ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಕುಟ್ ಗೆಣೆಕಾರನಿಂದ ಪದವಿ ವಿದ್ಯಾರ್ಥಿನಿಯ ರೇಪ್

By Srinath
|
Google Oneindia Kannada News

delhi-orkut-boy-friend-molests-mewat-haryana-student
ನವದೆಹಲಿ,ಜ.17: ಅವರಿಬ್ಬರದೂ ಸಾಮಾಜಿಕ ಜಾಲತಾಣ 'Orkut' ಮೂಲದ ಗೆಳೆತನ. ಅದು ಮುಂದೆ ಪ್ರಣಯಕ್ಕೆ ತಿರುಗಿದ ಬಳಿಕ ಯುವಕ ಆ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಅವಳಿನ್ನೂ ಪದವಿ ವ್ಯಾಸಂಗದ ವಿದ್ಯಾರ್ಥಿನಿ. 'Orkut' ಮೂಲಕ 24 ವರ್ಷದ ಇಸ್ಲಾಮುದ್ದೀನ್ ಎಂಬ ಸೇಲ್ಸ್ ಎಕ್ಸಿಕ್ಯೂಟೀವ್ ಜತೆ ಪರಿಚಯ ಬೆಳೆಸಿದ್ದಾಳೆ. ಇಬ್ಬರೂ ಹರಿಯಾಣಾದ ಮೇವಾತ್ ಮೂಲದವರು. ಇಸ್ಲಾಮುದ್ದೀನ್ ಕಳೆದ ವರ್ಷ ಮೇ ತಿಂಗಳಲ್ಲಿ ಸದರಿ ಪದವಿ ವಿದ್ಯಾರ್ಥಿನಿಯನ್ನು ಅಚಾನಕ್ಕಾಗಿ ಭೇಟಿ ಮಾಡಿ, ಮೊಬೈಲ್ ನಂಬರುಗಳನ್ನು ವಿನಿಮಯ ಮಾಡಿಕೊಂಡಿದ್ದಾನೆ.

ಅದೇ ವೇಳೆ ತಾನು ಪರೀಕ್ಷೆ ಬರೆಯಲು ದೆಹಲಿಗೆ ತೆರಳುತ್ತಿರುವುದಾಗಿ ಯುವತಿಯು ಆರೋಪಿ ಇಸ್ಲಾಮುದ್ದೀನನಿಗೆ ಹೇಳಿಕೊಂಡಿದ್ದಾಳೆ. ದೆಹಲಿಯಲ್ಲಿ ಬಸ್ ಸ್ಟಾಪಿನಲ್ಲಿ ತನಗಾಗಿ ಕಾಯುತ್ತಿದ್ದ ಇಸ್ಲಾಮುದ್ದೀನನ್ನು ಕಂಡವಳೇ ಯುವತಿ ಹಿರಿಹಿರಿಹಿಗ್ಗಿದ್ದಾಳೆ.

ಇದರ ಸದುಪಯೋಗಪಡಿಸಿಕೊಂಡ ಇಸ್ಲಾಮುದ್ದೀನ್ ಸೀದಾ ಅವಳನ್ನು ದಿಲ್ಲಿ ತೋರಿಸ್ತೀನಿ ಬಾ ಎಂದು ಕರೆದೊಯ್ದಿದ್ದಾನೆ. sightseeing ಎಲ್ಲ ಆದ ಮೇಲೆ ನಿಜಾಮುದ್ದೀನ್ ಬಳಿ ಹೋಟೆಲ್ ರೂಂ ಮಾಡಿದ್ದಾರೆ. ಅಲ್ಲಿ ಮತ್ತುಬರಿಸುವ ಔಷಧ ಬೆರೆಸಿದ ತಂಪು ಪಾನೀಯ ನೀಡಿದ ಇಸ್ಲಾಮುದ್ದೀನ್ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ.

'ಸರಿ ಏನೋ ಆಗ್ಹೋಗಿದೆ. ಮುಂದೆ ನಾನು ನಿನ್ನನ್ನೇ ಮದ್ವೆಯಾಗ್ತೀನಿ ಕಣಮ್ಮಿ' ಎಂದು ಪುಸಲಾಯಿಸಿದ ಇಸ್ಲಾಮುದ್ದೀನ್ ಅವಳನ್ನು ಸಮಧಾನಪಡಿಸಿ, ಊರಿಗೆ ಸಾಗಹಾಕಿದ್ದಾನೆ. ಅದಾದ ನಂತರ ಯುವತಿ ಅನೇಕ ಬಾರಿ ಅವಳನ್ನು ಸಂಧಿಸಿ, ಮದುವೆ ಬಗ್ಗೆ ಪ್ರಸ್ತಾಪಿಸಲು ಯತ್ನಿಸಿದ್ದಾಳೆ. ಆದರೆ ಅವನು aviod ಮಾಡಿದ್ದಾನೆ.

ಆದರೆ ಇಸ್ಲಾಮುದ್ದೀನ್ ಅದಾಗಲೇ ಮದುವೆಯಾಗಿದ್ದಾನೆ ಎಂಬುದನ್ನು ಕಳೆದ ಡಿಸೆಂಬರಿನಲ್ಲಿ ಯುವತಿ ಪತ್ತೆಹಚ್ಚಿದ್ದಾಳೆ. ತಾನು ಮೋಸಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಮೇವಾತ್ ಎಸ್ಪಿಯನ್ನು ಭೇಟಿಯಾಗಿ ಹೀಗ್ಹೀಗೆ ಎಂದು ಹೇಳಿದ್ದಾಳೆ.

ಆದರೆ ಮೇವಾತ್ SP ಇದು ನಮ್ಮ ಲಿಮಿಟ್ಸ್ ನಲ್ಲಿ ನಡೆದಿರುವುದಲ್ಲ. ಹಾಗಾಗಿ ದೆಹಲಿಯ ನಿಜಾಮುದ್ದೀನ್ ಪೊಲೀಸರೇ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಜತೆಗೆ ದೆಹಲಿ ಪೊಲೀಸರು ಮೇವಾತ್ ಗೇ ಬಂದು ಬಾಧಿತ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಕೋರಿದ್ದಾರೆ.

ಆ ದೂರಿನನ್ವಯ ಜನವರಿ 5ರಂದು ಕಾರ್ಯಾಚರಣೆಗಿಳಿದ ದಿಲ್ಲಿ ಪೊಲೀಸರು ಆರೋಪಿ ಇಸ್ಲಾಮುದ್ದೀನನ್ನು ಬಂಧಿಸಿ, ದೆಹಲಿಗೆ ಕರೆತಂದಿದ್ದಾರೆ.

English summary
Delhi -Orkut Boyfriend molests Mewat Haryana graduate student. Islamudin, 24, who hails from Mewat in Haryana, works in a mobile company as a sales executive. In May last year, he befriended the 22-year-old graduation student on Orkut and later on molested her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X