ತಸ್ಲಿಮಾ ವೀಸಾ ಒಂದು ವರ್ಷ ವಿಸ್ತರಣೆ

ಅವರ ವೀಸಾ ಅವಧಿ ಆ.16ಕ್ಕೆ ಮುಗಿಯುತ್ತಿದ್ದು ಅದನ್ನೀಗ ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಭಾರತದಲ್ಲಿ ಖಾಯಂ ವಾಸಕ್ಕಾಗಿ ಅವರು ಸಲ್ಲಿಸಿರುವ ಅರ್ಜಿ ಅನೇಕ ವರ್ಷಗಳಿಂದ ತೂಗುಯ್ಯಾಲೆಯಲ್ಲಿದೆ.
ಲೇಖಕಿಯಾಗಿ ಪರಿವರ್ತಿತರಾದ 47ರ ಹರೆಯದ ವೈದ್ಯೆ ತಸ್ಲಿಮಾ ಅವರು ಆ.25ರಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಭಾರತದಲ್ಲಿ ಖಾಯಂ ವಾಸದ ಅವಕಾಶಕ್ಕಾಗಿ ಕೂಡಾ ಪ್ರಯತ್ನ ನಡೆಸುತ್ತಿದ್ದಾರೆ.
ಸ್ವಿಡೀಷ್ ಪಾಸ್ ಪೋರ್ಟ್ ಹೊಂದಿರುವ ತಸ್ಲೀಮಾ, ವೀಸಾ ಅವಧಿಯನ್ನು 2005 ರಿಂದ ವಿಸ್ತರಿಸುತ್ತಾ ಬಂದಿರುವ ಭಾರತ ಸರ್ಕಾರ, ಐದು ವರ್ಷಗಳಿಗೂ ಅಧಿಕ ಕಾಲ ವಿಸ್ತರಣೆ ಮಾಡುವಂತಿಲ್ಲ. ಬೇರೊಂದು ದೇಶದಿಂದ ಹೊಸ ವೀಸಾ ಪಡೆಯಲು ಆಕೆ ಪ್ರಯತ್ನಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.












Click it and Unblock the Notifications