ಡೆಲಿವೆರಿ ಬಾಯ್ಸ್‌ಗಾಗಿ ಮನೆ ಮುಂದೆ ನಿತ್ಯ ನೀರಿಡುವ ಮಹಿಳೆ:ಎರಡು ವರ್ಷಗಳ ನಿರಂತರ ಸೇವೆಗೆ ನೆಟ್ಟಿಗರು ಫಿದಾ

ಈಗ ನಮಗೇನು ಬೇಕೋ ಆ ವಸ್ತುಗಳನ್ನು ಕುಳಿತಲ್ಲಿಂದಲೇ ಆರಾಮಾಗಿ ಆರ್ಡರ್‌ ಮಾಡಿ ಬಿಡಬಹುದು. ಅದು ಮನೆ ಸಾಮಾನುಗಳಾಗಿರಲಿ, ಊಟ ತಿಂಡಿಯಾಗಿರಲಿ ನಾವು ಆರ್ಡರ್‌ ಮಾಡಿರುವ ವಸ್ತುಗಳು ನಾವಿದ್ದಲ್ಲಿಗೇ ಬಂದು ನಮ್ಮ ಕೈ ಸೇರುತ್ತವೆ. ನಾವು ಹೀಗೆ ಮನೆಯಲ್ಲೇ ಆರಾಮವಾಗಿ ಕುಳಿತು ಆರ್ಡರ್ ಮಾಡುವ ವಸ್ತುಗಳನ್ನು ನಮ್ಮ ಕೈಗೆ ತಲುಪಿಸಲು ಡೆಲಿವರಿ ಪಾರ್ಟ್‌ನರ್‌ಗಳು ಮಳೆ, ಬಿಸಿಲೆನ್ನದೆ ದುಡಿಯುತ್ತಾರೆ. ದಿನಾಲು ಸುಡುವ ಬಿಸಿಲು, ಟ್ರಾಫಿಕ್ ನಡುವ ಬಿಡುವಿಲ್ಲದೆ ಶ್ರಮಿಸುತ್ತಾರೆ. ನಮ್ಮ ಜೀವನವನ್ನು ಸುಲಭವಾಗಿಸಲು ಅವರು ಪಡುವ ಕಷ್ಟ ಅಷ್ಟಿಷ್ಟಲ್ಲ.

ಹೀಗೆ ಬೇಸಿಗೆಯ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಡೆಲಿವರಿ ಏಜೆಂಟ್‌ಗಳಿಗೆ ನೆರವಾಗುವ ಬಗ್ಗೆ ಮಹಿಳೆಯೊಬ್ಬರು ಯೋಚಿಸಿದ್ದಾರೆ. ಈ ಡೆಲಿವೆರಿ ಏಜೆಂಟ್‌ಗಳಿಗೆ ಸದ್ದಿಲ್ಲದೆ ನೆರವಾಗುತ್ತಿದ್ದಾರೆ. ಈ ಮಹಿಳೆ ಮಾಡುತ್ತಿರುವ ಸಣ್ಣದೊಂದು ಸತ್ಕಾರ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಈಕೆ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿರುವ ದಿನಚರಿ ನೆಟ್ಟಿಗರ ಹೃದಯ ಗೆದ್ದಿದೆ.

Water for Delivery Workers

ಡೆಲಿವೆರಿ ಬಾಯ್‌ಗಳಿಗಾಗಿ ನೀರು:

ಈ ಮಹಿಳೆ ತಮ್ಮ ಮನೆಯ ಮುಖ್ಯ ಬಾಗಿಲ ಹೊರಗೆ ಸಣ್ಣ ಪ್ಲಾಸ್ಟಿಕ್ ಸ್ಟೂಲ್ ಇಟ್ಟು, ಅದರ ಮೇಲೆ ನೀರಿನ ಬಾಟಲಿಗಳು ಮತ್ತು ಸ್ಟೀಲ್ ಲೋಟವನ್ನು ಇಡುತ್ತಾರೆ. ಸ್ವಿಗ್ಗಿ, ಜೊಮ್ಯಾಟೊ, ಝೆಪ್ಟೋ, ಬ್ಲಿಂಕಿಟ್, ಅಮೆಜಾನ್, ಇನ್‌ಸ್ಟಾಮಾರ್ಟ್, ಮಿಂತ್ರಾ, ಡಂಜೋ ಸೇರಿದಂತೆ ಯಾವುದೇ ಸಂಸ್ಥೆಯ ಡೆಲಿವರಿ ಸಿಬ್ಬಂದಿ ಇರಲಿ, ಅಥವಾ ದಾರಿಯಲ್ಲಿ ಸುಸ್ತಾಗಿ ಹೋಗುವ ಅಪರಿಚಿತರೇ ಇರಲಿ, ಅವರೆಲ್ಲರಿಗಾಗಿ ಈಕೆ ತನ್ನ ಮನೆಯ ಮುಂದೆ ಪ್ರತಿದಿನ ಶುದ್ಧವಾದ ಕುಡಿಯುವ ನೀರು ಮತ್ತು ಸ್ವಚ್ಛವಾದ ಗ್ಲಾಸ್‌ಗಳನ್ನು ಇಡುತ್ತಾ ಬಂದಿದ್ದಾರೆ.

ಅಲ್ಲದೆ ತಾನು ಮಾಡುವ ಕೆಲಸ ಕ್ಯಾಮರಾದಲ್ಲಿ ಸೆರೆಯಾಗಬೇಕು ಎನ್ನುವ ಆಸೆಯಿಲ್ಲ, ಪ್ರಚಾರದ ಹಂಗಿಲ್ಲ, ಪ್ರಶಂಸೆಯ ನಿರೀಕ್ಷೆಯೂ ಇಲ್ಲ. ಕೇವಲ ಮಾನವೀಯತೆಯ ದೃಷ್ಟಿಯಿಂದ, ಪ್ರತಿ ದಿನವೂ ಈ ಸರಳವಾದ ಕಾಯಕವನ್ನು ಅವರು ಮೌನವಾಗಿ ಮಾಡುತ್ತಿದ್ದಾರೆ.

ಫೋಟೋಗೆ ನಿಂತ ಕನ್ನಡತಿ ಶ್ರೀಲೀಲಾನ 'ಸೈಡಿಗೆ ಹೋಗು' ಅಂತ ಪಕ್ಕಕ್ಕೆ ಕಳಿಸಿದ ಮಹಾರಾಷ್ಟ್ರ ಸಿಎಂ ಪತ್ನಿ, ವಿಡಿಯೋ ವೈರಲ್‌
ಫೋಟೋಗೆ ನಿಂತ ಕನ್ನಡತಿ ಶ್ರೀಲೀಲಾನ 'ಸೈಡಿಗೆ ಹೋಗು' ಅಂತ ಪಕ್ಕಕ್ಕೆ ಕಳಿಸಿದ ಮಹಾರಾಷ್ಟ್ರ ಸಿಎಂ ಪತ್ನಿ, ವಿಡಿಯೋ ವೈರಲ್‌

ಮಾನವೀಯತೆ ಮೆರೆದ ಪುಟ್ಟ ಹೆಜ್ಜೆ:

ಮಹಿಳೆ ಮುಂಜಾನೆ ಎದ್ದು ಮೊದಲು ಮುಖ್ಯ ಬಾಗಿಲು ತೆರೆದು ಹೊರಗಿರುವ ಬಾಟಲಿಗಳನ್ನು ಪರಿಶೀಲಿಸುತ್ತಾರೆ. ಖಾಲಿಯಾದ ಬಾಟಲಿಗಳನ್ನು ತೆಗೆದುಕೊಂಡು ಹೋಗಿ, ಅದಕ್ಕೆ ಸ್ವಚ್ಛವಾದ ಕುಡಿಯುವ ನೀರನ್ನು ತುಂಬಿಸಿ ಮತ್ತೆ ಸ್ಟೂಲ್ ಮೇಲೆ ಇಡುತ್ತಾರೆ.ಕಳೆದ 2 ವರ್ಷಗಳಿಂದ ಈ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಮಹಿಳೆಯ ಸ್ನೇಹಿತರು ಬೇರೆ ಬೇರೆ ಭಾಷೆಗಳಲ್ಲಿ ಬೋರ್ಡ್ ಬರೆಯಲು ಸಹಾಯ ಮಾಡಿದ್ದಾರೆ. ಈ ಕಡು ಬೇಸಿಗೆಯಲ್ಲಿ ಪ್ರತಿದಿನ ಬಾಟಲಿಗಳು ಖಾಲಿಯಾಗುತ್ತಿರುತ್ತವೆ.

ಒಂದು ಬಾಟಲಿ ನೀರು ತೀರಾ ಸಾಮಾನ್ಯ ಎನಿಸಬಹುದು. ಆದರೆ ಗಂಟೆಗಟ್ಟಲೆ ಬಿಸಿಲಿನಲ್ಲಿ ಬೈಕ್ ಓಡಿಸಿ ಸುಸ್ತಾಗಿ ಬರುವ ಡೆಲಿವರಿ ಪಾರ್ಟ್‌ನರ್‌ಗೆ ಆ ನೀರು ಬಹಳ ನೆಮ್ಮದಿ ಕೊಡುತ್ತದೆ.

ಮಹಿಳೆಯ ಈ ಕೆಲಸದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಶೇರ್‌ ಮಾಡಲಾಗಿದೆ. ಇಂಟರ್ನೆಟ್ ಲೋಕ ಈಕೆಯ ಈ ಕಾರ್ಯವನ್ನು ಬಹುವಾಗಿ ಶ್ಲಾಘಿಸಿದೆ. ಈ ವಿಡಿಯೋದ ಕ್ಯಾಪ್ಷನ್‌ನಲ್ಲಿ, "ಸಣ್ಣ ಮಾನವೀಯತೆಯೂ ದೊಡ್ಡ ಬದಲಾವಣೆ ತರುತ್ತದೆ. ನಿಮ್ಮ ಮನೆಗೆ ಯಾರಾದರೂ ಕೆಲಸದವರು ಅಥವಾ ಡೆಲಿವರಿ ಮಾಡುವವರು ಪದೇ ಪದೇ ಬರುತ್ತಿದ್ದರೆ, ಅವರಿಗಾಗಿ ಸ್ವಲ್ಪ ನೀರನ್ನು ಹೊರಗಿಡಿ ಎಂದು ಬರೆಯಲಾಗಿದೆ.

ಸಣ್ಣ ಗಿಫ್ಟ್, ದೊಡ್ಡ ಮೆಚ್ಚುಗೆ: ದಿವ್ಯಾಂಗ ಜೊಮಾಟೊ ಡೆಲಿವರಿ ಏಜೆಂಟ್ ಜೊತೆಗಿನ ಯುವಕನ ಮಾತುಕತೆ Viral
ಸಣ್ಣ ಗಿಫ್ಟ್, ದೊಡ್ಡ ಮೆಚ್ಚುಗೆ: ದಿವ್ಯಾಂಗ ಜೊಮಾಟೊ ಡೆಲಿವರಿ ಏಜೆಂಟ್ ಜೊತೆಗಿನ ಯುವಕನ ಮಾತುಕತೆ Viral

ನೆಟ್ಟಿಗರ ಮನಗೆದ್ದ ವಿಡಿಯೋ:

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಹಿಳೆಯ ಈ ಸತ್ಕಾರ್ಯಕ್ಕೆ ಜನ ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ. ನಿಮ್ಮ ಕೆಲಸ ನಿಜಕ್ಕೂ ಶ್ಲಾಘನೀಯ. ನಾನು ಏಪ್ರಿಲ್‌ನಲ್ಲಿ ನನ್ನ ತಂದೆ ತಾಯಿ ಮನೆಗೆ ಹೋಗಿದ್ದೆ. ಅವರು ಕೂಡ ಇಂತಹದ್ದೇ ಒಂದು ಕೆಲಸ ಮಾಡುತ್ತಿದ್ದರು. 50 ಫ್ರೂಟಿ ಪ್ಯಾಕೆಟ್‌ಗಳನ್ನು ತಂದು, ಪ್ರತಿದಿನ ಐದೈದರಂತೆ ಫ್ರಿಡ್ಜ್‌ನಲ್ಲಿಟ್ಟು ಮನೆಗೆ ಬರುವ ಡೆಲಿವರಿ ಬಾಯ್ಸ್ ಮತ್ತು ಕಸ ಗುಡಿಸುವವರಿಗೆ ಕೊಡುತ್ತಿದ್ದರು. ಅಪ್ಪ-ಅಮ್ಮ ನೀಡಿದ ಇಂತಹ ಸಂಸ್ಕಾರದ ಬಗ್ಗೆ ಹೆಮ್ಮೆಯಿದೆ," ಎಂದು ಒಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.

ಎರಡನೇ ಬಳಕೆದಾರರು: "ಇದು ಅದ್ಭುತವಾದ ಆಲೋಚನೆ. ನನ್ನ ಮನೆಯ ಕಾರಿಡಾರ್‌ನಲ್ಲಿ ಇಷ್ಟು ಜಾಗ ಇದ್ದಿದ್ದರೆ ನಾನು ಕೂಡ ಖಂಡಿತ ಮಾಡುತ್ತಿದ್ದೆ," ಎಂದಿದ್ದಾರೆ.

ಮೂರನೇ ಬಳಕೆದಾರರು: "ನಿಮ್ಮ ವಿಡಿಯೋ ನೋಡಿ ನನಗೂ ಪ್ರೇರಣೆ ಸಿಕ್ಕಿದೆ. ಇಂದಿನಿಂದಲೇ ನಾನು ಕೂಡ ಈ ಕೆಲಸವನ್ನು ಶುರು ಮಾಡುತ್ತೇನೆ," ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ನೆಟ್ಟಿಗರು ಈ ಸಣ್ಣ ಪ್ರಯತ್ನವು ಸಮಾಜದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ ಎಂದು ಶ್ಲಾಘಿಸಿದ್ದು, "ದಿನವನ್ನು ಪ್ರಾರಂಭಿಸಲು ಇದಕ್ಕಿಂತ ಸುಂದರವಾದ ಹಾದಿ ಬೇರೊಂದಿಲ್ಲ" ಎಂದು ಮಹಿಳೆಗೆ ಧನ್ಯವಾದ ತಿಳಿಸಿದ್ದಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+