ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ತೊರೆಯಲು ತಸ್ಲೀಮಾಗೆ ಸೂಚನೆ

By Mahesh
|
Google Oneindia Kannada News

Taslima Nasrin
ನವದೆಹಲಿ, ಜು.23: ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಸ್ಲೀಮಾ ವೀಸಾ ಅವಧಿ ಮುಂದಿನ ತಿಂಗಳು ಅಂತ್ಯಗೊಳ್ಳುವುದರಿಂದ ದೇಶ ತೊರೆಯುವಂತೆ ತಸ್ಲೀಮಾಗೆ ಸರ್ಕಾರ ಸೂಚನೆ ನೀಡಿದೆ. ಜತೆಗೆ ವೀಸಾ ವಿಸ್ತರಣೆ ಬಯಸಿ ಅರ್ಜಿ ದಾಖಲಿಸುವಂತೆ ಆದೇಶಿಸಿದೆ.

ಭಾರತದಲ್ಲೇ ಶಾಶ್ವತವಾಗಿ ನೆಲೆಸಲು ಬಯಸಿರುವ ಮಾಜಿ ಡಾಕ್ಟರ್ ಹಾಲಿ ಲೇಖಕಿ ತಸ್ಲೀಮಾ ಭಾರತದ ವೀಸಾ ಪಡೆದಿದ್ದಾರೆ. ಆದರೆ ಇದರ ಅವಧಿ ಆ.16ಕ್ಕೆ ಅಂತ್ಯಗೊಳ್ಳಲಿದೆ. ಯಾವುದೇ ಕಾರಣಕ್ಕೂ ಆ.16ರ ನಂತರ ದೇಶದಲ್ಲಿರಲು ತಸ್ಲೀಮಾಗೆ ಅವಕಾಶ ನೀಡಲಾಗುವುದಿಲ್ಲ ಎಂದು ಈಗಾಗಲೇ ಸರ್ಕಾರ ಸ್ಪಷ್ಪಪಡಿಸಿದೆ.

ಸದ್ಯ ಸ್ವೀಡನ್‌ನ ಪಾಸ್‌ಪೋರ್ಟ್ ಪಡೆದಿರುವ ತಸ್ಲೀಮಾಗೆ ಅಲ್ಲಿನ ಸರ್ಕಾರವೇ ಆಶ್ರಯ ನೀಡಿದೆ. 2007ರಲ್ಲಿ ಮುಸ್ಲಿಂ ಸಂಘಟನೆಯ ಗುಂಪೊಂದು ತಸ್ಲೀಮಾ ಮೇಲೆ ಹಲ್ಲೆಗೆ ಮುಂದಾಗಿತ್ತು. ಇದಾದ ನಂತರ ಸರ್ಕಾರ ತಸ್ಲೀಮಾಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು.

1994 ರಲ್ಲಿ ತಸ್ಲೀಮಾ ಲಜ್ಜಾ ಪುಸ್ತಕ ಬರೆದ ನಂತರ ಆಕೆಯ ಹತ್ಯೆ ಯತ್ನ ನಡೆಯುತ್ತಿದೆ. ಇತ್ತೀಚೆಗೆ ತಸ್ಲೀಮಾ ಲೇಖನ ಅನುವಾದವನ್ನು ಕನ್ನಡ ದಿನಪತ್ರಿಕೆ ತನ್ನ ಸಾಪ್ತಹಿಕದಲ್ಲಿ ಪ್ರಕಟಿಸಿದ್ದು, ಸಾಕಷ್ಟು ಗಲಭೆ, ಗೊಂದಲಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X