ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳರ ಸಾಮ್ರಾಜ್ಯ, ಭ್ರಷ್ಟಾಚಾರದ ಆರೋಪ ಪ್ರತ್ಯಾರೋಪ: ಸಂತೋಷ್ ಹೆಗ್ಡೆ

|
Google Oneindia Kannada News

ಬೆಂಗಳೂರು, ಅಕ್ಟೊಬರ್ 23: ಕರ್ನಾಟಕದಲ್ಲಿರುವ ಹಾಲಿ ಬಿಜೆಪಿ ಸರ್ಕಾರದಲ್ಲಿ 40ಪರ್ಸೆಂಟ್, ಹಿಂದಿನ ಸರ್ಕಾರಗಳಲ್ಲಿ 10 ಪರ್ಸೆಂಟ್ ಭ್ರಷ್ಟಾಚಾರದ ಬಗ್ಗೆ ಆರೋಪ, ಪ್ರತ್ಯಾರೋಪಗಳು ರಾಜಾರೋಷವಾಗಿ ನಡೆಯುದಿದೆ. ಆನೆ ಕದ್ದವನೂ ಕಳ್ಳ, ಅಡಿಕೆ ಕದ್ದವನೂ ಕಳ್ಳ. ಇಂತಹ ಕಳ್ಳರ ಸಾಮ್ರಾಜ್ಯದಲ್ಲಿ ನಾವೆಲ್ಲರೂ ವಾಸಿಸುತ್ತಿದ್ದೇವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಕಳವಳ ವ್ಯಕ್ತಪಡಿಸಿದರು.

ಶನಿವಾರ ಬೆಂಗಳೂರು ದಕ್ಷಿಣ ವಲಯ 1 ಹಾಗೂ 2ರ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ದಿಂದ ಕುವೆಂಪು ಕಲಾ ಕ್ಷೇತ್ರದಲ್ಲಿ ನಡೆದ ಖಾಸಗಿ ಶಾಲಾ ಶಿಕ್ಷಕರ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕದ ರಾಜಕೀಯ ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಕಾಮಗಾರಿ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

Lokayukta Retired Justice N.Santosh Hegde reaction about allegations the corruption

ಮಹಿಳೆಗೆ ಕಪಾಳಮೋಕ್ಷ: ಸೋಮಣ್ಣ ವಿರುದ್ಧ ಸಿದ್ದು, HDK ಆಕ್ರೋಶ

ಈಗಾಗಲೇ ನಡೆದ ರಸ್ತೆ ಕಾಮಗಾರಿಗಳಲ್ಲಿ ಶೇ.70 ರಷ್ಟು ಗುಂಡಿ ಬಿದ್ದಿವೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ಒಂದು ಕಿಲೋಮೀಟರ್ ರಸ್ತೆಯನ್ನು 17 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಮಳೆ ಬಂದ ನಂತರ ಈ ರಸ್ತೆಯ ಪರಿಸ್ಥಿತಿಯನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ ಎಂದು ಕಿಡಿ ಕಾರಿದರು.

ಭ್ರಷ್ಟಾಚಾರವು ದೇಶದ ಗಡಿ ಮೀರಿದ ಪಿಡುಗು
ಇತ್ತೀಚೆಗೆ ಅಂತಾರಾಷ್ಟ್ರೀಯ ಟ್ರಾನ್ಸ್ಪೆರೆನ್ಸಿ ಇಂಟರ್ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತಕ್ಕಿಂತ ಚೈನಾದಲ್ಲಿ ಚೈನಾದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ ಎಂದು ವರದಿ ನೀಡಿದೆ. ಚೈನಾದಲ್ಲಿ ಭ್ರಷ್ಟಾಚಾರ ಮಾಡಿದರೆ ಗಲ್ಲು ಶಿಕ್ಷೆ, ನಮ್ಮಲ್ಲಿ 7 ವರ್ಷ ಜೈಲು ಶಿಕ್ಷೆ. ಹೀಗಾಗಿ ಭ್ರಷ್ಟಾಚಾರ ದೇಶ, ಗಡಿಗಳನ್ನು ಮೀರಿದ ಪಿಡುಗು ಆಗಿದೆ.

ಭ್ರಷ್ಟಾಚಾರ ನಿರ್ಮೂಲವಾಗಲು ಪ್ರತಿಯೊಬ್ಬರೂ ತೃಪ್ತಿ ಎನ್ನುವ ಗುಣ ಮೈಗೂಡಿಸಿಕೊಳ್ಳಬೇಕಿದೆ. ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ, ಆದರೆ ಇದೇ ರೀತಿ ದುರಾಸೆಯೂ ಸಹ ಅಭಿವೃದ್ಧಿ ಹೊಂದುತ್ತಿದೆ. ಭ್ರಷ್ಟಾಚಾರ, ಅಕ್ರಮಗಳ ಮೂಲ ದುರಾಸೆಯಾಗಿದ್ದು, ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ದುರಾಸೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ಸೃಷ್ಟಿಕರ್ತನಿಂದಲೂ ಸಹ ದುರಾಸೆಯ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಹಿಂದೆ ಈ ಮಟ್ಟದ ದುರಾಸೆ ಇರಲಿಲ್ಲ. ಇದೀಗ ಪ್ರಮಾಣಿಕತೆ ಮಾಯವಾಗಿ ದುರಾಸೆಯಂತಹ ದುರ್ಗುಣಗಳು ಮನುಷ್ಯನನ್ನು ಆವರಿಸಿಕೊಳ್ಳುತ್ತವೆ ಎಂದು ನ್ಯಾ. ಸಂತೋಷ್ ಹೆಗ್ಡೆ ವಿಷಾಧಿಸಿದರು.

Lokayukta Retired Justice N.Santosh Hegde reaction about allegations the corruption

ಸಂತೃಪ್ತಿ ಗುಣ ಹೊಂದಬೇಕು, ದುರಾಸೆ ಬಿಡಬೇಕು
ಸಾಮಾಜಿಕ ಮೌಲ್ಯಗಳು ನಶಿಸುತ್ತಿದ್ದು, ಚಿಕ್ಕಂದಿನಲ್ಲೇ ಸಾಮಾಜಿಕ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಮೌಲ್ಯಗಳಲ್ಲೂ ಶ್ರೇಷ್ಠವಾದದ್ದು ತೃಪ್ತಿ ಎನ್ನುವ ಗುಣ. ತೃಪ್ತಿ ಇದ್ದರೆ ದುರಾಸೆ ಬರುವುದಿಲ್ಲ. ಇಂತಹ ಸಮಸ್ಯೆಗಳಿಗೆ ಶಿಕ್ಷಕರಲ್ಲಿ ಮಾತ್ರ ಪರಿಹಾರವಿದೆ. ಶಿಕ್ಷಕರು ಮಾತ್ರ ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗದಲ್ಲಿ ಕರೆ ತರಬಹುದು. ಪ್ರಮಾಣಿತೆಯನ್ನು ಅಳವಡಿಸಿಕೊಂಡರೆ ಸುಧಾರಣೆ ಆಗುತ್ತದೆ. ತರಬಹುದು. ಏನಾದರು ಆಗು ಮೊದಲು ಮಾನವನಾಗು ಎಂಬ ಕವಿವಾಣಿ ನಮಗೆಲ್ಲರಿಗೂ ದಾರಿ ದೀಪವಾಗಲಿ. ಪ್ರತಿಯೊಬ್ಬರೂ ಮಾನವೀಯತೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಬೈಲಾಂಜನಪ್ಪ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ವೆಂಕಟರಾಮೇಗೌಡ, ಹನುಮಂತರಾಯಪ್ಪ, ಪುಟ್ಟಸ್ವಾಮಿ ಮತ್ತಿರರು ಉಪಸ್ಥಿತರಿದ್ದರು.

English summary
Lokayukta Retired Justice N.Santosh Hegde reaction about allegations the corruption in Karnataka Politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X