ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್ ನಿಂದ ಲಾಂಛನ ಲೋಕಾರ್ಪಣೆ
ಬೆಂಗಳೂರು, ಡಿಸೆಂಬರ್ 11 : ವಿ ರೆಸ್ಪೆಕ್ಟ್ ಫಾರ್ಮರ್ಸ್ ಟ್ರಸ್ಟ್ ರೈತ ಸ್ನೇಹಿ ಯೋಜನೆಯ ಲಾಂಛನ ಲೋಕಾರ್ಪಣೆ ಸಮಾರಂಭವನ್ನು ಡಿ.13 ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದೆ.
ಜೋಗಿ ಬರೆದ 'ನಾನು ಪಾರ್ವತಿ' ಪುಸ್ತಕ ಬಿಡುಗಡೆ ಮಾಡಿದ ಸುದೀಪ್
ಕಾರ್ಯಕ್ರಮದಲ್ಲಿ ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ನಟ ಕಿಚ್ಚ ಸುದೀಪ್ ಲಾಂಛನ ಉದ್ಘಾಟನೆ ಮಾಡಲಿದ್ದು, ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನಹೈಕೋರ್ಟ್ ನಿವೃತ್ತ ನ್ಯಾ. ಎ.ಜೆ. ಸದಾಶಿವ ಅವರು ಆಗಮಿಸಲಿದ್ದಾರೆ. ಅವರೊದಿಗೆ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಜಿಕೆವಿಕೆ ವಿಶ್ರಾಂತ ಕುಲಪತಿ ಕೆ. ನಾರಾಯಣಗೌಡ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications