ಮಗು ಆದ್ಮೇಲೆ ಸಮಂತಾ ದೊಡ್ಡ ಬ್ರೇಕ್‌ ತಗೊಳ್ಳೋದು ಗ್ಯಾರಂಟಿ, ಇದಕ್ಕೆ ಅವರ ಈ ಮಾತೇ ಸಾಕ್ಷಿ!

ಸಮಂತಾ ಪ್ರೆಗ್ನಿನ್ಸಿ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸಮಂತಾ ಮಗುವಿನ ನಿರೀಕ್ಷೆಯಲ್ಲಿರುವುದು ನಿಜ ಅನ್ನೋ ವಿಚಾರವನ್ನು ಅವರ ಆಪ್ತರೂ ಖಚಿತಪಡಿಸಿದ್ದಾರೆ. ಈಗ ಇನ್ನೊಂದು ವಿಷಯ ಚರ್ಚೆಯಲ್ಲಿದೆ. ಮಗು ಆದ್ಮೇಲೆ ಸಮಂತಾ ಸಿನಿಮಾರಂಗದಿಂದ ಒಂದಿಷ್ಟು ವರ್ಷ ದೂರ ಉಳಿಯೋದು ಖಚಿತ. ಅದಕ್ಕೊಂದು ದೊಡ್ಡ ಕಾರಣವೂ ಇದೆ.

ಸಮಂತ ರುತ್‌ ಪ್ರಭು ಭಾರತೀಯ ಸಿನಿಮಾರಂಗದಲ್ಲಿ ಪ್ರತಿಭಾವನ್ವಿತ ನಟಿ ಅಂತಲೇ ಗುರುತಿಸಿಕೊಂಡಿದ್ದಾರೆ. ಅವರ ಪ್ರೆಗ್ನೆನ್ಸಿ ವಿಚಾರ ರಿವೀಲ್‌ ಆಗಿದ್ದೇ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಆಯ್ತು. ಆದರೆ ಇದೀಗ ಬೇಜಾರಿನ ಸುದ್ದಿಯೂ ಅದರ ಹಿಂದಿನಿಂದಲೇ ಬಂದಿದೆ. ಮಗು ಆದಮೇಲೆ ಸಮಂತಾ ತುಂಬ ಸಮಯ ಇಂಡಸ್ಟ್ರಿಗೆ ಬರೋದಿಲ್ಲ ಅನ್ನೋ ಸುದ್ದಿಯದು. ಅದಕ್ಕೆ ಕಾರಣವೂ ಇದೆ.

Samantha Ruth Prabhu

ಕಳೆದ ಕೆಲವು ದಿನಗಳಿಂದ, ಸಮಂತಾ ರುತ್ ಪ್ರಭು ನಟನೆ, ನಿರ್ಮಾಣದ 'ಮಾ ಇಂಟಿ ಬಂಗಾರಂ' ಯಶಸ್ಸಿನತ್ತ ಮುನ್ನಡೆಯುತ್ತಿದೆ. ಇದರ ಜೊತೆಗೆ ಅವರು ವೈಯಕ್ತಿಕ ಜೀವನದ ಬಗ್ಗೆ ಕೇಳಿಬರುತ್ತಿರುವ ಹೊಸ ಸುದ್ದಿಗಳಿಂದಲೂ ಸುದ್ದಿಯಲ್ಲಿದ್ದಾರೆ. ಅವರ ಪತಿ ಹಾಗೂ ಚಲನಚಿತ್ರ ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಇತ್ತೀಚೆಗೆ ನಡೆದ ಸಂಭ್ರಮಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ, ಅವರು ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ದಟ್ಟವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ, ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ಆಪ್ತ ಮೂಲಗಳು ಖಚಿತಪಡಿಸಿವೆ.

ಸಮಂತಾ ಅಥವಾ ರಾಜ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಮಂತಾ ಪ್ರೆಗ್ನೆನ್ಸಿ ವಿಷಯ ಹೊರಬಿದ್ದದ್ದೇ ಅವರ ಹಳೆಯ ಸಂದರ್ಶನಗಳು ಮತ್ತೆ ಮುನ್ನೆಲೆಗೆ ಬಂದಿವೆ. ಆ ಸಂದರ್ಶನಗಳಲ್ಲಿ ಅವರು ತಾಯಿಯಾಗುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಕುತೂಹಲಕಾರಿ ವಿಷಯವೆಂದರೆ, ಸಮಂತಾ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಒಂದು ಸಮಯವನ್ನು ಸಹ ನಿಗದಿಪಡಿಸಿಕೊಂಡಿದ್ದಾಗಿಯೂ ಒಮ್ಮೆ ಹೇಳಿಕೊಂಡಿದ್ದರು.

ಗರ್ಭಿಣಿಯಾಗಿದ್ದಾಗಲೇ ಓಂಪುರಿ ಅಫೇರ್! ಮೊದಲ ಪತ್ನಿ ಸೀಮಾ ಕಪೂರ್ ನೋವಿನ ಸ್ಫೋಟ
ಗರ್ಭಿಣಿಯಾಗಿದ್ದಾಗಲೇ ಓಂಪುರಿ ಅಫೇರ್! ಮೊದಲ ಪತ್ನಿ ಸೀಮಾ ಕಪೂರ್ ನೋವಿನ ಸ್ಫೋಟ

ಹಿಂದೆ 2018 ರಲ್ಲಿ, ನಟ ನಾಗ ಚೈತನ್ಯ ಅವರೊಂದಿಗಿನ ಮದುವೆಯಾದ ಕೆಲವು ತಿಂಗಳ ನಂತರ, ಸಂದರ್ಶನವೊಂದರಲ್ಲಿ ಸಮಂತಾಗೆ ಕುಟುಂಬ ಯೋಜನೆ ಫ್ಯಾಮಿಲಿ ಪ್ಲಾನ್‌ಗಳ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಕಾಮಿಡಿಯಾಗಿ ಉತ್ತರಿಸಿದ ಸ್ಯಾಮ್, ತಮಗೆ ಯಾವಾಗ ಮಗು ಬೇಕು ಎಂಬ ಬಗ್ಗೆ ತಾನು ಮತ್ತು ನಾಗ ಚೈತನ್ಯ ಚರ್ಚಿಸಿದ್ದಾಗಿ ತಿಳಿಸಿದ್ದರು. ದಿನಾಂಕ ನಿಗದಿಯಾಗಿದೆ! ನಾವು ನಿಗದಿಪಡಿಸಿದ ದಿನಾಂಕದಂದೇ ಎಲ್ಲವೂ ನಡೆಯುತ್ತದೆ ಎಂಬಂತೆ ಚೈತನ್ಯ ಆ ದಿನಾಂಕದ ಬಗ್ಗೆ ತುಂಬಾ ಭರವಸೆಯಿಂದ ಇದ್ದಾರೆ! ಆದರೆ ನಾವು ಯಾವಾಗ ಮಗು ಮಾಡಿಕೊಳ್ಳಬೇಕು ಎಂಬುದಕ್ಕೆ ಸಮಯವನ್ನು ನಿಗದಿಪಡಿಸಿದ್ದೇವೆ ಎಂದು ಅವರು ಹೇಳಿದ್ದರು.

ಆ ಸಮಯದಲ್ಲಿ ಸಮಂತಾ ಅವರು ತಾಯಿಯಾದ ನಂತರ ತಮ್ಮ ಆದ್ಯತೆಗಳು ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆಯೂ ಮಾತನಾಡಿದ್ದರು. ತಮಗೆ ಮಗು ಆದ ಮೇಲೆ ಕೆಲಸಕ್ಕಿಂತ ಕುಟುಂಬವೇ ಮೊದಲ ಆದ್ಯತೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು.

ನನಗೆ ಮಗುವಾದಾಗ, ಆ ಮಗುವೇ ನನ್ನ ಪ್ರಪಂಚವಾಗಿರುತ್ತದೆ. ಕೆಲಸ ಮಾಡುವ ತಾಯಂದಿರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಬಾಲ್ಯ ಅಷ್ಟೊಂದು ಸುಂದರವಾಗಿರಲಿಲ್ಲ. ಬಾಲ್ಯದಲ್ಲಿ ಕಷ್ಟಪಟ್ಟ ಯಾವುದೇ ವ್ಯಕ್ತಿಯನ್ನು ಕೇಳಿದರೂ, ಅವರು ತಮ್ಮ ಮಗುವಿಗೆ ತಮಗೆ ಸಿಗದ ಎಲ್ಲಾ ಸುಖಗಳನ್ನು ನೀಡಲು ಬಯಸುತ್ತಾರೆ ಎಂದು ಹೇಳುತ್ತಾರೆ. ಆ ಆಲೋಚನೆ ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿದುಬಿಟ್ಟಿದೆ. ಹಾಗಾಗಿ ನನಗೆ ಮಗುವಾದ ಮೊದಲ ಕೆಲವು ವರ್ಷಗಳ ಕಾಲ ನಾನು ಎಲ್ಲೂ ಇರುವುದಿಲ್ಲ. ಆ ಮಗುವೇ ನನಗೆ ಎಲ್ಲವೂ ಆಗಿರುತ್ತದೆ ಎಂದಿದ್ದರು.

 ಮಾಜಿ ಸಿಎಂ ಸೊಸೆಯಾಗಲಿದ್ದಾರಾ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್; ವೈರಲ್‌ ಪೋಸ್ಟ್‌ನಲ್ಲಿರೋ ಶಿಖರ್ ಪಹರಿಯಾ ಯಾರು?
ಮಾಜಿ ಸಿಎಂ ಸೊಸೆಯಾಗಲಿದ್ದಾರಾ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್; ವೈರಲ್‌ ಪೋಸ್ಟ್‌ನಲ್ಲಿರೋ ಶಿಖರ್ ಪಹರಿಯಾ ಯಾರು?

ಆದರೆ ಜೀವನ ಆನಂತರ ಬೇರೆಯದೇ ತಿರುವು ಪಡೆದುಕೊಂಡಿತು. ಸಮಂತಾ ಮತ್ತು ನಾಗ ಚೈತನ್ಯ 2021 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಚೈತನ್ಯ ನಂತರ ನಟಿ ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾದರು, ಹಾಗೂ ಸಮಂತಾ ಅವರು ಡಿಸೆಂಬರ್ 2025 ರಲ್ಲಿ ರಾಜ್ ನಿಡಿಮೋರು ಅವರನ್ನು ಮದುವೆಯಾದರು.

ಇದೀಗ ಸಮಂತಾ ಅವರ ಫ್ಯಾನ್‌ಗಳಿಗೆ ಒಂದಂತೂ ಬೇಸರ ತರುವ ಸಂಗತಿ ಇದೆ. ಸಮಂತಾ ಮಗು ಮಾಡಿಕೊಂಡ ಮೇಲೆ ಒಂದಿಷ್ಟು ವರ್ಷಗಳ ಕಾಲ ಸಿನಿಮಾರಂಗದಿಂದ ದೂರ ಇರ್ತಾರೆ ಅನ್ನೋದಂತೂ ಗ್ಯಾರಂಟಿ. ಹಾಗಿದ್ದರೆ ಸಮಂತಾ ಸಿನಿಮಾಗಳನ್ನು ಅವರ ಅಭಿಮಾನಿಗಳ ತುಂಬಾನೇ ಮಿಸ್‌ ಮಾಡ್ಕೊಳ್ತಾರೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+