Get Updates
Get notified of breaking news, exclusive insights, and must-see stories!

‘ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಬಿಜೆಪಿಗೆ ಬರ್ತಾರೆ’

ಶಿವಮೊಗ್ಗ: ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವೇಳೆ ಬೇಸರ ವ್ಯಕ್ತಪಡಿಸಿದ್ದ ಈಶ್ವರಪ್ಪ ಈಗ ಸ್ಫೋಟಕ ಹೇಳಿಕೆ ನೀಡಿದ್ದಾರೆ. 'ಕಾಂಗ್ರೆಸ್ ಸೇರಿರುವ ಶೆಟ್ಟರ್ ಬಿಜೆಪಿಗೆ ವಾಪಸ್ ಬರ್ತಾರೆ, ಇದು ಖಚಿತ' ಎನ್ನುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಜಗದೀಶ್ ಶೆಟ್ಟರ್ (Jagadish Shettar) ಬಗ್ಗೆ ಕೆ.ಎಸ್.ಈಶ್ವರಪ್ಪ (KS Eshwarappa) ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಲಿಂಗಾಯತ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಿಜೆಪಿ (BJP) ಬಿಟ್ಟು ಕಾಂಗ್ರೆಸ್ ಸೇರಿದ ಬಳಿಕ ಕಮಲ ಪಾಳಯ ಕೆಂಡವಾಗಿದೆ. ಹೀಗಾಗಿಯೇ ಇವರಿಬ್ಬರನ್ನೂ ಸೋಲಿಸಿಯೇ ಸಿದ್ಧ ಎಂದು ಪಣತೊಟ್ಟಿರುವ ಕಮಲ ಪಡೆ ನಾಯಕರು, ಶೆಟ್ಟರ್ ಮತ್ತು ಸವದಿ ಕ್ಷೇತ್ರದಲ್ಲಿ ಭಾರಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಟಿಕೆಟ್ ಪಡೆದು ಅಖಾಡಕ್ಕೆ ಇಳಿದಿರುವ ಜಗದೀಶ್ ಶೆಟ್ಟರ್ ಗೆಲ್ಲಲು ರಣತಂತ್ರ ಹೂಡಿದ್ದಾರೆ. ಆದರೆ ಈ ಹೊತ್ತಲ್ಲೇ ಈಶ್ವರಪ್ಪ ನೀಡಿರುವ ಹೇಳಿಕೆ ಹಲ್‌ಚಲ್ ಎಬ್ಬಿಸಿದೆ.

Eshwarappa said that Shettar will rejoin BJP if Congress come to power

'ಶೆಟ್ಟರ್ ಮೈಯಲ್ಲಿ ಹಿಂದೂ ರಕ್ತ'

ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಮೈಯಲ್ಲಿ ಹರಿಯುತ್ತಿರುವುದು ಹಿಂದೂ ರಕ್ತ. ಅವರು ಬಿಜೆಪಿಗೆ ವಾಪಸ್ ಆಗುವುದು ಖಚಿತ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ಭವಿಷ್ಯ ನುಡಿದಿದ್ದಾರೆ. ಟಿಕೆಟ್ ಸಿಗದ ಸಿಟ್ಟಿಗೆ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ ಅಷ್ಟೇ. ಆದರೆ ಕಾಂಗ್ರೆಸ್‌ನ 2 ಬಣಗಳ ಪೈಕಿ ಯಾವ ಬಣಕ್ಕೆ ಶೆಟ್ಟರ್ ಸೇರುತ್ತಾರೆ ಎಂಬುದನ್ನ ನಿರ್ಧರಿಸಲಿ ಎಂದರು. ಶೆಟ್ಟರ್ ಮೈಯಲ್ಲಿ ಹರಿಯುತ್ತಿರುವುದು ಹಿಂದೂ ರಕ್ತ. ಆದಷ್ಟು ಬೇಗ ಅವರು ವಾಪಸ್ ಬಿಜೆಪಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾಲಿ & ಮಾಜಿಗಳ ಕದನ

ಈಗಿನ ಬೆಳವಣಿಗೆ ಗಮನಿಸುತ್ತಿದ್ದರೆ ಹಾಲಿ ಬಿಜೆಪಿ ನಾಯಕರು VS ಮಾಜಿ ಬಿಜೆಪಿ ನಾಯಕರ ನಡುವೆ ಭೀಕರ ಚುನಾವಣಾ ಕದನಕ್ಕೆ ಕರ್ನಾಟಕ ಸಾಕ್ಷಿಯಾಗುವುದು ಬಹುತೇಕ ಪಕ್ಕಾ. ಒಂದು ಕಡೆ ಬಿಜೆಪಿ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್‌ಗೆ ಖುದ್ದು ಬಿಎಸ್‌ವೈ ಅವರನ್ನ ಅಖಾಡಕ್ಕೆ ಇಳಿಸಿದೆ. ಇನ್ನೊಂದು ಕಡೆ ಪಕ್ಷ ಬಿಟ್ಟಿರುವ ನಾಯಕರು ಮರಳಿ ಬಿಜೆಪಿಗೆ ಬಂದೇ ಬರುತ್ತಾರೆ ಎಂಬ ಹೇಳಿಕೆಯನ್ನ ಈಶ್ವರಪ್ಪ ನೀಡಿದ್ದಾರೆ. ಇದು ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಮಾಡಿದೆ.

ಬಿಜೆಪಿ ವರಿಷ್ಠರಿಂದ ಪ್ರಚಾರ?

ಬಿಜೆಪಿ ತಮಗೆ ಟಿಕೆಟ್ ನೀಡಿಲ್ಲ ಅಂತಾ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷಣ್ ಸವದಿ ವಿರುದ್ಧ ಬಿಜೆಪಿ ತೊಡೆತಟ್ಟಿದೆ. ಈ ಕಾರಣಕ್ಕೆ ಜಗದೀಶ್ ಶೆಟ್ಟರ್ ಮತ್ತು ಲಕ್ಷಣ್ ಸವದಿ ಸ್ಪರ್ಧಿಸುವ ಕ್ಷೇತ್ರಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಈ ಇಬ್ಬರೂ ನಾಯಕರ ಸೋಲಿಗೆ ರಣತಂತ್ರ ಕೂಡ ಸಿದ್ಧವಾಗುತ್ತಿದೆ. ಇದಕ್ಕಾಗಿ ಬಿಜೆಪಿಯ ಕೇಂದ್ರದ ಘಟಾನುಘಟಿ ನಾಯಕರೇ ಶೆಟ್ಟರ್ ಮತ್ತು ಸವದಿ ಕ್ಷೇತ್ರದಲ್ಲಿ ಭಾರಿ ಪ್ರಚಾರ ನಡೆಸುವ ಸಾಧ್ಯತೆ ಇದೆ.

Eshwarappa said that Shettar will rejoin BJP if Congress come to power

ಒಟ್ನಲ್ಲಿ ಈಶ್ವರಪ್ಪ ಹೇಳಿಕೆ ಒಂದು ಕಡೆ ಕಾಂಗ್ರೆಸ್ ನಾಯಕರ ನಡುವೆಯೇ ಗೊಂದಲ ಸೃಷ್ಟಿಸಿದೆ. ಚುನಾವಣೆ ವೇಳೆ ಟಿಕೆಟ್ ಸಿಗದ ಕೋಪಕ್ಕೆ ಸಾಕಷ್ಟು ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಮುಂದೆ ಇದು ಉಲ್ಟಾ ಆದರೆ ಪರಿಸ್ಥಿತಿ ಹೇಗೆ ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ. ಆದರೆ ಇದನ್ನೆಲ್ಲಾ ಗಮನಿಸುತ್ತಿರುವ ಮತದಾರ ಪ್ರಭು ಯಾವ ರೀತಿ ಉತ್ತರ ನೀಡುತ್ತಾನೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+