ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಸಂಬಳ ಎಷ್ಟು? ಪ್ರಣಬ್ ಮುಖರ್ಜಿ

By Srinath
|
Google Oneindia Kannada News

pranab-mukherjee
ನವದೆಹಲಿ, ಫೆ.28: ಕೇವಲ ಸಂಬಳವನ್ನಷ್ಟೇ ಆದಾಯ ಮೂಲವನ್ನಾಗಿ ಹೊಂದಿರುವ ಉದ್ಯೋಗಿಗಳಿಗೆ ಇನ್ನು ಮುಂದೆ ತೆರಿಗೆ ಪಾವತಿ ಫಾರಂ ಅನ್ನು ಭರ್ತಿ ಮಾಡಿ, ಇಲಾಖೆಗೆ ಒಪ್ಪಿಸುವ ಫಜೀತಿ ಇಲ್ಲ. ಆದಾಯದ ಮೂಲದಲ್ಲೇ ಮಾಡಲಾಗುವ ತೆರಿಗೆ ಕಡಿತವಷ್ಟೇ (TDS) ಸಾಕು. 2011ರ ಜೂನ್‌ನಿಂದ ಈ ತೆರಿಗೆ ನೀತಿ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ಸೋಮವಾರ ಸಂಸತ್ತಿನಲ್ಲಿ ಘೋಷಿಸಿದರು.

ವಾಸ್ತವವಾಗಿ ಈಗಿರುವ ಪದ್ಧತಿಯಂತೆ ಟಿಡಿಎಸ್ ಮೂಲಕ ಸಂಬಳ ಕಡಿತಕ್ಕೊಳಗಾದವರು ಆಯಾ ಹಣಕಾಸು ವರ್ಷದ ಕೊನೆಗೆ ಆದಾಯ ತೆರಿಗೆ ಪಾವತಿಯನ್ನು ಮತ್ತೊಮ್ಮೆ Form 16 ಜೊತೆಗೆ ಇಲಾಖೆಗೆ ಸಲ್ಲಿಸಬೇಕಿತ್ತು. ಇದಕ್ಕಾಗಿ ಚಾರ್ಟೆಡ್ ಅಕೌಂಟೆಂಟ್‌ಗಳ ಮೊರೆಹೋಗುವುದು ಅನಿವಾರ್ಯವಾಗಿತ್ತು. ಪ್ರಸ್ತಾವಿತ ಹೊಸ ನೀತಿಯನುಸಾರ ಈ ಡಬಲ್ ಕೆಲಸ ತಪ್ಪಲಿದೆ.

ಯಾವುದು ಅಗ್ಗ ಯಾವುದು ತುಟ್ಟಿ? | ಆದಾಯ ತೆರಿಗೆ ಮಿತಿ : ಎಷ್ಟು? | ಮಹಿಳೆಯರಿಗೆ ಸುಣ್ಣ

ಈ ಹೊಸ ನೀತಿ ಜಾರಿಗೆ ಬಂದರೆ, ಬೇರೆ ಯಾವುದೇ ಆದಾಯವಿಲ್ಲದ, ಆದರೆ ತೆರಿಗೆ ವ್ಯಾಪ್ತಿಯಲ್ಲಿ ಬರುವ ಸಂಬಳದಾರರು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕಿಲ್ಲ. ಆದಾಯ ತೆರಿಗೆ ಸಂಬಳದ ಮೂಲದಲ್ಲಿಯೇ ಕಡಿತವಾಗುತ್ತಿರುವುದರಿಂದ ಮತ್ತೆ ದಾಖಲಾತಿಯನ್ನು ಸಲ್ಲಿಸುವ ಅಗತ್ಯವಿಲ್ಲ ಎಂಬ ವಿಚಾರವನ್ನು ಹಣಕಾಸು ಮಂತ್ರಾಲಯ ಮುಂದಿಟ್ಟಿದೆ.

ಇದರಿಂದ ಕಡಿಮೆ ಸಂಬಳದ ನೌಕರವರ್ಗಕ್ಕೆ ಹಾಲು ಕುಡಿದಷ್ಟು ಸಂತೋಷವಾದರೆ, ಚಾರ್ಟರ್ಡ್ ಅಕೌಂಟೆಂಟ್‌ಗಳ ಆದಾಯ ಮೂಲಕ್ಕೆ ಕೊಡಲಿಪೆಟ್ಟು ಬಿದ್ದಂತಾಗಲಿದೆ. ಬೆಂಗಳೂರಿನಂಥ ಮಹಾನಗರದಲ್ಲಿ ಸಂಬಳದಾರರ ಆದಾಯ ತೆರಿಗೆ ಘೋಷಣೆ ಮಾಡುವ ವಾರ್ಷಿಕ ಉದ್ಯೋಗದಿಂದ ಹಣ ಪಡೆಯುವ (ಸುಮಾರು 500 ರು.) ಮೂಲಕ್ಕೆ ಏಟು ಬೀಳುತ್ತದೆ. ಎಲ್ಲೋ ಕೆಲವರು, ಇಂಟರ್ ನೆಟ್ ಬಲ್ಲವರು ಆದಾಯ ತೆರಿಗೆ ಇಲಾಖೆ ಅಂತರ್ ಜಾಲ ತಾಣಕ್ಕೆ ಲಾಗ್ ಇನ್ ಮಾಡಿ, ವಿವರಗಳನ್ನು ಭರ್ತಿ ಮಾಡಿ ತೆರಿಗೆ ಘೋಷಿಸಿಕೊಳ್ಳುತ್ತಾರೆ. ಭಾರತದಲ್ಲಿ ಇಂಥವರ ಸಂಖ್ಯೆ 000.1%.

English summary
In a big relief from cumbersome tax filing process for the salaried class, finance minister Pranab Mukherjee on Monday proposed to exempt them ( Income below Rs. 1,80,000) from filing tax returns unless they have other sources of income. The decision will come into effect from June 1, 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X