Get Updates
Get notified of breaking news, exclusive insights, and must-see stories!

Jarkiholi vs Laxman Savadi: ಅಥಣಿಯಲ್ಲಿ ಸಾಹುಕಾರರ ಕಾಳಗ: ಯಾರ ಕಡೆಗೆ ಜನರ ಒಲವು? ವಿವರ, ವಿಶ್ಲೇಷಣೆ

ಬೆಳಗಾವಿ, ಏಪ್ರಿಲ್‌ 24: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯು ರಂಗು ಪಡೆದುಕೊಂಡಿದೆ. ಅದರಲ್ಲೂ ಬೆಳಗಾವಿ ರಾಜಕಾರಣ ಮತ್ತಷ್ಟು ಕುತೂಹಲ ಕೆರಳಿಸಿದೆ. ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕ ಲಕ್ಷ್ಮಣ ಸವದಿ ಅವರು ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರ್ಪಡಿಗೊಂಡಿದೆ. ಇದು ಜಾರಕಿಹೊಳಿ ಹಾಗೂ ಸವದಿ ನಡುವಿನ ನೇರ ಯುದ್ಧವಾಗಿ ಮಾರ್ಪಟ್ಟಿದೆ. ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಕ್ಷೇತ್ರವು 2,14,688 ಮತದಾರರನ್ನು ಹೊಂದಿದೆ. ಅದರಲ್ಲಿ ಸುಮಾರು ಒಂದು ಲಕ್ಷ ಮತದಾರರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಎಸ್‌ಸಿಗಳು ( 38,000 ಮತದಾರರು ) ಶೇಕಡ 16 ರಷ್ಟಿದ್ದಾರೆ. ಮುಸ್ಲಿಮರು ಸುಮಾರು ( 30,000 ಮತದಾರರು ) ಶೇಕಡಾ 12.5 ರಷ್ಟಿದ್ದಾರೆ.

Karnataka Poll Laxman Savadi vs Ramesh Jarkiholi: Sahukars Battleground in Athani Constituency

ಬಿಜೆಪಿಯನ್ನು ಪ್ರತಿನಿಧಿಸಿ ಈ ಹಿಂದೆ ಮೂರು ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವ ಲಕ್ಷ್ಮಣ ಸವದಿ ಅವರು ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. 2018 ರಲ್ಲಿ ಅವರನ್ನು ಅಭ್ಯರ್ಥಿಯಾಗಿ ಸೋಲಿಸಿದ್ದ ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಸವದಿ ವಿರುದ್ಧ ಕಣಕ್ಕಿಳಿದಿದ್ದಾರೆ.

2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಪತನಗೊಳಿಸಿ ಆಪರೇಷನ್ ಕಮಲ ಮೂಲಕ 17 ಶಾಸಕರು ಬಿಜೆಪಿಗೆ ಬಂದರು. ಅದರ ಮುಂದಾಳತ್ವವನ್ನು ರಮೇಶ್ ಜಾರಕಿಹೊಳಿ ವಹಿಸಿಕೊಂಡಿದ್ದರು. 17 ಶಾಸಕರ ಪೈಕಿ ಜಾರಕಿಹೊಳಿ ಅವರ ನಿಷ್ಠ ಕುಮಠಳ್ಳಿ ಅವರು ಅಥಣಿಯ ಬಿಜೆಪಿ ಟಿಕೆಟ್‌ ಪಡೆಯಲು ಯಶಸ್ವಿ ಆಗಿದ್ದಾರೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ ಅವರು ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ.

ಸವದಿ ಅವರು 1999 ರಲ್ಲಿ ಅಥಣಿ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದರು. ಅವರು ಇಸ್ಮಾಯಿಲ್ ಡೊಂಗರಗಾಂವ್ (ಕಾಂಗ್ರೆಸ್) ವಿರುದ್ಧ 3,119 ಮತಗಳಿಂದ ಸೋತರು. 2004 ರಲ್ಲಿ ಸವದಿ ಡೊಂಗರಗಾಂವ್ ಅವರನ್ನು 31,253 ಮತಗಳಿಂದ ಪರಾಭವಗೊಳಿಸಿದರು.

Karnataka Poll Laxman Savadi vs Ramesh Jarkiholi: Sahukars Battleground in Athani Constituency

2008 ರಲ್ಲಿ ಸವದಿ ಅವರು ಕಿರಣ್ ಕುಮಾರ್ ಪಾಟೀಲ್ (ಕಾಂಗ್ರೆಸ್) ಅವರನ್ನು 21,668 ಮತಗಳಿಂದ ಸೋಲಿಸಿ ಮತ್ತೆ ಗೆದ್ದರು. ಅವರು 2013 ರಲ್ಲಿ ಕುಮಠಹಳ್ಳಿ (ಕಾಂಗ್ರೆಸ್) ಅವರನ್ನು 23,771 ಮತಗಳಿಂದ ಸೋಲಿಸುವ ಮೂಲಕ ಬಿಜೆಪಿಯಲ್ಲಿ ಭದ್ರ ನೆಲೆಯನ್ನು ಕಂಡುಕೊಂಡರು.

ಆದರೆ 2018ರಲ್ಲಿ ಕುಮಠಳ್ಳಿ ಸವದಿ ಅವರನ್ನು 2,331ರ ಅಲ್ಪ ಅಂತರದಿಂದ ಸೋಲಿಸಿ ಸೇಡು ತೀರಿಸಿಕೊಂಡರು. ಸವದಿ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಆದರು. ಯಡಿಯೂರಪ್ಪನವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. ಈ ಬಾರಿಯ ಚುನಾವಣೆಯಲ್ಲಿ ಸವದಿ ಅವರು ತಮ್ಮ ಕ್ಷೇತ್ರವನ್ನು ಮರಳಿ ಬಯಸಿದರು. ಆದರೆ, ಬಿಜೆಪಿಗೆ ಅವರಿಗೆ ಟಿಕೆಟ್‌ ನಿರಾಕರಿಸಿತು. ಈ ಬೆಳವಣಿಗೆಯಿಂದ ಲಕ್ಷ್ಮಣ ಸವದಿ ಅವರಿಗೆ ಕ್ಷೇತ್ರದಲ್ಲಿ ಅನುಕಂಪದ ಅಲೆ ಇದೆ ಎನ್ನಲಾಗುತ್ತಿದೆ.

ಹಿಂದಿನ ಸೋಲು ಹಾಗೂ ಟಿಕೆಟ್‌ ನಿರಾಕರಣೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸವದಿ ಅವರು ಹಾತೊರೆಯುತ್ತಿದ್ದಾರೆ. ಗೋಕಾದ ಸಾಹುಕಾರ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಆಪ್ತರಾದ ಕುಮಠಳ್ಳಿ ಅವರನ್ನು ಗೆಲ್ಲಿಸುವುದು ಪ್ರತಿಷ್ಠೆಯ ವಿಷಯಗಿದೆ. ಸವದಿ ಅವರನ್ನು ಸೋಲಿಸಲು ಅವರು ಸಾಕಷ್ಟು ಸಂಪನ್ಮೂಲಗಳನ್ನು ನಿಯೋಜಿಸಲಿದ್ದಾರೆ ಎನ್ನುವುದಂತೂ ಶತಸಿದ್ದ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಇಬ್ಬರು ಸಾಹುಕಾರರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಸೇಡಿನ ಹೋರಾಟವಾಗಿ ಮಾರ್ಪಟ್ಟಿರುವ ಈ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಮಹತ್ವವಿಲ್ಲ ಎಂದು ಹೇಳಲಾಗುತ್ತಿದೆ. ಇಬ್ಬರೂ ಅಭ್ಯರ್ಥಿಗಳು ಲಿಂಗಾಯತರೇ ಆಗಿದ್ದು, ಸಮುದಾಯಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಸಮಸ್ಯೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+