ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹತ್ವಾಕಾಂಕ್ಷಿ ಕೃಷ್ಣ ಪಾಲೆಮಾರ್ ಯಾಕಿಂಥ ಕೆಲಸ ಮಾಡಿದರು?

By Prasad
|
Google Oneindia Kannada News

Krishna J Palemar
ಬೆಂಗಳೂರು, ಫೆ. 7 : 'ಕೋತಿ ಮೊಸರು ತಾನು ತಿಂದು ಮೇಕೆ ಬಾಯಿಗೆ ಒರೆಸಿತು' ಅನ್ನುವ ಗಾದೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಜೆ. ಪಾಲೆಮಾರ್ (56). ಕೋತಿಯೇ ಮೊಸರನ್ನು ಒರೆಸಿತೋ, ಮೇಕೆಯೇ ಮೊಸರನ್ನು ಮೆದ್ದು ಕೋತಿಗೆ ನೀಡಿತೋ ಎಂಬುದು ಈಗ ಸಾಬೀತಾಗಬೇಕಾಗಿದೆ.

ಪ್ರಸ್ತುತ ಡಿ.ವಿ. ಸದಾನಂದ ಗೌಡರ ಸಂಪುಟದಲ್ಲಿ ಬಂದರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ನಿರ್ವಹಿಸುತ್ತಿರುವ ಕೃಷ್ಣ ಪಾಲೆಮಾರ್ ನೀಲಿ ಚಿತ್ರದ ಎಮ್ಎಮ್ಎಸ್ ಕ್ಲಿಪ್ಪಿಂಗ್ ಅನ್ನು ವಿಧಾನಸಭೆಯಲ್ಲಿ ವೀಕ್ಷಿಸಿ ಸಿಕ್ಕಿಬಿದ್ದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಕಳಿಸಿದ ಆರೋಪ ಎದುರಿಸುತ್ತಿದ್ದಾರೆ. 'ಕೃಷ್ಣ ಕೃಷ್ಣಾ ನಾನವರಿಗೆ ಅಶ್ಲೀಲ ಚಿತ್ರ ಕಳಿಸೇ ಇಲ್ಲ' ಎಂದು ಗಲ್ಲಗಲ್ಲ ಬಡಿದುಕೊಂಡಿರುವ ಪಾಲೆಮಾರ್ ಈಗ ಹೈಕಮಾಂಡಿಗೆ ಮಣಿದು ರಾಜೀನಾಮೆಯನ್ನೂ ಬಿಸಾಕಿದ್ದಾರೆ.

ರಾಮಕ್ಷತ್ರಿಯ ಎಂಬ ಸಮುದಾಯಕ್ಕೆ ಸೇರಿದ ಪಾಲೆಮಾರ್ ಒಬ್ಬ ಮಹತ್ವಾಕಾಂಕ್ಷಿ ವ್ಯಕ್ತಿ. ಸತತ ಎರಡು ಬಾರಿ (2004 ಮತ್ತು 2008) ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಸಲಿಗೆ ಅವರೊಬ್ಬ ಪಕ್ಕಾ ವ್ಯಾಪಾರಿ. ಆರಂಭದಲ್ಲಿ ಟ್ರಾವಲ್ ಏಜೆಂಟ್ ಆಗಿದ್ದ ಪಾಲೆಮಾರ್, ರಿಯಲ್ ಎಸ್ಟೇಟ್ ಉದ್ಯಮವನ್ನೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈಗ ಕೃಷ್ಣ ಪಾಲೆಮಾರ್ ರಾಜಕೀಯದಲ್ಲೂ ನೆಲೆ ಕಂಡಿದ್ದಾರೆ. ಯಡಿಯೂರಪ್ಪ ಸರಕಾರದಲ್ಲಿ ಪರಿಸರ ಮತ್ತು ಬಂದರು ಸಚಿವರಾಗಿದ್ದರು.

ದಕ್ಷಿಣ ಕನ್ನಡ ಮತ್ತು ಮಡಿಕೇರಿ ಜಿಲ್ಲೆಯ ಉಸ್ತುವಾರಿ ವಹಿಸಿರುವ ಕೃಷ್ಣ ಪಾಲೆಮಾರ್ ಹುಟ್ಟಿದ್ದು 1955ರಲ್ಲಿ ಜಪ್ಪಿನಮೊಗರು ಎಂಬ ಗ್ರಾಮದಲ್ಲಿ. ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಪಾಲೆಮಾರ್ ಭೂ ವ್ಯವಹಾರದಲ್ಲಿಯೂ ಸಾಕಷ್ಟು ಪಳಗಿದ್ದಾರೆ. ವಿಧಾನಸಭೆಗೆ ಅವರು ಮೊದಲು ಆಯ್ಕೆಯಾಗಿದ್ದು 2004ರಲ್ಲಿ ಸುರತ್ಕಲ್ ಕ್ಷೇತ್ರದಿಂದ. ನಂತರ 2008ರಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಜಯಿಸಿ ಬಂದಿದ್ದಾರೆ. ಅಶ್ಲೀಲ ಚಿತ್ರ ಕಳಿಸಿದ ಆರೋಪ ಹೊತ್ತಿರುವ ಕೃಷ್ಣ ಪಾಲೆಮಾರ್ ಬಗ್ಗೆ ಅವರ ತವರಿನ ಜನತೆ ಏನು ಹೇಳುತ್ತಾರೆ?

English summary
Brief profile of Krishna J Palemar, Mangalore North MLA, who is facing the allegation of sending pornographic MMS to Lakshman Sangappa Savadi, Athani MLA. Krishna Palemar was holding the portpolio of Port and Science and Technology in DV Sadananda Gowda ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X