• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಸ್ಲೀಮಾಳಿಂದ ಸನ್ನಿಲಿಯೋನ್, ಪೂನಂಪಾಂಡೆ ತರಾಟೆಗೆ

By Srinath
|

ಮುಂಬೈ, ಜೂನ್ 5: ವಿವಾದಾತ್ಮಕ ಮಹಿಳಾ ಲೇಖಕಿ 'ಲಜ್ಜಾ' ಖ್ಯಾತಿಯ ತಸ್ಲೀಮಾ ನಸ್ರೀನ್ ಭಾರತದಲ್ಲಿ ದಿಢೀರ್ ಖ್ಯಾತಿಗೆ ಬಂದಿರುವ ನೀಲಿ ಚಿತ್ರಗಳ ನಟಿ ಸನ್ನಿ ಲಿಯೋನಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹದಿ ವಯಸ್ಕರ ಚಿತ್ರ ನಟಿಯೊಬ್ಬಳು ಬಾಲಿವುಡ್ ಪ್ರವೇಶಿಸಿದರುವ ದುರದೃಷ್ಟಕರ. ಲೈಂಗಿಕ ಚಿತ್ರಗಳ ನೀಲಿ ತಾರೆಯನ್ನು celebrityಯನ್ನಾಗಿ ಮಾಡುತ್ತಿದ್ದೀರಿ. ಇದರಿಂದ ವಿಜ್ಞಾನಿಯೋ, ಇಂಜಿನಿಯರೋ ಅಥವಾ ಡಾಕ್ಟರ್ ಆಗುವುದನ್ನು ಬಿಟ್ಟು ನಿಮ್ಮ ಹೆಣ್ಣು ಮಕ್ಕಳನ್ನು ಅವಳ (ಸನ್ನಿ ಲಿಯೋನ್) ರೀತಿಯಲ್ಲೇ ಲೈಂಗಿಕ ಚಿತ್ರಗಳ ತಾರೆಯನ್ನಾಗಿಸಲು ಪ್ರೇರೇಪಿಸುತ್ತಿದ್ದೀರಿ ಎಂದಾಯಿತು ಎಂದು ತಸ್ಲೀಮಾ ಟ್ವಿಟ್ಟರಿನಲ್ಲಿ ಝಾಡಿಸಿದ್ದಾರೆ.

ಸಾರ್ವಜನಿಕ ಸಂಭೋಗಕ್ಕೂ ಪೂನಂ ಪಾಂಡೆ ಸಿದ್ಧ!: ಈ ಹಿಂದೆ ಇದೇ ತಸ್ಲೀಮಾ, ಮತ್ತೊಬ್ಬ ಹಾಟ್ ಬೆಡಗಿ ಪೂನಂ ಪಾಂಡೆಯ cheap publicity ವಿರುದ್ಧ ಕೆಂಡಕಾರಿದ್ದಳು. 'ಪೂನಂ ಸಂಪೂರ್ಣ ನಗ್ನಳಾದಳು. ಆದರೂ ಅವಳಿಗೆ ತೃಪ್ತಿಯಾಗಿಲ್ಲ. ಈ ಹಿಂದೆ ಯಾರೂ ಮಾಡದಂತಹ ಕೊಳಕು ಗಿಮಿಕ್ ಗಳನ್ನು ಮಾಡಲೂ ಪೂನಂ ಹೇಸುವುದಿಲ್ಲ. ಬಹಿರಂಗವಾಗಿ, ಸಾರ್ವಜನಿಕರೆದುರು ಸಂಭೋಗ ಮಾಡಿಸಿಕೊಳ್ಳುವುದಕ್ಕೂ ಅವಳು ಸಿದ್ಧವಾಗಿದ್ದಾಳೆ' ಎಂದು ತಸ್ಲೀಮಾ ತನ್ನ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾಳೆ.

ಈ ನಟಿಯ ಟ್ವೀಟ್ ಗಳಿಗೆ ಉತ್ತರವಾಗಿ ತಸ್ಲೀಮಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ. ನಿಮ್ಮ ಮನೋಭಾವವೆಂಬುದು ಒಳುಡುಪಿನಂತೆ. ಅದನ್ನು ನೀವು ಧರಿಸಬೇಕು. ಆದರೆ ಅದನ್ನು ತೋರಿಸಬಾರದು ಅಷ್ಟೇ. ಹಾಗಾದಲ್ಲಿ ಸರಿಯಾದ ಮನೋಭಾವವನ್ನು ಹೆಚ್ಚು ಹೆಚ್ಚಾಗಿ ವ್ಯಕ್ತಪಡಿಸಲು ಇಚ್ಛಿಸುತ್ತೇನೆ' ಎಂದು ಟ್ವೀಟ್ ಮಾಡಿರುವ ಅತ್ಯಂತ ವಿವಾದಿತ ತಸ್ಲೀಮಾ ಈ ಟ್ವೀಟ್ ಜತೆಗೆ ತನ್ನದೇ ಕೊಳಕಾದ ಚಿತ್ರವನ್ನು (ಒಳ ಉಡುಪಿನಲ್ಲಿರುವ ತಸ್ಲೀಮಾ, ಚಿತ್ರ ನೋಡಿ) ಹಾಕಿದ್ದಾಳೆ.

ಪೂನಂ ಪಾಂಡೆ 'ಸಿದ್ಧ' ಉತ್ತರ: ಮಹಿಳೆಯರ ಗೌರವ ಕಾಪಾಡಲು ನಾನು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ; ಯಾವುದೇ ಪ್ರಚಾರಕ್ಕೆ ಅಲ್ಲ. ನಿನ್ನ ವಿಡಿಯೋ ನೋಡಿ ಈ ಕಟು ವಿಮರ್ಶೆ ಮಾಡಿರುವೆ ಎಂದು ತಸ್ಲೀಮಾ, ಪೂನಂ ಬಗ್ಗೆ ಬರೆದಿದ್ದಾಳೆ.

ತಸ್ಲೀಮಾಳ ಟ್ವೀಟ್ ಗೆ ಪೂನಂ ಪಾಂಡೆ ಏನಂತ ಉತ್ತರ ಕೊಟ್ಟಿರಬಹುದು ಊಹಿಸಿ? ಏನೋಪಾ ಪೂನಂ ಕೊಟ್ಟಿರುವ ತಿರುಗೇಟಿನ ಬಗ್ಗೆ ನೀವೇ ಓದಿಕೊಳ್ಳಿ: F*** what people say... Do YOU. Some people will hate you for it, but it's the ones that love you for it that are more important.

English summary
Bangladeshi feminist writer Taslima Nasreen slammed porn star Sunny Leone for her rising popularity across the country. The writer also slammed Kingfisher model Poonam Pandey for cashing in on cheap publicity. Poonam Pandey has given reply tweet to Taslima's tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X