LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ
LPG Cylinder Crisis in India: ಬದಲಾದ ಸನ್ನಿವೇಶದಲ್ಲಿ ಎಲ್‌ಜಿಪಿ ಸಿಲಿಂಡರ್ ಸರಬರಾಜು, ಲಭ್ಯತೆ, ಬೆಲೆ ಏರಿಕೆಯದ್ದೇ ಚರ್ಚೆ ಆಗುತ್ತಿದೆ. ಕರ್ನಾಟಕ ಬಜೆಟ್ ಮೇಲಿನ ಅಧಿವೇಶನದಲ್ಲೂ ಈ ವಿಚಾರ ಮಾರ್ದನಿಸಿದೆ. ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೇ ರಾಜ್ಯಗಳಲ್ಲೂ ಅಡುಗೆ ಅನಿಲ ಪೂರೈಕೆ ಕೊರತೆ, ದರ ಹೆಚ್ಚಳದ ಆತಂಕ ಶುರುವಾಗಿದೆ. ವಿವಿಧ ಗ್ಯಾಸ್ ಏಜೆನ್ಸಿಗಳ ಸಹಾಯವಾಣಿ, ಬುಕ್ಕಿಂಗ್ ಸಂಖ್ಯೆಯ ಸೇವೆ ಸಹ ಸ್ಥಗಿತಗೊಂಡಿವೆ. ಹೀಗಾಗಿ ಅಡುಗೆ ಮನೆಯಲ್ಲಿ ಮಹಿಳೆಯರು ಮಾತ್ರವಲ್ಲ ಬಸ್‌ಗಳಲ್ಲಿ ಪುರುಷರು ಎಲ್‌ಪಿಜಿ ಬಗ್ಗೆ ಮಾತನಾಡುವಂತಾಗಿದೆ. ಇದಕ್ಕೆ ಕಾರಣ ಮದ್ಯಪ್ರಾಚ್ಯದಲ್ಲಿನ ಯುದ್ಧ.
ಇರಾನ್-ಇಸ್ರೇಲ್ ಮತ್ತು ಯುಎಸ್ ಮಧ್ಯದ ಯುದ್ಧದ ವ್ಯತಿರಕ್ತ ಪರಿಣಾಮವು ಕೇವಲ ಆ ದೇಶಗಳಿಗೆ ಮಾತ್ರವಲ್ಲದೇ ಭಾರತ ಸೇರಿ ಕೊಲ್ಲಿ ರಾಷ್ಟ್ರಗಳಿಂದ ತೈಲ ಆಮದು ಮಾಡಿಕೊಳ್ಳುವ ಹಲವು ರಾಷ್ಟ್ರಗಳ ಮೇಲೂ ಆಗಿದೆ. ಆತಂಕದ ವಿಷಯವೆಂದರೆ ಇರಾನ್‌ನ ತೈಲ ಕೇಂದ್ರಗಳ ಮೇಲೆ ದಾಳಿ ಮುಂದುವರಿದಿದೆ. ಹೀಗಾಗಿ ದೇಶದಲ್ಲಿ 'ಅಡುಗೆ ಅನಿಲ ತುರ್ತು ಪರಿಸ್ಥಿತಿ' ವಾತಾವರಣ ನಿರ್ಮಾಣವಾಗಿದೆ. ಇತ್ತ ಕೇಂದ್ರ ಸರ್ಕಾರ, ಖಾಸಗಿ ಕಂಪನಿಗಳು ಅನಿಲ ಕೊರತೆ ಆಗದಂತೆ ನೋಡಿಕೊಳ್ಳಲು ಕ್ರಮ ವಹಿಸುತ್ತಿವೆ.

ಆನ್‌ಲೈನ್ ಗ್ಯಾಸ್ ಬುಕ್ಕಿಂಗ್, ಸಹಾಯವಾಣಿ ಸ್ಥಗಿತ! ಮುಂದೇನು?
ತೈಲ ಪೂರೈಕೆ ಕೊರತೆ ಕಾರಣದಿಂದ ಇಂಧನ, ಅಡುಗೆ ಅನಿಲ ಪೂರೈಕೆ ಸರಪಳಿ ಮೇಲೆ ಅಗಾಧ ಪ್ರಭಾವ ಉಂಟಾಗಿದೆ. ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್, ಇಂಡೇನ್ ಗ್ಯಾಸ್ ಏಜೆನ್ಸಿ ನೀಡಿರುವ ಬುಕಿಂಗ್ ಸಂಖ್ಯೆಗಳು, ಇತರ ಡಿಜಿಟಲ್ ಬುಕಿಂಗ್ ಸೇವೆ ಸ್ಥಗಿತಗೊಂಡಿದೆ. ಸಹಾಯವಾಣಿ ಸಂಖ್ಯೆಗಳು ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ. ಹೀಗಾಗಿ ಗ್ಯಾಸ್ ಬುಕಿಂಗ್ ಸಮಸ್ಯೆ ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರು, ದೆಹಲಿ ಮತ್ತು ಲಕ್ನೋ ಸೇರಿದಂತೆ ಹಲವು ನರಗಳಲ್ಲಿ ಎಲ್‌ಪಿಜಿ ವಿತರಣಾ ಏಜೆನ್ಸಿಗಳ ಹೊರಗೆ ಜನ ಸಿಲಿಂಡರ್ ಪಡೆಯಲು ಸರತಿ ಸಾಲುಗಳಲ್ಲಿ ನಿಂತಿರುವುದು ಕಂಡು ಬಂದಿದೆ.
ಅಡುಗೆ ಅನಿಲ ಬಳಕೆದಾರರಲ್ಲಿ ಹೆಚ್ಚಿದ ಆತಂಕ
ಮೊದಲು ಹೋದರೆ ತನಗೂ ಸಿಗುತ್ತದೆ. ತಡವಾದರೆ ಗ್ಯಾಸ್ ಖಾಲಿ ಆಗಬಹುದೆಂಬ ಆತಂಕದಿಂದ ಮಹಿಳೆಯರು, ಮನೆ ಯಜಮಾನರು ಏಜೆನ್ಸಿಗಳ ಮುಂದೆ ಕ್ಯೂ ನಿಂತಿದ್ದಾರೆ. ಡಿಜಿಟಲ್ ಬುಕಿಂಗ್ ಸಮಸ್ಯೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಹಣ ಹೆಚ್ಚು ನೀಡಿದರೂ ಗ್ಯಾಸ್ ಸಿಗುತ್ತಾ? ಇಲ್ಲವಾ? ಎಂಬ ಆತಂಕ ಕ್ಯೂನಲ್ಲಿ ನಿಂತವರ ಮೊಗದಲ್ಲಿ ಕಾಣಿಸಿತು. ಇರಾನ್‌ನ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಮತ್ತು ತೈಲ ಪೂರೈಕೆಯ ಮೇಲಿನ ಪರಿಣಾಮದಿಂದ ದೇಶದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯೂ ಭೀತಿಗೆ ಕಾರಣವಾಗಿದೆ.
ಇದು ತಾತ್ಕಾಲಿಕ ಸಮಸ್ಯೆಯಾ? ಸಿಬ್ಬಂದಿ ಹೇಳಿದ್ದೇನು?
ಆನ್‌ಲೈನ್ ಪೋರ್ಟಲ್‌ನಲ್ಲಿ ಬುಕಿಂಗ್ ವೇಳೆ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಲಕ್ನೋದ ತಿಲಕ್ ನಗರ ಮತ್ತು ಲಜ್‌ಪತ್ ನಗರದಲ್ಲಿ ಅನಿಲ ವಿತರಕ ಏಜೆನ್ಸಿ ಕಚೇರಿಗಳ ಮುಂದೆ ಗ್ರಾಹಕರು ಬಸಿಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಾ ನಿಂತಿದ್ದರು. ಇದು ತಾತ್ಕಾಲಿಕ ದೋಷದಿಂದಾಗಿ ಉಂಟಾದ ಸಮಸ್ಯೆ ಎಂದು ಏಜೆನ್ಸಿ ಸಿಬ್ಬಂದಿ ತಿಳಿಸಿದ್ದಾರೆ.

ಎದುರಾದ ಸರ್ವರ್ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದೆಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಡಿಜಿಟಲ್ ವ್ಯವಸ್ಥೆ ಪುನಃಸ್ಥಾಪಿಸಿದ ನಂತರ ಬುಕಿಂಗ್ ಸೇವೆ ಪುನಃ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಈ ಸುದ್ದಿ ಬಿತ್ತರವಾಗುವ ಸಮಯದಲ್ಲಿ ಬೆಂಗಳೂರು, ದೊಡ್ಡಬಳ್ಳಾಪುರ, ಮೈಸೂರು, ಬೆಂಗಳೂರಿನ ಹಲವೆಡೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೇರೆ ಬೇರೆ ರಾಜ್ಯಗಳ ಹಲವು ಕಡೆಗಳಲ್ಲಿ ಸಮಸ್ಯೆ ಉಂಟಾಗಿದೆ.
ಗ್ಯಾಸ್ ಅಗತ್ಯವಿರುವ ಗ್ರಾಹಕರು ಹೇಳೋದೇನು?
ಸಾಕಷ್ಟು ಬಾರಿ ಪ್ರಯತ್ನಿಸಿದರೂ ಇಂಡೇನ್ ಆಯಿಲ್ ಕಾರ್ಪೊರೇಷನ್ ಬುಕಿಂಗ್ ಸಹಾಯವಾಣಿಗೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಇದೀಗ ನಾನು ಹಿಂದೂಸ್ತಾನ್ ಪೆಟ್ರೋಲಿಯಂ ಮೂಲಕ ಸಿಲಿಂಡರ್ ಅನ್ನು ಬ್ಯಾಕಪ್ ಆಗಿ ಬುಕ್ ಮಾಡಿದ್ದೇನೆ. ನಮಗೆ ಹೊಸ ಗ್ಯಾಸ್ ಸಿಗುವ ಹೊತ್ತಿಗೆ ಮನೆಯಲ್ಲಿದ್ದ ಗ್ಯಾಸ್ ಖಾಲಿಯಾದರೆ ದೈನಂದಿನ ಅಡುಗೆ ತಯಾರಿ, ನಿರ್ವಹಿಸುವುದು ಕಷ್ಟಕರವಾಗುತ್ತದೆ ಎಂದು ಲಕ್ನೋದ ವ್ಯಕ್ತಿಯೊಬ್ಬರು ತಿಳಿಸಿದರು. ನಾವು ಹಲವು ಬಾರಿ ಪ್ರಯತ್ನಿಸಿದರೂ ಆನ್‌ಲೈನ್ ಬುಕಿಂಗ್ ಸಾಧ್ಯವಾಗಿಲ್ಲ. ನಮಗೆ ಏಜೆನ್ಸಿ ಕಡೆಯಿಂದಲೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಮತ್ತೊಬ್ಬು ಅಳಲು ತೋಡಿಕೊಂಡಿದ್ದಾರೆ.
ಇನ್ನೂ ಈಗಾಗಲೇ ಖಾಲಿ ಆಗಿರುವ ಸಿಲಿಂಡರ್ ರಿಫಿಲ್ ಆದರೆ ಸಾಕಪ್ಪ ಎಂಬಂತಾಗಿದೆ. ಸಣ್ಣ ಸಣ್ಣ ಕುಟುಂಬಗಳಿಗೆ ಒಂದು ಅಡುಗೆ ಅನಿಲದ ಗ್ಯಾಸ್ ಸುಮಾರು ಒಂದೂವರೆ, ಎರಡರಿಂದ ಮೂರು ತಿಂಗಳು ಬರುತ್ತದೆ. ಕೆಲವರು ಸೌದೆ ಒಲೆ ಜೊತೆಗೆ ಗ್ಯಾಸ್ ಮೇಲೆಯು ಅಡುಗೆ ಮಾಡುತ್ತಾರೆ. ಅವರಿಗೆ ದೀರ್ಘ ಬಾಳಿಕೆ ಬರುತ್ತದೆ.
ಬ್ಲಾಕ್ ಮಾರ್ಕೆಟ್ ಹಾವಳಿ
ಲಕ್ನೋದ ಕೆಲವು ಕಡೆಗಳಲ್ಲಿ ಸಹಾಯವಾಣಿ ಸಂಪರ್ಕ ಸಾಧ್ಯವಾಗದಿದ್ದಾಗ ಮತ್ತು ಖಾಲಿ ಗ್ಯಾಸ್ ರೀಫಿಲ್ ಅನುಮಾನ ಎಂಬುದು ಗೊತ್ತಾಗುತ್ತಿದ್ದಂತೆ ಜನ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಇಲ್ಲಿನ ಖಾದ್ರಾ ನಿವಾಸಿ ಹಸನ್ ಎಂಬುವವರು ಖಾಲಿ ಸಿಲಿಂಡರ್ ಮರುಪೂರಣವಕ್ಕಾಗಿ ಬ್ಲಾಕ್ ಮಾರ್ಕೆಟ್ ಸಂಪರ್ಕಿಸಿದ್ದಾರೆ. ಹೆಚ್ಚುವರಿ ಹಣ ನೀಡಿ ಸಿಲಿಂಡರ್ ಖರೀದಿಸಿದ್ದಾರೆ. ಅಂದರೆ ಅಡುಗೆ ಅನಿಲ 900 ರೂ. ಇದ್ದು, 1100 ರೂ. ಕೊಟ್ಟು ಖರೀದಿಸಬೇಕಾಯಿತು ಎಂದಿದ್ದಾರೆ. ಇದೆಲ್ಲ ನೋಡಿದರೆ ದಾಸ್ತಾನು ಇರುವವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇದ್ದು, ಬೆಲೆ ಇನ್ನೂ ಹೆಚ್ಚಾಗಬಹುದು. ಬ್ಲಾಕ್ ಮಾರ್ಕೆಟ್ ಹಾವಳಿ ಹೆಚ್ಚಾಗುವ ನಿರೀಕ್ಷೆ ಇದೆ. ಇಂದಿನ ಸನ್ನಿವೇಶದ ಲಾಭ ಪಡೆದು ಅಧಿಕ ಹಣಕ್ಕೆ ಸಿಲಿಂಡರ್ ಮಾರಾಟ ಮಾಡುವ ಗಂಪು ಸಕ್ರಿಯವಾಗಲೂಬಹುದು. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ.
ಎಲ್‌ಪಿಜಿ ಕಂಪನಿಗಳ ಅಧಿಕಾರಿಗಳ ಪ್ರಕಾರ, ಅನಿಲದ ಡಿಜಿಟಲ್ ಬುಕಿಂಗ್ ಸೇವೆ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಹಕರು ಎಸ್‌ಎಂಎಸ್ ಬುಕಿಂಗ್, ಮಿಸ್ಡ್ ಕಾಲ್ ಸೇವೆಗಳು ಅಥವಾ ಮೊಬೈಲ್ ಅಪ್ಲಿಕೇಶನ್ ಆಧಾರಿತ ಬುಕಿಂಗ್‌ನಂತಹ ಪರ್ಯಾಯ ಡಿಜಿಟಲ್ ಬುಕಿಂಗ್ ವಿಧಾನಗಳನ್ನು ಬಳಸಬಹುದು ಎಂದು ಅವರು ತಿಳಿಸಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications