Peddi OTT Release: ರಾಮ್ ಚರಣ್ 'ಪೆದ್ದಿ'ಗೆ ಒಟಿಟಿ ಮಹೂರ್ತ ಫಿಕ್ಸ್: ಕನ್ನಡ ಸೇರಿ 5 ಭಾಷೆಗಳಲ್ಲಿ ಪ್ರಸಾರ

Peddi Movie OTT: ಮೆಗಾ ಪವರ್ ಸ್ಟಾರ್ ನಟನೆಯ 'ಪೆದ್ದಿ' ಸಿನಿಮಾ ಪಂಚಭಾಷೆಗಳಲ್ಲಿ ರಿಲೀಸ್ ಆಗಿ ನೂರಾರು ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರನ್ನು ಸಿನಿಮಾದಲ್ಲಿ ತೋರಿಸಿದ ರೀತಿಯಿಂದಲೇ 'ಪೆದ್ದಿ' ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ಸಂಬಂಧ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಇದೀಗ ಪ್ರೇಕ್ಷಕರು 'ಪೆದ್ದಿ' ಯಾವ ದಿನಾಂಕದಂದು ಯಾವ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ? ಎಂದು ಕಾಯುತ್ತಿದ್ದಾರೆ. ಅದಕ್ಕೀಗ ಉತ್ತರ ಸಿಕ್ಕಿದೆ..

'ಪೆದ್ದಿ' ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟ ಶಿವರಾಜ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಒಟಿಟಿಯಲ್ಲಿ ನೋಡಲು ಕನ್ನಡಿಗರು ಕಾತರರಿಂದ ಕಾಯುತ್ತಿದ್ದಾರೆ.ಅನೇಕ ಕಲಾವಿದರ ಈ ಚಿತ್ರದಲ್ಲಿ ಬಣ್ಣಣ ಹಚ್ಚಿದ್ದಾರೆ. 'ಪೆದ್ದಿ' ಒಟಿಟಿ ರಿಲೀಸ್ ದಿನಾಂಕದ ಕುರಿತು ಚರ್ಚೆಗಳು ಶುರುವಾಗಿದ್ದು, ಅದರ ರಿಲೀಸ್‌ಗೆ ಕೊನೆಗೂ ಮಹೂರ್ತ ಫಿಕ್ಸ್ ಆಗಿದೆ.

Peddi OTT Release

ನೆಟ್‌ಫ್ಲಿಕ್ಸ್‌ ನಲ್ಲಿ ಇದೇ ದಿನ 'ಪೆದ್ದಿ' ಸ್ಟ್ರಿಮೀಂಗ್

ವರದಿಗಳ ಪ್ರಕಾರ, 'ಪೆದ್ದಿ' ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ (Peddi OTT Release Date) ಬಹುಕೋಟಿ ರೂಪಾಯಿಗೆ ಖರೀದಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾ ಮುಂದಿನ ಜುಲೈ 2ರಂದು ಒಟಿಟಿಗೆ ಬರಲು ಸಜ್ಜಾಗಿದೆ. ಅಂದಿನಿಂದಲೇ ನೆಟ್‌ಫ್ಲಿಕ್ಸ್‌ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಒಟ್ಟು ತೆಲುಗು, ಹಿಂದಿ, ಕನ್ನಡ, ತಮಿಳು ಹಾಗೂ ಮಲಯಾಳಂ ಸೇರಿ ಪಂಚ ಭಾಷೆಗಳಲ್ಲಿ ಒಟಿಟಿಯಲ್ಲಿ ಪ್ರದರ್ಶನ ಕಾಣಲಿದೆ.

Peddi: ಜಾನ್ವಿ ಕಪೂರ್ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ?: ತಪ್ಪೊಪ್ಪಿಕೊಂಡ ನಿರ್ದೇಶಕ ಬುಚ್ಚಿ ಬಾಬು ಸನಾ ರಿಯಾಕ್ಟ್‌
Peddi: ಜಾನ್ವಿ ಕಪೂರ್ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ?: ತಪ್ಪೊಪ್ಪಿಕೊಂಡ ನಿರ್ದೇಶಕ ಬುಚ್ಚಿ ಬಾಬು ಸನಾ ರಿಯಾಕ್ಟ್‌

ಬೆಳ್ಳಿ ತೆರೆಯಲ್ಲಿ ಕಮಾಲ್ ಮಾಡಿರುವ 'ಪೆದ್ದಿ' ಸಿನಿಮಾ ಒಟ್ಟು ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ತನ್ನ ಓಟ ಮುಂದುವರಿಸಿದೆ. ವಿವಿಧ ರಾಜ್ಯಗಳ ಥಿಯೇಟರ್‍‌ನಲ್ಲಿ 'ಪೆದ್ದಿ' ಇನ್ನೂ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಒಟಿಟಿಗೆ ರಿಲೀಸ್ ಯಾವಾಗ? ಎಂಬ ಚರ್ಚೆ ಕೇಳಿ ಬಂದಿದೆ. ಜುಲೈ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಚಿತ್ರತಂಡ ಇನ್ನೊಂದು ವಾರದಲ್ಲಿ ಅಧಿಕೃತ ಮಾಹಿತಿ ನೀಡಲಿದೆ ಎಂದು ವರದಿ ಆಗಿದೆ.

ಚಿತ್ರದಲ್ಲಿ ನಟಿಯ ಅಂಗಾಂಗ ಹೈಲೈಟ್, ಆಕ್ಷೇಪ

'ವೃದ್ಧಿ ಸಿನಿಮಾಸ್ ಸಂಸ್ಥೆ' ಅದ್ಧೂರಿಯಾಗಿ ನಿರ್ಮಿಸಿರುವ ಈ 'ಪೆದ್ದಿ'ಗೆ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನವಿದೆ. ರತ್ನವೇಲು ಅವರ ಛಾಯಾಗ್ರಹಣವಿದೆ. 'ಪೆದ್ದಿ'ಯಲ್ಲಿ ಅನಗತ್ಯವಾಗಿ ನಟಿ ಜಾನ್ವಿ ಕಪೂರ್ ಮೈಮಾಟ ತೋರಿಸಲಾಗಿದೆ. ನಟಿಯ ಅಂಗಾಂಗ ತೋರಿಸಿದ್ದು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಸಾಮಾಜಿಕವಾಗಿ ಮಹಿಳೆಯನ್ನು ಗೌರವದಿಂದ ಕಾಣಬೇಕು. ಆದರೆ ಇಲ್ಲಿ ಮಹಿಳೆಯನ್ನು ಕೇವಲ ಪ್ರದರ್ಶನದ ಗೊಂಬೆಯಂತೆ, ಅಶ್ಲೀಲವಾಗಿ ತೋರಿಸಲಾಗಿದೆ. ಬರೀ ಅಂಗಾಂಗಗಳನ್ನು ಹೈಲೈಟ್ ಮಾಡಲಾಗಿದೆ ಎಂದು ದೂರಲಾಗಿತ್ತು.

ಮಹಿಳಾ ಕಲಾವಿದರ ಕುರಿತು ನಿರ್ದೇಶಕರ ಗೌರವ, ಕೇವಲ ಕಮರ್ಷಿಯಲ್ ದೃಷ್ಟಿಕೋನವನ್ನು ರೀಲ್ಸ್ ನಲ್ಲಿ ವಿಮರ್ಶಿಸಿ, ಖಂಡಿಸಲಾಗಿತ್ತು. ಈ ರೀಲ್ಸ್ ವಿಡಿಯೋವನ್ನು ಸ್ವತಃ ಜಾನ್ವಿ ಕಪೂರ್ ಅವರು ಲೈಕ್ ಕೊಟ್ಟ ಬೆಂಬಲಿಸಿದ್ದರು. ಕೆಲವ ಮಹಿಳಾ ಕಲಾವಿದರು ಹೆಣ್ಣನ್ನು ಈ ರೀತಿ ತೋರಿಸಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ಕ್ಷಮೆ ಕೋರಿದ್ದರು. ನನಗೆ ಹೆಣ್ಣುಮಕ್ಕಳ ಮೇಲೆ ಗೌರವವಿದೆ. ಸಿನಿಮಾದಲ್ಲಿ ದೃಶ್ಯಗಳಿಂದ ನಿಮ್ಮ ಭಾವನೆಗೆ ಧಕ್ಕೆ ಆಗಿದ್ದರೆ ವಿಷಾಧಿಸುತ್ತೇನೆ. ನನ್ನ ದೃಷ್ಟಿಕೋನ ಅದಾಗಿರಲಿಲ್ಲ ಎಂದು ಅವರು ಕ್ಷಮಾಪಣೆ ಕೇಳಿದ್ದರು. ಅಂತಹ ದೃಶ್ಯಗಳಿಗೆ ಕತ್ತರಿ ಹಾಕುವ ಭರವಸೆ ಸಹ ನೀಡಿದ್ದರು. ಈ ವಿವಾದ ತಣ್ಣಗಾಗುತ್ತಿದ್ದಂತೆ ಸಿನಿಮಾ ಒಟಿಟಿಗೆ ಬರುವುದನ್ನು ಸಿನಿ ರಸಿಕರು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+