ಗಂಗೋಪಾಧ್ಯಾಯರಿಂದ ಲೈಂಗಿಕ ಕಿರುಕುಳ: ತಸ್ಲೀಮಾ

taslima-accuses-sunil-gangopadhyay-sexual-harassement
ನವದೆಹಲಿ, ಸೆ.5: ಬಾಂಗ್ಲಾ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸುನೀಲ್ ಗಂಗೋಪಾಧ್ಯಾಯ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಆರೋಪಿಸಿದ್ದಾರೆ. ತನ್ಮೂಲಕ ಮತ್ತೊಮ್ಮ ವಿವಾದದ ಜೇನುಗೂಡಿಗೆ ಕೈಹಚ್ಚಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ತಸ್ಲೀಮಮ್ಮ 'ತನಗೆ ಮತ್ತು ಇತರೆ ಮಹಿಳೆಯರಿಗೆ ಗಂಗೋಪಾಧ್ಯಾಯ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಲ್ಲಿರುವುದಕ್ಕೆ ನಾಚಿಕೆಯಾಗಬೇಕು' ಎಂದು ಕಿಡಿಕಾರಿದ್ದಾರೆ.

ಆದರೆ ಇದೇ 7 ರಂದು 79ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸುನೀಲ್ ಗಂಗೋಪಾಧ್ಯಾಯ ಅವರು ಲೇಖಕಿ ತಸ್ಲೀಮಾ ಅವರ ಆರೋಪಕ್ಕೆ ತಣ್ಣಗೆ ಪ್ರತಿಕ್ರಿಯಿಸಿದ್ದು, ನನಗೆ ತುಂಬಾ ಕೆಲಸವಿದೆ. ನನಗೆ ಟ್ವಿಟ್ಟರ್ರು-ಗಿಟ್ಟರ್ರು ಗೊತ್ತಿಲ್ಲ. ಈ ಬಗ್ಗೆ ಏನನ್ನೂ ಹೇಳುವುದಿಲ್ಲ' ಎಂದಿದ್ದಾರೆ.

ಗಂಗೋಪಾಧ್ಯಾಯರ ವಿರುದ್ಧ ಕತ್ತಿ ಮಸೆಯುತ್ತಿರುವ ತಸ್ಲೀಮಾ:
ವಿವಾದಗಳ ಮಹಾತಾಯಿ ತಸ್ಲೀಮಾ ನಸ್ರೀನ್ ಅಸಲಿಗೆ ಸುನೀಲ್ ಗಂಗೋಪಾಧ್ಯಾಯ ಅವರ ಮೇಲೇಕೆ ಇಂತಹ ಗಂಭೀರ ಆರೋಪ ಮಾಡುತ್ತಿದ್ದಾಳೆ ಎಂಬುದನ್ನು ಕೆದಕಿದಾಗ ಮುಸ್ಲಿಮರ ಕುರಿತಾದ Najrool Islam ಎಂಬ ಪುಸ್ತಕವನ್ನು ತಸ್ಲೀಮಾ ರಚಿಸಿದ್ದಾರೆ. ಆದರೆ ಇದರ ಮೇಲೆ ನಿಷೇಧ ಹೇರಲಾಗಿದೆ. ಈ ಸಂಬಂಧ ಸುನೀಲ್ ಗಂಗೋಪಾಧ್ಯಾಯ ಅವರ ವಿರುದ್ಧ ತಸ್ಲೀಮಾ ಕತ್ತಿ ಮಸೆಯುತ್ತಿದ್ದಾರೆ. ಇದು ವಿವಾದದ ಕೇಂದ್ರ ಬಿಂದು ಎಂಬುದು ಸ್ಪಷ್ಟವಾಗುತ್ತದೆ.

'ಗಂಗೋಪಾಧ್ಯಾಯ ತುಂಬಾ ಪ್ರಭಾವಿ ವ್ಯಕ್ತಿ. ಆತನ ಎದುರು ನಿಲ್ಲಲು ಯಾರಿಗೂ ಧೈರ್ಯವಿಲ್ಲ. Najrool Islam ಎಂಬ ನನ್ನ ಪುಸ್ತಕವನ್ನು ನಿಷೇಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಇದೇ ಗಂಗೋಪಾಧ್ಯಾಯರು ನನ್ನ ಮತ್ತೊಂದು ಪುಸ್ತಕ Dwikhandito ನಿಷೇಧಿಸಿರುವುದಕ್ಕೆ ಹೊಣೆಯಾಗಿದ್ದಾರೆ. ಹೀಗೆ ನನ್ನ ವಿರುದ್ಧ ಅವರದು ದ್ವಿಮುಖ ನೀತಿಯಾಗಿದೆ' ಎಂದು ತಸ್ಲೀಮಾ ಶ್ಯಾನೆ ಬೇಜಾರು ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+