ಗುಲಾಂ ಅಲಿ ಕಾರ್ಯಕ್ರಮ ವಿವಾದ, ಅಖಾಡಕ್ಕಿಳಿದ ತಸ್ಲಿಮಾ
ಮುಂಬೈ, ಅ.08: ಪಾಕಿಸ್ತಾನದ ಘಜಲ್ ಗಾಯಕ ಗುಲಾಮ್ ಅಲಿ ಅವರ ಕಾರ್ಯಕ್ರಮಕ್ಕೆ ಶಿವಸೇನಾ ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ್ಯಕ್ರಮ ರದ್ದಾಗಿರುವುದು ಈಗ ದೊಡ್ಡ ಚರ್ಚೆಗೀಡಾಗಿದೆ. ಇದರ ಬೆನ್ನಲ್ಲೇ ಗುಲಾಮ್ ಅಲಿ ಅವರಿಗೆ ಈಗ ಪಶ್ಚಿಮ ಬಂಗಾಳ ಹಾಗೂ ದೆಹಲಿ ಸರ್ಕಾರದಿಂದ ಬುಲಾವ್ ಸಿಕ್ಕಿದೆ. ಈ ನಡುವೆ ಲೇಖಕಿ ತಸ್ಲಿಮಾ ನಸ್ರೀನ್ ಅವರು ಭಾರತ ದೇಶ 'ಹಿಂದೂ ಸೌದಿ' ಆಗುತ್ತಿದೆಯೇ? ಎಂದು ಪ್ರಶ್ನಿಸಿ ವಿವಾದಕ್ಕೆ ಕಾರಣವಾಗಿದ್ದಾರೆ.
ಗುಲಾಮ್ ಅಲಿ ಅವರ ಕಾರ್ಯಕ್ರಮವನ್ನು ಶಿವಸೇನಾ ಬೆದರಿಕೆಯಿಂದ ರದ್ದುಪಡಿಸಿರುವ ಸುದ್ದಿಗೆ ಅಚ್ಚರಿ ವ್ಯಕ್ತಪಡಿಸಿರುವ ತಸ್ಲಿಮಾ, ಭಾರತ ಹಿಂದೂ ಸೌದಿ ಯಾಗುತ್ತಿದೆ. ಗುಲಾಮ್ ಅಲಿ ಅವರೇನು ಜಿಹಾದಿಯಲ್ಲ, ಗಾಯಕ ಎಂಬುದು ಶಿವಸೇನೆಗೆ ತಿಳಿದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮುಂಬೈ ಹಾಗೂ ಪುಣೆಯಲ್ಲಿ ಗಾಯಕ ಜಗ್ಜೀತ್ ಸಿಂಗ್ ಸ್ಮರಣಾರ್ಥ ಗುಲಾಂ ಅಲಿ ಅವರ ಘಜಲ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿವಸೇನೆಯ ತೀವ್ರ ವಿರೋಧದ ನಂತರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. [ಗಜಲ್ ಕಿಂಗ್ ಜಗಜೀತ್ ಸಿಂಗ್]
ಭಾರತ-ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ, ಕಳ್ಳಯುದ್ಧ, ಭಯೋತ್ಪಾದನಾ ಚಟುವಟಿಕೆಗಳು ಮುಂದುವರೆದಿರುವ ಸಂದರ್ಭದಲ್ಲಿ ಪಾಕಿಸ್ತಾನ ಗಾಯಕರ ಕಾರ್ಯಕ್ರಮ ನಡೆಸುವುದು ಸರಿಯಲ್ಲ. ನಾವು ಕೂಡಾ ಗುಲಾಮ್ ಅಲಿ ಅಭಿಮಾನಿಗಳು ಎಂದು ಆದಿತ್ಯ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. ಗುಲಾಂ ಅಲಿ ಕಾರ್ಯಕ್ರಮದ ಪರ-ವಿರೋಧ ಅನೇಕ ಟ್ವೀಟ್ ಗಳು ಹರಿದಾಡುತ್ತಿವೆ.

ನನಗೇನು ನೋವಾಗಿಲ್ಲ, ಅದರೆ, ಬೇಸರವಿದೆ
ಜಗ್ಜೀತ್ ಸಿಂಗ್ ನನ್ನ ಸೋದರನಂತೆ ಇದ್ದರು, ಈಗ ಉಭಯ ದೇಶಗಳ ನಡುವೆ ಬಾಂಧವ್ಯ ಸರಿ ಹೊಂದುವುದು ಮುಖ್ಯ, ಸಂಗೀತದ ಆರಾಧನೆಗೆ ಸೂಕ್ತ ಕಾಲ ಒದಗಿದಾಗ, ಅಭಿಮಾನಿಗಳಿಂದ ಕರೆ ಬಂದಾಗ ನಾವು ಹಾಡಲು ಸಿದ್ಧ ಎಂದು 75 ವರ್ಷದ ಹಿರಿಯ ಗಾಯಕ ಪ್ರತಿಕ್ರಿಯಿಸಿದ್ದಾರೆ.
|
ಅಖಾಡಕ್ಕಿಳಿದ ಲೇಖಕಿ ತಸ್ಲಿಮಾ
ಟ್ರೂಥ್ ಸೇಯರ್ ಎಂಬ ಖಾತೆಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಲೇಖಕಿ ತಸ್ಲಿಮಾ ನಸ್ರೀನ್ ಅವರು ಭಾರತ ದೇಶ 'ಹಿಂದೂ ಸೌದಿ' ಆಗುತ್ತಿದೆಯೇ? ಎಂದು ಪ್ರಶ್ನಿಸಿ ವಿವಾದಕ್ಕೆ ಕಾರಣವಾಗಿದ್ದಾರೆ.
|
ನಿಷೇಧಕ್ಕೆ ನಿರ್ಬಂಧಕ್ಕೂ ಅರ್ಥವಿದೆ
ನಿಷೇಧಕ್ಕೆ ನಿರ್ಬಂಧಕ್ಕೂ ಅರ್ಥವಿದೆ, ಪಾಕಿಸ್ತಾನದ ವಾಗ್ಮಿಗಳು, ಭಯೋತ್ಪಾದನಾ ತರಬೇತುದಾರರನ್ನು ಇದೇ ರೀತಿ ಭಾರತಕ್ಕೆ ಆಹ್ವಾನಿಸಲು ಸಾಧ್ಯವೇ?
|
ನಾವು ಕೂಡಾ ಗುಲಾಂ ಅಲಿ ಫ್ಯಾನ್ಸ್
ನಾವು ಕೂಡಾ ಗುಲಾಂ ಅಲಿ ಫ್ಯಾನ್ಸ್ ಎಂದ ಆದಿತ್ಯಾ ಠಾಕ್ರೆ
|
ಗುಲಾಂ ಅಲಿ ಕಾರ್ಯಕ್ರಮ ರದ್ದು ವಿವಾದ
ಗುಲಾಂ ಅಲಿ ಕಾರ್ಯಕ್ರಮ ರದ್ದು ವಿವಾದದ ಬಗ್ಗೆ ಅನೇಕ ರೀತಿ ಟ್ವೀಟ್ಸ್
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications