ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡರ್ಟಿ ಸಚಿವರು ಶಿಕ್ಷೆಯಿಂದ ತಾತ್ಕಾಲಿಕ ಎಸ್ಕೇಪ್

By Mahesh
|
Google Oneindia Kannada News

BJP Ministers Dirty Picture Watching
ಬೆಂಗಳೂರು, ಫೆ.15 : ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ಹೊತ್ತಿರುವ ಮೂವರು ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಭಾಧ್ಯಕ್ಷ ಕೆಜಿ ಬೋಪಯ್ಯ ಅವರು ನಿರಾಕರಿಸಿರುವುದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಜೊತೆಗೆ ಮೂವರು ಸಚಿವರ ವಿರುದ್ಧ ವಿರೋಧ ಪಕ್ಷಗಳೇ ಬೇಕಾದರೆ ಕ್ರಿಮಿನಲ್ ಮೊಕದ್ದಮೆ ಹೂಡಲಿ ಎಂದು ಬೋಪಯ್ಯ ಅವರು ಸವಾಲೆಸೆದಿರುವುದು ವಿಪಕ್ಷಗಳನ್ನು ಕೆರಳಿಸಿದೆ. ಈ ಮಧ್ಯೆ ವಕೀಲ ಧರ್ಮಪಾಲ ಗೌಡ ಅವರು ಪ್ರಕರಣದ ಸಂಬಂಧ ಖಾಸಗಿ ದೂರು ಸಲ್ಲಿಸಿದ್ದು, ವಿಧಾನಸೌಧ ಪೊಲೀಸರಿಗೆ ಫೆ. 27ರೊಳಗಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಕೋರ್ಟ್ ಆದೇಶಿಸಿದೆ.[ಪೂರ್ಣ ವಿವರ ಓದಿ...]

ಕಳಂಕಿತರಾಗಿರುವ ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಮತ್ತು ಕೃಷ್ಣ ಜೆ ಪಾಲೇಮಾರ್ ಅವರು ಸಭಾಪತಿ ಬೋಪಯ್ಯ ನೀಡಿರುವ ಷೋಕಾಸ್ ನೋಟಿಸ್ ಗೆ ಉತ್ತರಿಸಲು ಕಾಲಾವಕಾಶ ಕೇಳಿದ್ದಾರೆ. ಅದಕ್ಕೆ ಬೋಪಯ್ಯ ಕೂಡಾ ಒಪ್ಪಿದ್ದಾರೆ. ಆದರೆ ಸಚಿವರನ್ನು ವಜಾ ಮಾಡುವ ಕಾಂಗ್ರೆಸ್ ಬೇಡಿಕೆಯನ್ನು ತಿರಸ್ಕರಿಸಲಾಗಿದೆ.

ಮೊಬೈಲ್ ಎಲ್ಲಿ?: ಕಳಂಕಿತ ಸಚಿವರ ವಿವಾದಿತ ಮೊಬೈಲ್‌ಗಳನ್ನು ಈವರೆಗೂ ವಶಪಡಿಸಿಕೊಂಡಿಲ್ಲ. ಸದನ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಆಡಳಿತ ಪಕ್ಷದವರೇ ಏಕೆ ವಹಿಸಿಕೊಂಡಿದ್ದಾರೆ? ಮೊಬೈಲ್‌ನಲ್ಲೇ ಇಷ್ಟು ರಂಪ ಮಾಡಿದ ಶಾಸಕರಿಗೆ ಐಪ್ಯಾಡ್ ನೀಡಿದರೆ ಏನಾಗಬಹುದು? ಎಂಬ ಆತಂಕವನ್ನು ವಿಪಕ್ಷಗಳು ವ್ಯಕ್ತಪಡಿಸಿದೆ.

ಇದೀಗ ಬಂದ ಸುದ್ದಿಯಂತೆ...ಸದನ ಸಮಿತಿಗೆ ತಮ್ಮ ಪಕ್ಷದ ಸದಸ್ಯರ ಹೆಸರನ್ನು ಸೂಚಿಸದಿರಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ನಿರ್ಧರಿಸಿದೆ.

ಡಿಸೆಂಬರ್ 2011ರಲ್ಲಿ 75 ವಿಧಾನಪರಿಷತ್ ಸದಸ್ಯರಿಗೆ ಐಪ್ಯಾಡ್‌ಗಳನ್ನು ನೀಡಲಾಗಿದ್ದು, ವಿಧಾನಸಭಾ ಸದಸ್ಯರಿಗೂ ನೀಡಬೇಕೆಂದು ಕಾರ್ಯದರ್ಶಿಗಳು ಶಿಫಾರಸು ಮಾಡಿದ್ದಾರೆ. ಈ ನಡುವೆ ಅಶ್ಲೀಲ ಚಿತ್ರ ವೀಕ್ಷಕ ಸಚಿವ ಲಕ್ಷ್ಮಣ ಸವದಿ ಅವರ ಹುಟ್ಟುಹಬ್ಬದ ಸಮಾರಂಭಕ್ಕೆ ತಯಾರಿ ಜೋರಾಗಿ ನಡೆದಿದೆ.

English summary
Sleaze row : Ministers Lakshman Savadi, CC Patil and Krishna J. Palemar have been issued show cause notice and given time to reply. The trio likely to escape from facing any case as Karnataka Assembly speaker K.G. Bopaiah dares opposition leasers to put case against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X