Laxman Savadi: ಮುಂದುವರೆದ ಬಿಜೆಪಿ ಆಪರೇಷನ್: ಲಕ್ಷ್ಮಣ್ ಸವದಿಗೆ ಬಿಗ್ ಆಫರ್ ಕೊಟ್ಟ ಬಿಜೆಪಿ ಹೈಕಮಾಂಡ್ ?
ಬೆಂಗಳೂರು, ಜನವರಿ 30: ಲೋಕಸಭಾ ಚುನಾವಣೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ನಾಯಕರು, ಮೂಲ ಬಿಜೆಪಿಗರನ್ನ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನ ಬಿಜೆಪಿಗೆ ಮರಳಿ ಕರೆದಂದ ಬಳಿಕ ಲಕ್ಷ್ಮಣ್ ಸವದಿ ಅವರನ್ನ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಹೈಕಮಾಂಡ್ ಹಲವು ಬಿಜೆಪಿ ನಾಯಕರಿಗೆ ಜವಾಬ್ದಾರಿಯನ್ನ ನೀಡಿದೆ.
ಹೌದು, ಬಿಜೆಪಿ ಟಿಕೆಟ್ ಸಿಗದೇ ಕಾಂಗ್ರೆಸ್ ಸೇರಿ ಅಥಣಿ ಕ್ಷೇತ್ರದಿಂದ ಶಾಸಕರಾಗಿಯೂ ಲಕ್ಷ್ಮಣ ಸವದಿ ಗೆದ್ದು ಬಂದರು. ಆದರೆ ಸವದಿಯವರು ಬಿಜೆಪಿಗೆ ವಾಪಸ್ ಬರ್ತಾರೆ ಅನ್ನೋ ಮಾತಿದೆ. ಆದರೆ ನಾನು ಬಿಜೆಪಿಗೆ ಹೋಗಲ್ಲ ಎಂದು ಲಕ್ಷ್ಮಣ್ ಸವದಿ ಅವರು ಹೇಳಿದ್ದಾರೆ. ಬೆಳಗಾವಿ ಭಾಗದ ಹಲವು ಬಿಜೆಪಿ ನಾಯಕರಿಗೆ ಲಕ್ಷ್ಮಣ್ ಸವದಿ ಅವರನ್ನ ಬಿಜೆಪಿಗೆ ಕರೆತರುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿಯನ್ನ ನೀಡಿದೆ.

ಈಗಾಗಲೇ ಬೆಳಗಾವಿಯ ಸ್ಥಳೀಯ ಬಿಜೆಪಿ ನಾಯಕರು ಶಾಸಕರಾದ ಲಕ್ಷ್ಮಣ್ ಸವದಿ ಅವರನ್ನ ಸಂಪರ್ಕಿಸಿದ್ದು, ಸವದಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಹೈಕಮಾಂಡ್ ಕೊಟ್ಟಿರುವ ಬಿಗ್ ಆಫರ್ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆಯನ್ನ ಬಿಜೆಪಿ ಹೈಕಮಾಂಡ್ ನೀಡಿರುವ ಬಗ್ಗೆ ಲಕ್ಷ್ಮಣ್ ಸವದಿ ಜೊತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಸ್ಥಾನಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.
ಇನ್ನೂ ಲಕ್ಷ್ಮಣ್ ಸವದಿ ಅವರನ್ನ ಪಕಕ್ಷ ಕರೆತರುವ ಕುರಿತು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, ನಾವು ಪಕ್ಷಕ್ಕೆ ಬರಲಿ ಅಂತೇವಿ ಕೇಂದ್ರದ ಮತ್ತು ರಾಜ್ಯದ ನಾಯಕರು ಎನೂ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕು. ಲಕ್ಷ್ಮಣ ಸವದಿಯನ್ನ ಕರೆದುಕೊಂಡು ಬರುವ ಜವಾಬ್ದಾರಿ ಎಲ್ಲರ ಹೆಗಲಿಗಿದೆ. ನಾನಿರಬಹುದು, ಈರಣ್ಣಾ ಕಡಾಡಿ, ಮಹಾಂತೇಶ್ ದೊಡ್ಡಗೌಡರ, ರಮೇಶ್ ಕತ್ತಿ ಸೇರಿ ಜಿಲ್ಲೆಯ ಎಲ್ಲ ನಾಯಕರ ಮೇಲಿದೆ.ಕೇಂದ್ರದ ಮತ್ತು ರಾಜ್ಯದ ನಾಯಕರು ಮುಂದೆ ಅದನ್ನ ನೋಡ್ಕೊತೇವಿ ಎಂದು ಹೇಳಿದ್ದಾರೆ.

ಲಕ್ಷ್ಮಣ್ ಸವದಿ ನಿವಾಸದಲ್ಲಿ ಲಂಚ್ ಮೀಟಿಂಗ್ ವಿಚಾರವಾಗಿ ಮಾತನಾಡಿ, ಯಾವಾಗಲೂ ನಾವು ಕೂಡುತ್ತಿರುತ್ತೇವೆ, ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಪಕ್ಷಾತೀತವಾಗಿ ಸೇರ್ತೆವಿ. ಬಿಜೆಪಿಗೆ ಸವದಿಯವರು ಯಾವಾಗ ಬರ್ತಾರೆ ಎಂಬುದನ್ನ ನೋಡಬೇಕು ಅವರು ಒಪ್ಪಿಗೆ ಕೊಡಬೇಕು. ಕೇಂದ್ರದ ಮುಖಂಡರ ಜತೆಗೆ ಚರ್ಚೆ ಆಗಬೇಕು. ಲಕ್ಷ್ಮಣ್ ಸವದಿಯವರು ಬರಲಿ ಅನ್ನೋದು ನಮ್ಮ ಆಶಯ. ಬಂದರೆ ಪಕ್ಷಕ್ಕೆ, ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತೆ. ನಮ್ಮ ಪಕ್ಷದಿಂದ ಹೊರ ಹೋದವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ. ಸವದಿಯರಿಗೆ ನಾವು ಕೂಡ ಆಹ್ವಾನ ಕೊಟ್ಟಿದ್ದೇವೆ. ನಮ್ಮ ರಾಜ್ಯಾಧ್ಯಕ್ಷರು, ಎಲ್ಲರೂ ಕೂಡ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಎಷ್ಟು ಜನ ಬಿಜೆಪಿಗೆ ಬರ್ತಾರೆ ಅಂತಾ ಹೇಳಲು ಆಗಲ್ಲ.ಬಿಟ್ಟು ಹೋದವರು ಎಲ್ಲರೂ ಬರಬಹುದು. ಬಿಜೆಪಿಯಲ್ಲಿದ್ದವರು ಹೊರಗೆ ಇರುವುದೇ ಕಷ್ಟ ಹೀಗಾಗಿ ನಮ್ಮ ಪಕ್ಷಕ್ಕೆ ಬರ್ತಾರೆ. ಚುನಾವಣೆ ಮೊದಲು ಸವದಿಯವರು ಪಕ್ಷಕ್ಕೆ ಬಂದ್ರೆ ಒಳ್ಳೆಯದಾಗುತ್ತದೆ. ಸವದಿಯವರು ಪಕ್ಷಕ್ಕೆ ಬರಲು ಒಲವು ತೋರಿಸಬಹುದು ಅನಿಸುತ್ತದೆ ಎಂದು ಹೇಳಿದರು.
ಲಕ್ಷ್ಮಣ ಸವದಿ ಬಿಜೆಪಿ ಸೇರ್ತಾರೆ ಎಂಬ ವಿಚಾರವಾಗಿ ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ, ಜಗದೀಶ್ ಶೆಟ್ಟರ್ ಅವರು ಎಂಟು ತಿಂಗಳಿಂದ ಅಲ್ಲಿದ್ರೂ. ಅವರ ಮನಸ್ಸು ಬಿಜೆಪಿಯಲ್ಲಿತ್ತು ದೈಹಿಕವಾಗಿ ಅಲ್ಲಿದ್ದರು. ಅವರು ಬಂದ್ರೂ ಒಳ್ಳೆಯದಾಯಿತು ಶಕ್ತಿ ತುಂಬಿದರು. ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹೇಳುತ್ತೇನೆ. ಲಕ್ಷ್ಮಣ ಸವದಿಯವರು ಬಿಜೆಪಿಗೆ ಬರುವ ಕುರಿತು ಈಗಾಗಲೇ ಚರ್ಚೆ ಶುರುವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಚರ್ಚೆ ಪ್ರಾರಂಭ ಆಗಿದೆ. ನಮ್ಮನ್ನೂ ಕೂಡ ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ. ಅವರು ಪಕ್ಷಕ್ಕೆ ಬಂದ್ರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ, ಲಕ್ಷ್ಮಣ್ ಸವದಿಯವರನ್ನ ಕರೆತರುವ ಚರ್ಚೆಯಲ್ಲಿ ನಾನು ಕೂಡ ಒಬ್ಬ ಎಂದು ಹೇಳಿದರು.
ಸವದಿ ಅವರಿಗೆ ಸ್ಥಾನ ಮಾನ ಕೊಡುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಾನಮಾನಕ್ಕಾಗಿ ಯಾರು ಬರುವುದಿಲ್ಲ. ಕಾಂಗ್ರೆಸ್ ಗೆ ಹೋದಾಗ ಏನು ಸ್ಥಾನಮಾನ ಕೇಳಿ ಹೋಗಿದ್ದರು ಅವರು ಏನು ಕೊಟ್ರೂ. ನಮ್ಮ ಪಕ್ಷಕ್ಕೆ ಬಂದ್ರೇ ಏನೂ ಕೊಡಬೇಕು ನಮ್ಮನ್ನ ಕರೆದು ನಿರ್ಣಯ ಮಾಡ್ತಾರೆ. ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರು ಹೇಳಿದಂತೆ ಗೌರವಯುತವಾಗಿ ಅವರನ್ನ ಭರಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications