ಆರ್‌ಸಿಬಿ ಸೋಲಲಿದೆ ಎಂದ ಸಿಎಸ್‌ಕೆ ಆಟಗಾರ: ಕಾರ್ತಿಕ್ ಶರ್ಮಾ ಟ್ವೀಟ್‌ಗೆ ಅಭಿಮಾನಿಗಳ ಆಕ್ರೋಶ, ವೈರಲ್ ಪೋಸ್ಟ್‌

CSK: ಇಂಡಿಯಾನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್‌ ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳು ರೋಚಕಘಟ್ಟವನ್ನು ತಲುಪಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಬಾರಿ ಕಪ್ ಗೆಲ್ಲಬೇಕು ಎಂದು ಕೋಟ್ಯಾಂತರ ಆರ್‌ಸಿಬಿ ಅಭಿಮಾನಿಗಳು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಐಪಿಎಲ್ ಫೈನಲ್ ಪಂದ್ಯವು ತೀವ್ರ ಕುತೂಹಲವನ್ನು ಕೆರಳಿಸಿದೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ಹೋರಾಟ ನಡೆಸಲಿವೆ. ಗುಜರಾತ್ ತಂಡಕ್ಕೆ ಇದು ತವರಿನ ಕ್ರೀಡಾಂಗಣವಾಗಿದೆ. ಆದರೆ ಇದೇ ಕ್ರೀಡಾಂಗಣದಲ್ಲಿ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಈ ಸಂಭ್ರಮಾಚರಣೆಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬೇಕು ಎಂದು ಕನ್ನಡಿಗರು ಹಾಗೂ ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರ ಕಾರ್ತಿಕ್ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳನ್ನು ಕೆಣಕುವ ಕೆಲಸ ಮಾಡಿದ್ದಾನೆ.

Viral Video:
Viral Video: "ನಾವು ಬುಕ್ ಮಾಡೋದರಿಂದಲೇ ನಿನ್ನ ಜೀವನ": ಕನ್ನಡಿಗ ಆಟೋ ಚಾಲಕನಿಗೆ ನಾರ್ಥಿ ಮಹಿಳೆ ಧಿಮಾಕು

ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರ ಕಾರ್ತಿಕ್ ಶರ್ಮಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಸೋಲಲಿದೆ. ಗುಜರಾತ್ ಟೈಟಾನ್ಸ್‌ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾನೆ. ಇದು ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಆರ್‌ಸಿಬಿ ತಂಡ ಸೋತಾಗಲೂ ಸಿಎಸ್‌ಕೆಯ ಕೆಲವು ಆಟಗಾರರು ಆರ್‌ಸಿಬಿ ತಂಡವನ್ನು ಟೀಕಿಸಿದ್ದು, ಟ್ರೋಲ್ ಮಾಡಿರುವುದು ಇದೆ. ಆದರೆ ಇದೀಗ ಆರ್‌ಸಿಬಿ Vs ಜಿಟಿಯ ಪಂದ್ಯ ನಡೆಯುವುದಕ್ಕಿಂತ ಮುಂಚೆಯೇ ಟ್ರೋಲ್ ಮಾಡಿರುವುದು, ಆರ್‌ಸಿಬಿ ಸೋಲಲಿದೆ ಎಂದು ಹೇಳಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

CSK

CSK: ಕಾರ್ತಿಕ್ ಶರ್ಮಾ ಹೇಳಿದ್ದೇನು

RCB vs GT ಫೈನಲ್ ಪಂದ್ಯದ ಸ್ಕ್ರಿಪ್ಟ್ ಸೋರಿಕೆಯಾಗಿದೆ ಎಂದು ಕಾರ್ತಿಕ್ ಶರ್ಮಾ ಅವರು ಹೇಳಿದ್ದಾರೆ.

ಟಾಸ್ ಗೆದ್ದ GT ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡ್ಡಿಕಲ್ ರನ್ ಗಳಿಸಿದರು, ರಬಾಡ, ಸಿರಾಜ್ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. RCB ಮೊದಲ ಇನ್ನಿಂಗ್ಸ್‌ನಲ್ಲಿ 170+ ರನ್ ಗಳಿಸಲಿದೆ. ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ತಲಾ 50+ ರನ್ ಗಳಿಸಿದರು, ಜೋಸ್ ಬಟ್ಲರ್ ಈ ಪಂದ್ಯವನ್ನು ಮುಗಿಸುತ್ತಾರೆ. GT 5-6 ವಿಕೆಟ್‌ಗಳಿಂದ ಗೆದ್ದರು ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಸಿಎಸ್‌ಕೆ ಆಟಗಾರ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ಇದೀಗ ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆಯೂ ಸಿಎಸ್‌ಕೆಯ ಕೆಲವು ಆಟಗಾರರು ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿದ್ದರು.

RCB: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಡಿಕೆಶಿ - ವಿಜಯ್ ಮಲ್ಯ ಬೆಂಬಲ, ಅಚ್ಚರಿಯ ಟ್ವೀಟ್ ವೈರಲ್
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಡಿಕೆಶಿ - ವಿಜಯ್ ಮಲ್ಯ ಬೆಂಬಲ, ಅಚ್ಚರಿಯ ಟ್ವೀಟ್ ವೈರಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯಾನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ 2025ನೇ ಸಾಲಿನಲ್ಲಿ ಕಪ್ ಗೆದ್ದಿದೆ. ಆದರೆ ಕಪ್ ಗೆದ್ದ ಮೇಲೆಯೂ ಸಿಎಸ್‌ಕೆಯ ಆಟಗಾರರು ಟ್ರೋಲ್ ಮಾಡುತ್ತಿದ್ದಾರೆ. ಇಂದಿನ ಪಂದ್ಯವನ್ನು ಗೆದ್ದರೆ ಆರ್‌ಸಿಬಿ ಎರಡನೇ ಬಾರಿ ಚಾಂಪಿಯನ್ ಆಗಲಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಲವರು ಆರ್‌ಸಿಬಿಗೆ ವಿರುದ್ಧವಾಗಿ ಪೋಸ್ಟ್‌ ಮಾಡುವುದಕ್ಕೆ ಶುರು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+