Viral Video: “ನಿಮ್ಮ ಜೀವನ ನಮ್ಮಿಂದಲೇ”: ಕನ್ನಡಿಗ ಆಟೋ ಚಾಲಕನೊಂದಿಗೆ ನಾರ್ಥಿ ಮಹಿಳೆ ಕಿರಿಕ್
ನಾವು ಆಟೋ ಬುಕ್ ಮಾಡುವುದರಿಂದಲೇ ನಿನ್ನ ಜೀವನ ನಡೆಯುತ್ತಿರುವುದು ಅಂತ ನಾರ್ಥಿ ಮಹಿಳೆಯೊಬ್ಬರು ಧಿಮಾಕಿನಿಂದ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನು ಹಿಂದಿಯಲ್ಲೇ ಮಾತನಾಡೋದು ಅಂತ ಹೇಳಿದ್ದಾಳೆ. ಅದಕ್ಕೆ ಆಟೋ ಚಾಲಕ ನನಗೆ ಹಿಂದಿ ಬರಲ್ಲ ಕನ್ನಡದಲ್ಲಿ ಮಾತನಾಡಿ ಅಂತ ಕೇಳಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಏನಿದು ವೈರಲ್ ವಿಡಿಯೋ - ಇದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ನಾರ್ಥಿಯ ವಿಡಿಯೋ ಇದೀಗ ವೈರಲ್ ಆಗಿದೆ. ನಾವು ಇಲ್ಲಿ ಇರುವುದರಿಂದಲೇ ನೀನು ಜೀವಂತವಾಗಿದ್ದೀಯ ಎಂದು ನಾರ್ಥಿ ಹೇಳಿದ್ದಾಳೆ. ನಾವು ಬುಕ್ಕಿಂಗ್ ಮಾಡುವುದರಿಂದಲೇ ನಿನ್ನ ಜೀವನ ನಡೆಯುತ್ತಿದೆ. ಹಿಂದಿಯಲ್ಲಿ ಮಾತನಾಡಬೇಡಿ, ಕನ್ನಡದಲ್ಲಿ ಮಾತನಾಡಿ ನನಗೆ ಹಿಂದಿ ಬರಲ್ಲ ಅಂತ ಆಟೋ ಚಾಲಕ ಹೇಳಿದ್ದಾನೆ. ಆದರೆ ಅದಕ್ಕೆ ಆ ಮಹಿಳೆ ಹಿಂದಿ ರಾಷ್ಟ್ರೀಯ ಭಾಷೆ ಯಾಕೆ ಬರಲ್ಲ ಅಂತ ಪ್ರಶ್ನೆ ಮಾಡಿದ್ದಾಳೆ. ಇದರ ನಡುವೆ ಹಿಂದಿಯಲ್ಲಿ ಮಾತನಾಡುತ್ತಿರುವ ಮಹಿಳೆಯೊಂದಿಗೆ ತಮಿಳು ವ್ಯಕ್ತಿಯೂ ಸಹ ಆಟೋ ಚಾಲಕನೊಂದಿಗೆ ಜಗಳಕ್ಕೆ ಇಳಿದಿರುವುದು ಇದೆ. ನಾನು ನಿಮಗೆ ಏನಾದರೂ ಬೈದನಾ, ನೀವು ಹಿಂದಿಯಲ್ಲಿ ಬೈದರೆ ನನಗೆ ಹೇಗೆ ಅರ್ಥವಾಗಬೇಕು ಎಂದು ಆಟೋ ಚಾಲಕ ಪ್ರಶ್ನೆ ಮಾಡಿದ್ದಾರೆ.

ನಿನಗೆ ಹಿಂದಿಯೂ ಬರಲ್ಲ, ಇಂಗ್ಲಿಷ್ ಸಹ ಬರಲ್ಲ. ಬರೀ ಕನ್ನಡ ಕನ್ನಡ ಅಂದ್ರೆ ಹೆಂಗೆ ಅಂತ ಮಹಿಳೆ ಬೈದಿರುವುದು ವಿಡಿಯೋದಲ್ಲಿದೆ. ಇದು ಇಂಡಿಯಾ ಇಲ್ಲಿ ಯಾರು ಯಾವ ಭಾಷೆಯಲ್ಲಾದರೂ ಮಾತನಾಡಬಹುದು ಅಂತಲೂ ವಿಡಿಯೋ ಮಾಡಿರುವವರು ಹೇಳಿರುವುದು ಇದೆ. ಈ ವೈರಲ್ ವಿಡಿಯೋಗೆ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಕನ್ನಡ ನೆಲದಲ್ಲಿ ಕನ್ನಡ ಕೇಳಿದ ಕನ್ನಡಿಗನ ಮೇಲೆ ದಬ್ಬಾಳಿಕೆ. ಇವರಿಗೆ ಕರ್ನಾಟಕ ಬದುಕೋಕೆ ಬೇಕು ಆದ್ರೆ ಕನ್ನಡ ಬೇಡ. ಇದು ಬೆಂಗಳೂರಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ. ದಿನೇ ದಿನೇ ಹೆಚ್ಚುತ್ತಿರುವ ವಲಸೆ ಕನ್ನಡಕ್ಕೆ, ಕನ್ನಡ ನಾಡಿಗೆ ಕಂಟಕ ಆಗುತ್ತಿದೆ. ಎಚ್ಚರ ಕನ್ನಡಿಗರೇ ಎಂದು ಹೇಳಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ತಮ್ಮ ಗಮನಕ್ಕೆ ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಭಾಸ್ಕರ್ ಎನ್ನುವವರು ಇದೆಲ್ಲ ಇನ್ನೂ ಎಷ್ಟು ದಿನ ಅಂತ ಇಲ್ಲಿನ ನಾವು ಸಹಿಸೋದು. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅದು ಸಹ ಅತಿ ಶೀಘ್ರದಲ್ಲಿ ಆಗಬೇಕಿದೆ, ಇಲ್ಲಿ ನಾವು ಯಾರನ್ನು ಬಹಿಷ್ಕರಿಸುತ್ತಿಲ್ಲ ಆದರೆ ನಮ್ಮ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ ಎನ್ನುತ್ತೇವೆ, ಇದು ನಮ್ಮ ತಾಯಿ, ಯಾರಾದರೂ ನಮ್ಮ ಕನ್ನಡಿಗರನ್ನು ಕಡೆಗಣಿಸಿದರೆ ಅವರನ್ನು ಸುಮ್ಮನೆ ಬಿಡಬಾರದು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ನಗರ ಪೊಲೀಸರಿಂದ ಸ್ಪಷ್ಟನೆ
ಇನ್ನು ವೈರಲ್ ವಿಡಿಯೋ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸರು, ನಾವು ಆಟೋ ಚಾಲಕರಾದ ರಾಜು ಅವರೊಂದಿಗೆ ಮಾತನಾಡಿದ್ದು ಈಗ ಹೊಂಗಸಂದ್ರ ನಿವಾಸಿಯಾಗಿರುತ್ತಾರೆ.ಈ ಮೇಲ್ಕಂಡ ವಿಡಿಯೋ ಕುರಿತು ವಿಚಾರಿಸಲಾಗಿ ನಿನ್ನೆ ಮಹದೇವಪುರ ದಿಂದ ಅರಕೆರೆಗೆ ರೈಡ್ ಬಂದಿದ್ದು ಅದರಂತೆ ನಾನು ಸ್ಥಳಕ್ಕೆ ಹೋದಾಗ ಅವರು 3ಜನ ಇದ್ದು ಲಗೇಜ್ ಜಾಸ್ತಿ ಇರುವ ಕುರಿತು ಮಾತಿನ ಚಕಮಕವಾಗಿರುತ್ತದೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಕನ್ನಡ ನೆಲದಲ್ಲಿ ಕನ್ನಡ ಕೇಳಿದ ಕನ್ನಡಿಗನ ಮೇಲೆ ದಬ್ಬಾಳಿಕೆ.
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 30, 2026
ಇವರಿಗೆ ಕರ್ನಾಟಕ ಬದುಕೋಕೆ ಬೇಕು
ಆದ್ರೆ ಕನ್ನಡ ಬೇಡ.
ಇದು ಬೆಂಗಳೂರಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ..
ದಿನೇ ದಿನೇ ಹೆಚ್ಚುತ್ತಿರುವ ವಲಸೆ ಕನ್ನಡಕ್ಕೆ, ಕನ್ನಡ ನಾಡಿಗೆ ಕಂಟಕ ಆಗುತ್ತಿದೆ.
ಎಚ್ಚರ ಕನ್ನಡಿಗರೇ@BlrCityPolice ತಮ್ಮ ಗಮನಕ್ಕೆ. pic.twitter.com/UbPj0TZXQk














Click it and Unblock the Notifications