ನಮ್ಮಲ್ಲಿ ಭ್ರಷ್ಟರಿಗೆ 7 ವರ್ಷ ಶಿಕ್ಷೆಯಿದೆ, ಅದಕ್ಕಾಗಿ 50 ವರ್ಷ ಕಾಯಬೇಕು: ಸಂತೋಷ್ ಹೆಗ್ಡೆ
ಮಂಡ್ಯ, ಮೇ 29 : ದೇಶದ ಅಭಿವೃದ್ಧಿಯಲ್ಲಿ ಮುಂಚೂಣಿ ಪಾತ್ರ ವಹಿಸಬೇಕಾದ ನಾಲ್ಕು ಆಧಾರ ಸ್ಥಂಭಗಳೂ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಲವಾಗಿವೆ. ಇದರಿಂದಾಗಿ ದೇಶದ ಉದ್ದಗಲಕ್ಕೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದ್ದಾರೆ.
ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಗಳ ವತಿಯಿಂದ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಸಂವಿಧಾನವನ್ನು ಜಾರಿಗೊಳಿಸಲಾಯಿತು. ಅದರಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಯಿತು. ಇದರೊಂದಿಗೆ ನಾಲ್ಕನೇ ಸ್ಥಂಭವಾಗಿ ಮಾಧ್ಯಮ ಸಹ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ನಾಲ್ಕೂ ಸಂಸ್ಥೆಗಳೂ ಸಹ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿರುವ ಕಾರಣ ಭ್ರಷ್ಟಾಚಾರ ಎಂಬುದು ಮಿತಿ ಮೀರಿದೆ ಎಂದು ಹೇಳಿದರು.
ಸಾವಿರಾರು ವರ್ಷಗಳ ಸಂಸ್ಕೃತಿ ಇರುವ ದೇಶದಲ್ಲಿ ಏಕೆ ಈ ರೀತಿ ಆಗುತ್ತಿದೆ ಎಂಬ ಚಿಂತೆ ಕಾಡುತ್ತಿದೆ. ಇದು ಕೆಲವು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪ್ಪು ಎಂದ ಅವರು, ನನ್ನಂತಹ ವಯಸ್ಸಾದವರಿಂದಲೇ ನಡೆದಿರುವ ಭ್ರಷ್ಚಾಚಾರವನ್ನು ಸರಿದಾರಿಗೆ ತರಲು ನನ್ನ ವಯಸ್ಸಿನವರಿಂದ ಸಾಧ್ಯವಿಲ್ಲ. ಈ ದೇಶದ ಬೆನ್ನೆಲುಬು ಎಂದಾಗಿರುವ ಯುವ ಸಮೂಹ ಈ ದೇಶವನ್ನು ಸರಿದಾರಿಗೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯುವ ಸಮೂಹ ಮನಸ್ಸು ಮಾಡಿದರೆ ಇಂತಹ ಭ್ರಷ್ಟಾಚಾರದ ದೇಶವನ್ನು ಸರಿದಾರಿಗೆ ತರಲು ಸಾಧ್ಯ. ಆದರೆ ಅವರು ಕೆಲವು ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿ ಅದನ್ನು ಕಾರ್ಯರೂಪಕ್ಕೆ ತಂದರೆ ಸಮಾಜವನ್ನು ಬದಲಾಯಿಸುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಯುವಜನರು ಪ್ರಯತ್ನ ಶೀಲರಾಗಬೇಕು ಎಂದು ಕರೆ ನೀಡಿದರು.
ದುರಾಸೆಗೆ ಯಾವ ಮದ್ದೂ ಇಲ್ಲ . ಕೊರೋನಾದಂತಹ ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ಇದೆ. ಬೇರೆ ಬೇರೆ ಕಾಯಿಲೆಗಳಿಗೂ ಚಿಕಿತ್ಸೆ ಇದೆ. ಆದರೆ ಅಭಿವೃದ್ಧಿ ಹೆಸರಲ್ಲಿ ನಡೆಯುವ ದುರಾಸೆಗೆ ಯಾವುದೇ ಮದ್ದು ಇಲ್ಲ . 80ರ ದಶಕದಲ್ಲಿ 52 ಲಕ್ಷ ಯೋಧರಿಗೆ ಜೀಪ್ ವಾಹನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆಯಿತು. ನಂತರದ ದಿನಗಳಲ್ಲಿ ಪ್ರತೀ ವರ್ಷವೂ ಒಂದು ಅಥವಾ ಎರಡು ಹಗರಣಗಳು ಕಂಡುಬರುತ್ತಿದ್ದವು. ಹಗರಣಗಳಲ್ಲಿ ತೊಡಗಿರುವವರ ಅಭಿವೃದ್ಧಿಯಾಗುತ್ತಲೇ ಇತ್ತುಘಿ. ಆದರೇ ದೇಶ ಅಭಿವೃದ್ಧಿಯಲ್ಲಿ ಮಂದಗತಿ ಇತ್ತು ಎಂದು ವಿಷಾದಿಸಿದರು.
ಬೋಫೋರ್ಸ್ ಹಗರಣದಲ್ಲಿ 62 ಸಾವಿರ ಕೋಟಿ ಆಗಿತ್ತು. 2009ಕ್ಕೆ ಬಂದಾಗ ಕಾಮನ್‌ವೆಲ್ತ್ ಗೇಮ್‌ನಲ್ಲಿ 70 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿತ್ತು. ಇದರಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಕೊಳ್ಳೆ ಹೊಡೆದಿದ್ದರು ಎಂದು ಅಕೌಂಟೆಂಟ್ ಜನರಲ್ ತಮ್ಮ ವರದಿಯಲ್ಲಿ ತಿಳಿಸಿದ್ದರು. 2010ರಲ್ಲಿ ಕಲ್ಲಿದ್ದಲು ಹಗರಣದಲ್ಲಿ 1.76 ಲಕ್ಷ ಕೋಟಿ ಹಗರಣ ಕಂಡುಬಂತು. ಇದು ಆರೂವರೆ ಕೋಟಿ ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕದ ಬಜೆಟ್‌ನ ಗಾತ್ರದಷ್ಟಾಗಿತ್ತು. ಇಷ್ಟೊಂದು ಹಣ ಚಿನ್ನದ ಖಜಾನೆಯಿಂದ ಸೋರಿ ಹೋದರೆ ಇನ್ನು ದೇಶ ಅಭಿವೃದ್ಧಿಯಲ್ಲಿ ಯಾವ ರೀತಿ ಸಾಗುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
1985ರಲ್ಲಿ ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದ ವೇಳೆ ಅವರೇ ಹೇಳಿದಂತೆ ಕೇಂದ್ರ ಸರ್ಕಾರ ಮಂಜೂರು ಮಾಡಿದ ಒಂದು ರೂ.ನಲ್ಲಿ ಕಟ್ಟ ಕಡೆಯ ಲಾನುಭವಿಗೆ ತಲುಪುತ್ತಿದ್ದುದು ಕೇವಲ 15 ಪೈಸೆ ಮಾತ್ರ. ಉಳಿದ ಹಣ ಎಲ್ಲಿಗೆ ಹೋಗುತ್ತಿತ್ತು? ಹೀಗಾದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನಾನು ಹಲವಾರು ವೃತ್ತಿಯಲ್ಲಿ ಕೆಲಸ ಮಾಡಿದ್ದೆ. ಆದರೆ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಏನೂ ತಿಳಿದಿರಲಿಲ್ಲ . ಎಲ್ಲರೂ ಸುಖವಾಗಿದ್ದಾರೆ ಎಂದು ಭಾವಿಸಿದ್ದೆ. ಆದರೆ, ಲೋಕಾಯುಕ್ತನಾದ ನಂತರ ಭ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂತು. ಸಂವಿಧಾನದಲ್ಲಿ ಜನರ ಸೇವೆಗಾಗಿ ಸೃಷ್ಠಿಸಿಕೊಂಡ ಸರ್ಕಾರಗಳು ಏನೆಲ್ಲಾ ಮಾಡುತ್ತಿವೆ ಎಂಬುದು ತಿಳಿಯಿತು ಎಂದು ವಿವರಿಸಿದರು.
ಹಿಂದೆ ಸಮಾಜದಲ್ಲಿದ್ದ ವ್ಯಕ್ತಿಗಳು ಕೆಲವು ಮೌಲ್ಯಗಳನ್ನು ಉಳಿಸಿಕೊಂಡಿದ್ದರು. ಆದರೆ ಇಂದು ಅಂತಹ ಮೌಲ್ಯಗಳು ಕುಸಿದಿವೆ. ಸಮಾಜದಲ್ಲಿ ಮೌಲ್ಯಗಳು ಕಾಣುತ್ತಿಲ್ಲ. ಜೈಲಿಗೆ ಹೋದವರ ಮನೆ ಬಳಿಗೆ ಯಾರೂ ಹೋಗಬೇಡಿ ಎನ್ನುವಂತಹ ಕಾಲವಿತ್ತು. ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯ ಕುಟುಂಬವೂ ಶಿಕ್ಷೆ ಅನುಭವಿಸುವಂತಾಗುತ್ತಿತ್ತು. ಇಂದು ಸಮಾಜದಲ್ಲಿ ಶ್ರೀಮಂತಿಕೆ ಅಧಿಕಾರವನ್ನು ಪೂಜಿಸುವಂತಹ ವಾತಾವರಣ ಇದೆ. ಇದರಿಂದ ಶಾಂತಿ ಸೌಹಾರ್ಧತೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಚೀನಾ ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಇತ್ತು. ಅದನ್ನು ಮಟ್ಟ ಹಾಕುವ ಸಲುವಾಗಿ ಅಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆಯಾಗುತ್ತಿದೆ. 2019ನೇ ಪಾರದರ್ಶಕ ಸಂಸ್ಥೆ ವರದಿ ಪ್ರಕಾರ ಚೀನಾದಲ್ಲಿ ನಮ್ಮ ದೇಶಕ್ಕಿಂತಲೂ ಹೆಚ್ಚು ಭ್ರಷ್ಟಾಚಾರ ಇದೆ. ನಮ್ಮಲ್ಲಿ ಭ್ರಷ್ಟರಿಗೆ 7 ವರ್ಷ ಶಿಕ್ಷೆ, ಒಬ್ಬನಿಗೆ ಶಿಕ್ಷೆಯಾಗಬೇಕಾದರೆ 50 ವರ್ಷ ಕಾಯಬೇಕು. ಅಪ್ಪಿ ತಪ್ಪಿ ಜೈಲಿಗೆ ಹೋದರೂ ಅದು ಶಿಕ್ಷೆಯಾಗುವುದಿಲ್ಲ. ಬದಲಿಗೆ ಎಲ್ಲ ಸೌಲಭ್ಯಗಳೂ ಸಿಗುತ್ತವೆ. ಅಂತಹ ವಾತಾವರಣ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗುತ್ತಾರೆಂದರೆ ಅವರನ್ನು ಸ್ವಾಗತಿಸಲು ಜೈಲಿನ ಬಾಗಿಲ ಬಳಿ ಹಾರ ತುರಾಯಿ ಹಿಡಿದು ಅವರ ಬೆಂಬಲಿಗರು ನಿಲ್ಲುತ್ತಾರೆ. ಇಂತಹ ಪರಿಸ್ಥಿತಿಯಿಂದ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವೇ ಎಂದು ಹೇಳಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ











Click it and Unblock the Notifications