ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀದೇವಿ ನಿಗೂಢ ಸಾವು: ವಿವಾದ ಹುಟ್ಟಿಸಿದ ತಸ್ಲಿಮಾ ನಸ್ರಿನ್ ಟ್ವೀಟ್

|
Google Oneindia Kannada News

Recommended Video

ನಟಿ ಶ್ರೀದೇವಿ ನಿಧನ : ತಸ್ಲೀಮಾ ನಸರೀನ್ ರ ವಿವಾದಾತ್ಮಕ ಟ್ವೀಟ್ | Oneindia Kannada

ಢಾಕಾ, ಫೆಬ್ರವರಿ 27: ಬಾಲಿವುಡ್ ಬೆಡಗಿ ಶ್ರೀದೇವಿ ಅವರ ನಿಗೂಢ ಸಾವು ಇದೀಗ ಇಡೀ ವಿಶ್ವವನ್ನೂ ತಲ್ಲಣಿಸಿದೆ. ಹೃದಯಾಘಾತದಿಂದ ಕೊನೆಯುಸಿರೆಳೆದರು ಅಂದಾಗ ಮೆಚ್ಚಿನ ನಟಿಯ ಅಗಲಿಕೆ ನೋವು ತಂದಿದ್ದು ನಿಜ. ಆದರೆ ಆಕೆ ಸತ್ತಿದ್ದು ಹೃದಯಾಘಾತದಿಂದಲ್ಲ, ನೀರಿನಲ್ಲಿ ಮುಳುಗಿ ಎಂಬ ವರದಿ ಹೊರಬರುತ್ತಿದ್ದಂತೆಯೇ ವಿಚಿತ್ರ ಭಾವವೊಂದು ಸುತ್ತಿಕೊಂಡಿದೆ. ಶ್ರೀದೇವಿ ಸಾವು ನಿಗೂಢತೆಯ ಸರಮಾಲೆ ಎನ್ನಿಸಿದೆ.

ಈ ಕುರಿತು ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಮಾಡಿದ ಟ್ವೀಟ್ ಈಗ ಮತ್ತೊಂದು ವಿವಾದ ಸೃಷ್ಟಿಸಿದೆ. ಶ್ರೀದೇವಿ ಅವರು ನೀರಿನಲ್ಲಿ ಮುಳುಗಿ ಸತ್ತಿದ್ದು ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಟ್ವೀಟ್ ಮಾಡಿದ್ದ ತಸ್ಲೀಮಾ ನಸ್ರೀನ್, 'ಶ್ರೀದೇವಿ ಅವರ ಮೃತದೇಹ ಬಾತ್ ಟಬ್ ನಲ್ಲಿ ಪತ್ತೆಯಾಗಿದೆ. ಇದು ಕೊಲೆ ಅಥವಾ ಆತ್ಮಹತ್ಯೆಯಲ್ಲ ಎಂದು ಭಾವಿಸುತ್ತೇನೆ' ಎಂದಿದ್ದರು.

ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!

ಜವಾಬ್ದಾರಿಯುತ ಸ್ಥಾನದಲ್ಲಿರುವ ಲೇಖಕಿಯೊಬ್ಬರು ಇಂಥ ಹೇಳಿಕೆ ನೀಡಿರುವುದು ಸರಿಯೇ ಎಂಬುದು ಈಗಿರುವ ಪ್ರಶ್ನೆ. ಆದರೆ ಹಲವರು ತಸ್ಲೀಮಾ ನಸ್ರೀನ್ ಅವರ ಮಾತನ್ನು ಅನುಮೋದಿಸಿ, ತಾವೂ ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ದಯವಿಟ್ಟು ಏನೇನೋ ಮಾತನಾಡಬೇಡಿ, ನೀವು ಸ್ತ್ರೀವಾದಿ ಎಂಬುದು ಗೊತ್ತು ಎಂದು ಕಾಲೆಳೆದಿದ್ದಾರೆ.

ಇದು ಕೊಲೆ ಅಥವಾ ಆತ್ಮಹತ್ಯೆ ಅಲ್ಲ ಎಂದು ಭಾವಿಸುತ್ತೇನೆ..!

ಶ್ರೀದೇವಿ ಅವರ ಮೃತದೇಹ ಬಾತ್ ಟಬ್ ನಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೂ ಅಲ್ಲ ಎಂದು ಭಾವಿಸುತ್ತೇನೆ ಎಂದು ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದರು.

ಬುದ್ಧಿವಂತರ ಹಣೆಬರಹವೇ ಇಷ್ಟು!

ಬುದ್ಧಿವಂತ ಜನರ ಬಹುಮುಖ್ಯ ಸಮಸ್ಯೆ ಎಂದರೆ ಅವರು ಸಮಸ್ಯೆಯೇ ಇಲ್ಲದ ಜಾಗದಲ್ಲೂ ಸಮಸ್ಯೆ ಹುಡುಕುತ್ತಾರೆ. ನೀವೂ ಮಾಡುತ್ತಿರುವುದು ಅದನ್ನೇ ಎಂದು ಸಿದ್ ಎಂಬುವವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಕಸ್ಮಿಕ ಸಾವು ಎನ್ನುವುದಕ್ಕೆ ಸಾಧ್ಯವೇ?

ಶವಪರೀಕ್ಷೆ(autopsy) ಮಾಡುವವರು 'ನೀರಿನಲ್ಲಿ ಮುಳುಗಿ ಸಾವು' ಎನ್ನಬಹುದು. ಆದರೆ 'ಆಕಸ್ಮಿಕವಾಗಿ ನೀರಿನಲ್ಲಿ ಮಯಳುಗಿ ಸಾವು' ಎಂದು ಅವರು ಹೇಳುವುದಕ್ಕೆ ಹೇಗೆ ಸಾಧ್ಯ? ಅದನ್ನು ಕೋರ್ಟು ಹೇಳಬೇಕಲ್ಲವೇ ಎಂದಿದ್ದಾರೆ ಜೈದೇವ್ ಎಂಬುವವರು.

ನೀವು ಸ್ತ್ರೀವಾದಿ ಎಂಬುದು ಗೊತ್ತು!

ನೀವು ಸ್ತ್ರೀವಾದಿ ಎಂಮಬುದು ನಮಗೆ ಗೊತ್ತು. ಆದರೆ ಈ ರೀತಿಯ ಹೇಳಿಕೆ ಕೊಟ್ಟು ನಿಮ್ಮ ಗೌರವವನ್ನು ಕಡಿಮೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ ಧವಳ್ ಪುರೋಹಿತ್.

ಹಣ ಮತ್ತು ಜನಪ್ರಿಯತೆ

ನಿಜ, ಹಣ ಮತ್ತು ಜನಪ್ರಿಯತೆಯ ಜೊತೆಗೆ ಕೆಟ್ಟದ್ದೂ ಸೇರಿಕೊಂಡು ಬಂದಿರುತ್ತದೆ ಎಂದಿದ್ದಾರೆ ಮೌದ್ಗಿಲ್ ಸತೀಶ್ ಎಂಬುವವರು.

ನಿಮ್ಮಿಂದ ಇದಕ್ಕಿಂತ ಹೆಚ್ಚು ಇನ್ನೇನು ನಿರೀಕ್ಷಿಸಲಿ?!

ಇವತ್ತಿನವರೆಗೆ ನಿಮ್ಮಿಂದ ಯಾವುದೇ ಧನಾತ್ಮಕ ಟ್ವೀಟ್ ಅನ್ನು ನಾನಂತೂ ನೋಡಿಲ್ಲ. ನಿಮ್ಮಿಂದ ಇದಕ್ಕಿಂತ ಹೆಚ್ಚು ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ ಪ್ರದೀಪ್.

English summary
'Hope Sridevi's death is not homicide or suicide,' Bangladeshi writer Taslima Nasreen tweeted. Her twitter becames controversial now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X