Get Updates
Get notified of breaking news, exclusive insights, and must-see stories!

ಶಬರಿಮಲೆ ಬದಲು ಹಳ್ಳಿಗಳಿಗೆ ಹೋಗಿ: ಕಾರ್ಯಕರ್ತೆಯರಿಗೆ ತಸ್ಲೀಮಾ ಸಲಹೆ

ನವದೆಹಲಿ, ನವೆಂಬರ್ 16: ಶಬರಿಮಲೆ ದೇವಸ್ಥಾನದೊಳಗೆ ಪ್ರವೇಶಿಸಲು ಹಠ ಮಾಡುತ್ತಿರುವ ಮಹಿಳಾ ಕಾರ್ಯಕರ್ತರನ್ನು ಬಾಂಗ್ಲಾದೇಶದ ಲೇಖಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ ಪ್ರಶ್ನಿಸಿದ್ದಾರೆ.

ಮಹಿಳಾ ಕಾರ್ಯಕರ್ತರು ಅದರ ಬದಲು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ.

'ಶಬರಿಮಲೆಗೆ ಪ್ರವೇಶಿಸಲು ಮಹಿಳಾ ಕಾರ್ಯಕರ್ತೆಯರು ಯಾಕೆ ಅಷ್ಟೊಂದು ಉತ್ಸುಕರಾಗಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.

do not understand women activists are eager to enter Sabarimala taslima nasreen

ಅದರ ಬದಲು ಅವರು ಮಹಿಳೆಯರು ಕೌಟುಂಬಿಕ ಹಿಂಸೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಆರೋಗ್ಯ-ಸಮಸ್ಯೆ ಮತ್ತು ಉದ್ಯೋಗ ಪಡೆಯುವ ಸ್ವಾತಂತ್ರ್ಯ ಇಲ್ಲದಿರುವುದು ಅಥವಾ ಸಮಾನ ವೇತನ ಸಿಗದಿರುವುದು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುವ ಹಳ್ಳಿಗಳಿಗೆ ಪ್ರವೇಶಿಸಲಿ' ಎಂದು ಸಲಹೆ ನೀಡಿದ್ದಾರೆ.

ಶಬರಿಮಲೆ ದೇವಸ್ಥಾನದೊಳಗೆ ಪ್ರವೇಶ ಮಾಡುವುದಾಗಿ ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಸೇರಿದಂತೆ ಅನೇಕರು ಪಟ್ಟು ಹಿಡಿದಿರುವುದರಿಂದ ಕೇರಳದಲ್ಲಿ ಉದ್ವಿಗ್ನತೆ ಭುಗಿಲೆದ್ದ ಹಿನ್ನೆಲೆಯಲ್ಲಿ ತಸ್ಲೀಮಾ ನಸ್ರೀನ್ ಟ್ವಿಟ್ಟರ್‌ನಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಶಬರಿಮಲೆಯಲ್ಲಿ ಶುಕ್ರವಾರ ದೇವಸ್ಥಾನದ ಬಾಗಿಲು ತೆರೆದಿದ್ದು, ಇನ್ನು ಎರಡು ತಿಂಗಳವರೆಗೂ ಭಕ್ತರ ಪ್ರವೇಶಕ್ಕೆ ಮುಕ್ತವಾಗಿರಲಿದೆ. ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ಅಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ನೀಡುವ ವಿಚಾರದಲ್ಲಿ ಭಾರಿ ವಿವಾದ ಸೃಷ್ಟಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+