬೆಂಗಳೂರು RRTS vs ನಮ್ಮ ಮೆಟ್ರೋ: ತುಮಕೂರು ಮತ್ತು ಅದರಾಚೆಗೆ ಪ್ರಯಾಣಿಕರಿಗೆ ಯಾವ ಸಾರಿಗೆ ವ್ಯವಸ್ಥೆ ಬೆಸ್ಟ್?
ಬೆಂಗಳೂರು RRTS vs ನಮ್ಮ ಮೆಟ್ರೋ: ತುಮಕೂರು ಮತ್ತು ಅದರಾಚೆಗೆ ಪ್ರಯಾಣಿಕರಿಗೆ ಯಾವ ಸಾರಿಗೆ ವ್ಯವಸ್ಥೆ ಬೆಸ್ಟ್?

ಪ್ರಗತಿಯಲ್ಲಿವೆ 11 ಮತ್ತು 12ನೇ ಮೆಟ್ರೋಗಳ ಪರೀಕ್ಷೆ

ಈ ಮಾರ್ಗದಲ್ಲಿ ಹತ್ತು ರೈಲುಗಳಿಂದ ಪೀಕ್ ಸಮಯದಲ್ಲಿ ರೈಲುಗಳ ಅವರ್ತನ 7 ನಿಮಿಷಕ್ಕೆ ಇಳಿಕೆ ಆಗಿದೆ. ಹೊಸದಾಗಿ ಬಂದ 11 ಮತ್ತು 12ನೇ ಮೆಟ್ರೋ ಸೆಟ್‌ಗಳ ತಪಾಸಣೆ, ಟ್ರಯಲ್ ರನ್ ಕೆಲಸಗಳು ನಡೆಯುತ್ತಿವೆ. ಅವುಗಳು ಕಾರ್ಯಾಚರಣೆಗೆ ನಿಯೋಜಿಸಲು ಇನ್ನೂ ಕೆಲಸ ಸಮಯ ಹಿಡಿಯಲಿದೆ. ಅಷ್ಟೊತ್ತಿಗೆ 13ನೇ ರೈಲು ಪರೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಆಗಸ್ಟ್‌ಗೆ ಪ್ರಯಾಣಿಕರಿಗೆ ಗುಡ್‌ನ್ಯೂಸ್

ಇನ್ನು ಒಪ್ಪಂದಂತೆ 14 ಮತ್ತು 15ನೇ ರೈಲುಗಳನ್ನು ಜುಲೈ ಅಂತ್ಯದ ಹೊತ್ತಿಗೆ ತಯಾರಕ ಟಿಟಾಗರ್ ಕಂಪನಿ ಬೆಂಗಳೂರಿಗೆ ರವಾನಿಸುವ ಸಾಧ್ಯತೆಗಳಿವೆ. ಆಗಸ್ಟ್ 10ರಂದು ಹಳದಿ ಮಾರ್ಗ ಸಾರ್ವಜನಿಕರಿಗೆ ತೆರೆದು ಒಂದು ವರ್ಷವಾಗಲಿದೆ. ಮೊದಲ ವಾರ್ಷಿಕೋತ್ಸವ ಪ್ರಯುಕ್ತ ಎಲ್ಲ 15 ರೈಲುಗಳನ್ನು ಸಂಚಾರಕ್ಕೆ ನಿಯೋಜಿಸುವ ಲಕ್ಷಣಗಳು ಇವೆ. ಅಲ್ಲಿಗೆ ಪೀಕ್ ಸಮಯದಲ್ಲಿ 5 ನಿಮಿಷಗಳಿಗೆ ಒಂದು ರೈಲು, ಸಾಮಾನ್ಯ ಸಮಯದಲ್ಲಿ ಹತ್ತು ನಿಮಷಕ್ಕೆ ಒಂದು ರೈಲು ಹಳದಿ ಮಾರ್ಗದಲ್ಲಿ ಸಂಚರಿಸಲಿವೆ. ಎಲ್ಲವು ಅಂದುಕೊಂಡಂತಾದರೆ ಮುಂದಿನ ಒಂದೂವರೆ ತಿಂಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಪ್ರಯಾಣಿಕರಿಗೆ ಭರ್ಜರಿ ಗುಡ್‌ನ್ಯೂಸ್ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+