ಮಹಿಳೆ ಗೌರವಿಸುವ ನರಗುಂದ ಶಾಸಕ ಸಿಸಿ ಪಾಟೀಲ!

ಹೇಳುವುದು ಒಂದು ಮಾಡುವುದು ಇನ್ನೊಂದು. ಇದು ನಮ್ಮ ರಾಜಕಾರಣಿಗಳ ದಿನನಿತ್ಯದ ಮಂತ್ರ. ಇದಕ್ಕೆ ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರದ ಶಾಸಕ ಸಿಸಿ ಪಾಟೀಲ ಕೂಡ ಹೊರತಲ್ಲ. ಲಕ್ಷ್ಮಣ ಸವದಿ ಮತ್ತು ಕೃಷ್ಣ ಪಾಲೇಮಾರ್ ಜೊತೆ ಒಂದೇ ದೋಣಿಯಲ್ಲಿ ಪಯಣಿಸುತ್ತಿರುವ ಸಹಯಾತ್ರಿಕ ಸಿಸಿ ಪಾಟೀಲ.
ಕೃಷ್ಣ ಪಾಲೇಮಾರ್ ಕಳಿಸಿದ(?) ಕಳಿಸಿದ ಮತ್ತು ವಿಧಾನಸಭೆಯಲ್ಲಿ ಮುಕ್ತವಾಗಿ, ಯಾವುದೇ ಹಿಂಜರಿಕೆ ಮುಜುಗರವಿಲ್ಲದೆ ಲಕ್ಷ್ಣ್ಮಣ ಸವದಿ ನೋಡಿದ್ದನ್ನು ಕದ್ದುಮುಚ್ಚಿ ನೋಡಿದವರೇ ಶ್ರೀಮಾನ್ ಸಿಸಿ ಪಾಟೀಲ. 'ನಾನು ನೋಡಲಿಲ್ಲ. ಕ್ಲೋಸ್ ಮಾಡಿ' ಎಂದು ಅಡ್ವೈಸ್ ಮಾಡಿದೆ ಎಂದು ಪಾಟೀಲರು ಹೇಳುತ್ತಿದ್ದರೂ, ಅದನ್ನು ಕವರ್ ಮಾಡಿದ ವಿಡಿಯೋಗಳು ಬೇರೆ ಸತ್ಯವನ್ನು ನುಡಿಯುತ್ತಿವೆ.
ಇದೇ ಪಾಟೀಲರು ಕೆಲ ದಿನಗಳ ಹಿಂದೆ, 'ವೈಯಕ್ತಿಕವಾಗಿ ನಾನು ಮಹಿಳೆಯರು ಪ್ರಚೋದನಾತ್ಮಕವಾಗಿ ಬಟ್ಟೆ ಧರಿಸುವುದನ್ನು ಪ್ರೋತ್ಸಾಹಿಸುವುದಿಲ್ಲ. ಯಾವಾಗಲೂ ಮಹಿಳೆಯರು ಗೌರವಯುತವಾಗಿ ಉಡುಪು ಧರಿಸಬೇಕು' ಎಂಬ ಹೇಳಿಕೆ ನೀಡಿ ವಿವಾದಕ್ಕೆ ನಾಂದಿ ಹಾಡಿದ್ದರು. ಮಹಿಳೆಗೆ ಅಷ್ಟೊಂದು ಗೌರವ ನೀಡುವ ಪಾಟೀಲರೇ ಅಲ್ವಾ ಈಗ ಕದ್ದುಮುಚ್ಚಿ ಮಹಿಳೆ ಬಿಚ್ಚುವುದನ್ನು ನೋಡಿದ್ದು? ಉತ್ತರಿಸ್ತೀರಾ ಪಾಟೀಲ್ರೆ?
ಡಿ.ವಿ. ಸದಾನಂದ ಗೌಡರ ಸಂಪುಟದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿರುವ ಸಿಸಿ ಪಾಟೀಲರ ಪರ್ಮನೆಂಟ್ ಅಡ್ರೆಸ್ ಇಲ್ಲಿದೆ ನೋಡಿ : ನ. 981, ದಂಡಾಪುರ ಮುಖ್ಯ ರಸ್ತೆ, ಪಶು ಆಸ್ಪತ್ರೆ ಹತ್ತಿರ, ನರಗುಂದ, ಜಿಲ್ಲೆ ಬಾಗಲಕೋಟೆ - 582 207.












Click it and Unblock the Notifications