ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾ. ಹೆಗ್ಡೆ ತಾನು ಕಳ್ಳ, ಪರರನ್ನು ನಂಬ: ಕುಮಾರಸ್ವಾಮಿ ಸಿಡಿಮಿಡಿ

By Srinath
|
Google Oneindia Kannada News

justice-satosh-hegde-not-clean-handed-kumaraswamy
ಸಾಲಿಗ್ರಾಮ, ನ.15: ಲೋಕಾ ಸಮಸ್ತ ಸರಿಯಿಲ್ಲ ಎಂದು ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದ ಮಧುಕರ ಶೆಟ್ಟಿ ಅಮೆರಿಕದಲ್ಲಿ ಬಿತ್ತಿದ ಬೀಜ ಕರ್ನಾಟಕದಲ್ಲಿ ಟಿಸಿಲೊಡೆದಿದೆ. ನ್ಯಾ. ಸಂತೋಷ ಹೆಗ್ಡೆ 'ತಾನ್‌ ಕಳ್ಳ, ಪರರ್ ನಂಬ' ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ. ಆರು ವರ್ಷ ಲೋಕಾಯುಕ್ತರಾಗಿ ತಮ್ಮ ಸಂಸ್ಥೆಯಲ್ಲೇ ಭ್ರಷ್ಟಾಚಾರವನ್ನು ಹತೋಟಿಗೆ ತರುಲು ಸಾಧ್ಯವಾಗದೆ ರಾಜಕಾರಣಿಗಳು ಭ್ರಷ್ಟರು ಎಂದು ಬಿಂಬಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ದೇವಲೋಕದಿಂದ ಬಂದವರೇನಲ್ಲ. ತಮ್ಮ ಅಧಿಕಾರವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಕಚೇರಿಯನ್ನೇ ಶುದ್ಧ ಮಾಡಲು ಸಾಧ್ಯವಾಗದ ಹೆಗ್ಡೆ ಅವರು ಸಮಾಜವನ್ನು ತಿದ್ದುತ್ತಾರೆಯೇ ಎಂದು ಪ್ರಶ್ನಿಸಿದರು.

ಬಳ್ಳಾರಿ ಉಪಚುನಾವಣೆ ಕುರಿತು ಮಾತನಾಡಿದ ಅವರು, ಚುನಾವಣೆಯೇ ಬೇಕಾಗಿಲ್ಲ. ಸಮಯ ಹಾಗೂ ಹಣ ಎರಡೂ ವ್ಯರ್ಥ. ಹಾಗಾಗಿ ಜೆಡಿಎಸ್‌ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಿಲ್ಲ. ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿ ಕೂಡ ಅವಶ್ಯಕವಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಮುಶೀರ್ ಅಹಮದ್‌ ಅವರ ನಿವಾಸಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರ ಜತೆಗೆ ಸಂಸದ ಚಲುವರಾಯಸ್ವಾಮಿ, ಶಾಸಕರಾದ ಸಾ.ರಾ.ಮಹೇಶ್‌, ಚಿಕ್ಕಮಾದು, ಮುಖಂಡರಾದ ಮೆಡಿಕಲ್‌ ರಾಜಣ್ಣ ಇತರರು ಇದ್ದರು.

English summary
The so-called upright former Lokayukta Justice Satosh Hegde is not clean handed declares former CM HD kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X