ಬೆಳಗಾವಿ ಜಿಲ್ಲೆಯಲ್ಲಿ ಪ್ರಾಬಲ್ಯ, ಪ್ರತಿಷ್ಠೆಗಾಗಿ ಸಂಘರ್ಷ: ಪಕ್ಷ, ಸಿದ್ದಾಂತ ನಗನ್ಯ- ಗ್ರೌಂಡ್ ರಿಪೋರ್ಟ್
ಬೆಳಗಾವಿ, ಮೇ 05: ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ರಾಜಕಾರಣ ಕುತೂಹಲ ಕೆರಳಿಸಿದೆ. ಅದರಲ್ಲೂ ಅಥಣಿ ವಿಧಾನಸಭಾ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಲ್ಲಿ ಪಕ್ಷ ಹಾಗೂ ಸಿದ್ದಾಂತಗಳು ನಗನ್ಯವಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ವ್ಯಕ್ತಿ ಅಥವಾ ಕೌಟುಂಬಿಕ ಪ್ರಾಬಲ್ಯವೇ ಇಲ್ಲಿನ ರಾಜಕಾರಣದ ಮೂಲ ಆಧಾರವಾಗಿದೆ.
ಬೆಳಗಾವಿ ಜಿಲ್ಲೆಯು 18 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಬೆಂಗಳೂರು ನಗರ 28 ಕ್ಷೇತ್ರಗಳನ್ನು ಹೊಂದಿದೆ. ಬೆಂಗಳೂರು ನಗರದ ನಂತರ ಬೆಳಗಾವಿಯೇ ದೊಡ್ಡ ಜಿಲ್ಲೆಯಾಗಿದೆ. ಎರಡನೇ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಬೆಳಗಾವಿಯನ್ನು ಮಹತ್ವದ ಜಿಲ್ಲೆಯೆಂದು ಪರಿಗಣಿಸಲಾಗಿದೆ.

ಬಿಜೆಪಿಯಿಂದ ಪಕ್ಷಾಂತರಗೊಂಡು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿರುವ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನಡುವಿನ ಸಂಘರ್ಷದಿಂದಾಗಿ ಅಥಣಿ ಕ್ಷೇತ್ರವು ಈ ಬಾರಿ ರಾಜ್ಯದ ಗಮನ ಸೆಳೆದಿದೆ.
ಬಿಜೆಪಿಯ ಮಹೇಶ ಕುಮಠಳ್ಳಿ ಮೂರನೇ ಬಾರಿಗೆ ಪುನರಾಯ್ಕೆ ಬಯಸಿದ್ದರೂ, ಸವದಿ ಮತ್ತು ರಮೇಶ್ ನಡುವೆ ಪೈಪೋಟಿ ಏರ್ಪಟ್ಟಿದೆ. ಐವರು ಜಾರಕಿಹೊಳಿ ಸಹೋದರರಲ್ಲಿ ರಮೇಶ್ ಸಹ ಒಬ್ಬರು. ಅವರ ಪ್ರಾಬಲ್ಯವು ಜಿಲ್ಲೆಯ ರಾಜಕೀಯ ಚಿತ್ರಣವನ್ನು ಬದಲಾಯಿಸುತ್ತಿದೆ.
2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಉಂಟಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ( ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ) ಹಿನ್ನಡೆಯನ್ನು ಅನುಭವಿಸಿದ್ದಾರೆ.

ಜಿಲ್ಲೆಯಾದ್ಯಂತ ಸುಮಾರು 100 ಶಾಖೆಗಳನ್ನು ಹೊಂದಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸೇರಿದಂತೆ ಸಹಕಾರಿ ಸಂಸ್ಥೆಗಳು, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್, 17 ಖಾಸಗಿ ಮತ್ತು ಒಂಬತ್ತು ಸಹಕಾರಿ ಘಟಕಗಳು ಸೇರಿದಂತೆ 26 ಕಾರ್ಖಾನೆಗಳನ್ನು ಹೊಂದಿರುವ ಸಕ್ಕರೆ ಉತ್ಪಾದನಾ ಉದ್ಯಮದಂತಹ ಲಾಭದಾಯಕ ವಲಯಗಳ ಮೇಲೆ ನಿಯಂತ್ರಣ ಸಾಧಿಸಲು ರಮೇಶ್ ಮತ್ತು ಸವದಿ ಪ್ರಯತ್ನಿಸುತ್ತಿದ್ದಾರೆ.
ಸುರೇಶ ಅಂಗಡಿ, ಉಮೇಶ ಕತ್ತಿ, ಆನಂದ ಮಾಮನಿ ಮುಂತಾದ ನಾಯಕರ ನಿಧನದ ನಂತರ ಲಿಂಗಾಯತ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ನಾಯಕತ್ವ ಶೂನ್ಯವಾಗಿದೆ. ಪ್ರಭಾಕರ ಕೋರೆ ಅವರಂತಹವರು ರಾಜಕೀಯದಿಂದ ದೂರವಾಗುತ್ತಿದ್ದಾರೆ. ಲಿಂಗಾಯತರಾದ ಸವದಿ ಅವರು ಸಮುದಾಯದ ನಾಯಕರಾಗಿ ಹೊರಹೊಮ್ಮಲು ಆಶಿಸುತ್ತಿದ್ದಾರೆ.
ಆದರೆ ರಮೇಶ್ ಅವರು ಪ್ರಬಲವಾದ ಪಂಚಮಸಾಲಿ ಲಿಂಗಾಯತಗಳ ಬೆಂಬಲವನ್ನು ಪಡೆಯುವುದರ ಹೊರತಾಗಿ ತಮ್ಮ ಎಸ್‌ಟಿ ಸಮುದಾಯಗಳ ಮತಗಳನ್ನು ಕ್ರೋಢೀಕರಿಸುವ ಮೂಲಕ ಜಿಲ್ಲೆಯ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

'ನನ್ನನ್ನು ಸೋಲಿಸುವಲ್ಲಿ ರಮೇಶ್ ಒಮ್ಮೆ ಯಶಸ್ವಿಯಾಗಿರಬಹುದು. ಆದರೆ ಈ ಬಾರಿ ಅವರು ಮಣ್ಣು ಮುಕ್ಕುತ್ತಾರೆ' ಎಂದು ಸವದಿ ಹೇಳಿಕೊಂಡಿದ್ದಾರೆ. ಅವರು 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್‌ನ ಕುಮಠಳ್ಳಿ ಅವರು 2,331 ಮತಗಳ ಅಂತರದಿಂದ ಜಯಗಳಿಸಿದ್ದರು.
2018ರಲ್ಲಿಯೂ ಸಹ ರಮೇಶ ತನ್ನ ಆಪ್ತ ಕುಮಟಳ್ಳಿ ಪರ ಹೋರಾಟ ನಡೆಸಿದ್ದರು. ಇದು ನಿಜವಾಗಿ ತಮ್ಮ ಗೆಲುವು ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವ ರಮೇಶ ತಮ್ಮ ಸ್ವಕ್ಷೇತ್ರ ಗೋಕಾಕಕ್ಕಿಂತ ಅಥಣಿಯಲ್ಲಿ ಪ್ರಚಾರಕ್ಕೆ ಹೆಚ್ಚು ಸಮಯ ಮೀಸಲಿಟ್ಟಿದ್ದರು.
2013ರಲ್ಲಿ ಸೋತಿದ್ದರಿಂದ 2018ರ ಚುನಾವಣೆಗೆ ಸ್ಪರ್ಧಿಸಲು ನನಗೆ ಇಷ್ಟವಿರಲಿಲ್ಲ. ರಮೇಶಣ್ಣ ನನ್ನನ್ನು ಸ್ಪರ್ಧಿಸಿ ಗೆಲ್ಲುವಂತೆ ಮಾಡಿದರು ಎಂದು ಕುಮಠಳ್ಳಿ ಹೇಳಿದ್ದಾರೆ. ರಮೇಶ್ ಅವರು ಜೆಡಿ (ಎಸ್)-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡುವಲ್ಲಿ ಯಶಸ್ವಿಯಾಗಿದ್ದರು. 2019 ರಲ್ಲಿ 17 ಶಾಸಕರು ಕೇಸರಿ ಪಕ್ಷಕ್ಕೆ ಪಕ್ಷಾಂತರಗೊಳ್ಳುವ ಮೂಲಕ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವಂತೆ ಮಾಡಿದ್ದರು. ರಮೇಶ್ ಅವರನ್ನು ಹಿಂಬಾಲಿಸಿದ ಕುಮಠಳ್ಳಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

ಸವದಿ ಅವರ ಗೆಲುವಿಗೆ ಶ್ರಮಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಏತನ್ಮಧ್ಯೆ, ಮಾರ್ಚ್ 2021 ರಲ್ಲಿ ಸಿಡಿ ಪ್ರಕರಣದಿಂದಾಗಿ ರಮೇಶ್ ಅವರು ಸಚಿವ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಜುಲೈ 2021 ರಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಸವದಿ ಅವರ ಕ್ಯಾಬಿನೆಟ್ ಸ್ಥಾನವನ್ನು ಕಳೆದುಕೊಂಡರು.
ಸವದಿ ಬಿಜೆಪಿ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದಾಗಲೇ ರಮೇಶ್ ಮತ್ತೆ ಅವರ ದಾರಿಗೆ ಅಡ್ಡಬಂದು ಬಂದು ಕುಮಠಳ್ಳಿಗೆ ಟಿಕೆಟ್ ಸಿಗುವಂತೆ ಮಾಡಿದರು. ಇದು ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಪ್ರೇರೇಪಿಸಿತು.
ಅಥಣಿ ಕ್ಷೇತ್ರದಲ್ಲಿ ಜಾತಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕುಮಠಳ್ಳಿಯವರು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. 70,000 ಲಿಂಗಾಯತ ಮತದಾರರಲ್ಲಿ ಸುಮಾರು ಶೇ 40 ರಷ್ಟಿರುವುದರಿಂದ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸವದಿ ಗಾಣಿಗ ಲಿಂಗಾಯತರು. ಅವರು ಕಡಿಮೆ ಮತಗಳನ್ನು ಹೊಂದಿರುವ ಸಮುದಾಯ. ಆದರೆ 2A ವರ್ಗದ ಮೀಸಲಾತಿಯ ಗೊಂದಲದ ಹಿನ್ನೆಲೆಯಲ್ಲಿ ಪಂಚಮಸಾಲಿ ಮತಗಳ ಲಾಭ ಪಡೆಯಲು ಸವದಿ ನೋಡುತ್ತಿದ್ದಾರೆ.
ಇದು ಪಕ್ಷ ಹಾಗೂ ಸಿದ್ದಾಂತಗಳ ನಡುವಿನ ಯುದ್ದವಲ್ಲ. ಇದು ಕೇವಲ ವ್ಯಕ್ತಿ ಅಥವಾ ಕುಟುಂಬಗಳ ನಡುವಿನ ಪ್ರಾಬಲ್ಯ ಮತ್ತು ಪ್ರತಿಷ್ಠೆಗಾಗಿ ನಡೆಯುತ್ತಿರುವ ಸಂಘರ್ಷವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ












Click it and Unblock the Notifications