• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇವರು ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ

By Prasad
|
Lakshman Sangappa Savadi
ಬೆಂಗಳೂರು, ಫೆ. 7 : ಹುರಿಗಟ್ಟಿದ ಮೀಸೆ, ಕುರುಚಲು ಗಡ್ಡ, ಗರಿಗರಿ ಜುಬ್ಬಾ ಪೈಜಾಮಾ, ಅಥಣಿ ಸೀಮೆಯ ಗತ್ತು ಗೈರತ್ತು, ತಾನು ಮಾಡಿದ್ದು ಆಡಿದ್ದೇ ಸರಿ ಎಂಬ ಹುಂಬತನವನ್ನು ಮೈಮೇಲೆ ಹೊದ್ದುಕೊಂಡಿರುವ ವ್ಯಕ್ತಿಯೇ ಲಕ್ಷ್ಮಣ ಸಂಗಪ್ಪ ಸವದಿ. ಪ್ರಸ್ತುತ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭೆಯನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಜನಪ್ರತಿನಿಧಿ.

ಖಡಕ್ ಜೋಳದ ರೊಟ್ಟಿ, ಗುರೆಳ್ಳು ಚಟ್ನಿ, ಸತ್ತಿ ಗ್ರಾಮದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ತೀರದ ಬದನೆಕಾಯಿ ತಿಂದು ತಿಂದೇ ಈಗ ಹೊಲಸು ಕೆಲಸ ಮಾಡಿಕೊಂಡಿದ್ದಾರೆ. ಜನಬೆಂಬಲವನ್ನು ಪಡೆದು ಯಡಿಯೂರಪ್ಪ ಮತ್ತು ಸದಾನಂದ ಗೌಡರ ಸಂಪುಟದಲ್ಲಿ ಸಚಿವರಾಗಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಮೀನುಗಾರಿಕೆ ಸಚಿವರಾಗಿದ್ದ ಸವದಿ, ಈಗ ಸದಾನಂದ ಗೌಡರ ಸಂಪುಟದಲ್ಲಿ ಮಾನ್ಯ ಸಹಕಾರ ಸಚಿವ.

ಸಚಿವರಾಗಿರುವುದರಿಂದ ಸದ್ಯಕ್ಕೆ ತಾತ್ಕಾಲಿಕವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಾರಾದರೂ ಅವರ ಪರ್ಮನೆಂಟ್ ಅಡ್ರೆಸ್ ಹೀಗಿದೆ : ಶ್ರೀ ಲಕ್ಷ್ಮಣ ಸಂಗಪ್ಪ ಸವದಿ, ಸಂಗಮೇಶ್ವರ ನಿಲಯ, ಎಸ್ಎಮ್ಎಸ್ ಕಾಲೇಜು ರಸ್ತೆ, ಅಥಣಿ ತಾಲೂಕು, ಅಥಣಿ, ಬೆಳಗಾವಿ ಜಿಲ್ಲೆ - 591240.

ವಿಧಾನಸಭೆಯಲ್ಲಿ ಬಿಂದಾಸ್ ಆಗಿ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದಿರುವ ಲಕ್ಷ್ಮಣ್ ಸಂಗಪ್ಪ ಸವದಿ ಅವರ ವಿರುದ್ಧ ಅವರ ಕ್ಷೇತ್ರದ ಜನತೆಯೇ ತಿರುಗಿಬಿದ್ದಿದ್ದಾರೆ. ಇಂಥ ಶಾಸಕನನ್ನು ಆರಿಸಿ ಕಳಿಸಿದ್ದಕ್ಕೆ ಛೀಥೂ ಎಂದು ಮತ ಹಾಕಿದವರು ಉಗಿಯುತ್ತಿದ್ದಾರೆ. ಇನ್ನು ಸ್ವಕ್ಷೇತ್ರವನ್ನು ಸದ್ಯಕ್ಕೆ ಸವದಿ ಪ್ರವೇಶಿಸುವುದು ದೂರವೇ. ಇಂಥವರನ್ನು ಕ್ಷೇತ್ರದಲ್ಲಾದರೂ ಯಾಕೆ ಬಿಡಬೇಕು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಲಕ್ಷ್ಮಣ ಸವದಿ ಸುದ್ದಿಗಳುView All

English summary
Lakshman Sangappa Savadi, MLA Athani, Belgaum district has been caught watching blue film inside Assembly session on his mobile. Lakshman Savadi has been forced to resign. People who elected him have been cursing.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more