ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023: 23 ಸಾವಿರ ಕೋಟಿಯ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 5,300 ಕೋಟಿ ನೀಡಿದ ಕೇಂದ್ರ

23 ಸಾವಿರ ಕೋಟಿ ಅಗತ್ಯವಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 5,300 ಕೋಟಿ ನೀಡಿ ಮೂಗಿಗೆ ತುಪ್ಪ ಸವರಿದ್ದೇಕೆ..? ಎಂದು ಕರ್ನಾಟಕ ಕಾಮಗ್ರೆಸ್ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ. 01: ಕೇಂದ್ರ ಬಜೆಟ್ ಮಂಡನೆ ಬಗ್ಗೆ ಕರ್ನಾಟಕ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, ಈ ಬಜೆಟ್ ಸೀಡ್‌ಲೇಡ್ ಕಡಲೆಕಾಯಿ ಎಂದು ವ್ಯಂಗ್ಯವಾಡಿದೆ.

ಹಣಕಾಸು ಸಚಿವರ ನಿರ್ಮಲಾ ಸೀತಾರಾಮನ್ ಬುಧವಾರ ಕೇಂದ್ರ ಬಜೆಟ್ 2023ರನ್ನು ಮಂಡಿಸಿದ್ದು, ರಾಜ್ಯಕ್ಕೂ ಹಲವು ಯೋಜನೆಗಳು ಮತ್ತು ಅನುದಾನಗಳನ್ನು ಬಿಡುಗಡೆ ಮಾಡಿದ್ದಾರೆ. ಇವಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಕೇಂದ್ರ ಸರ್ಕಾರ ನಿರೀಕ್ಷೆ ಹುಸಿ ಮಾಡಿದೆ ಎಂದಿದೆ.

ಬಜೆಟ್ 2023: ರಾಜಧಾನಿ, ಶತಾಬ್ದಿ, ದುರಂತೋ ಪ್ರಯಾಣಿಕರಿಗೆ ಶುಭ ಸುದ್ದಿ ಬಜೆಟ್ 2023: ರಾಜಧಾನಿ, ಶತಾಬ್ದಿ, ದುರಂತೋ ಪ್ರಯಾಣಿಕರಿಗೆ ಶುಭ ಸುದ್ದಿ

"ಕೇಂದ್ರ ಸರಕಾರದ ಬಜೆಟ್ "ಸೀಡ್‌‌ಲೆಸ್ ಕಡಲೆಕಾಯಿ" ಇದ್ದಂತಿದೆ!. 20 ಲಕ್ಷ ಕೋಟಿ ಪ್ಯಾಕೇಜ್' ಎಂಬ ಬಿಳಿಕಾಗೆ ತೋರಿಸಿದಂತೆಯೇ ಈ ಬಜೆಟ್ ಕೂಡ! ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಯುವ ಸಮುದಾಯಕ್ಕೆ ಯಾವುದೇ ಭರವಸೆ ಇಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವಿಲ್ಲ. ಜನರ ಸಂಕಷ್ಟ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿ ಮಾಡಿದೆ ಕೇಂದ್ರ ಸರ್ಕಾರ" ಎಂದು ಹಲವು ಆರೋಪಗಳನ್ನು ಮಾಡಿ ಕಿಡಿ ಕಾರಿದೆ.

Congress reacts to Union Budget 2023

"ಡಬಲ್ ಇಂಜಿನ್ ಸರ್ಕಾರ ಎಂದುಕೊಳ್ಳುವ ಕರ್ನಾಟಕ ಬಿಜೆಪಿ ಉತ್ತರಿಸಬೇಕು. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಸಿಗದಿರುವುದೇಕೆ? 23 ಸಾವಿರ ಕೋಟಿ ಅಗತ್ಯವಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 5,300 ಕೋಟಿ ನೀಡಿ ಮೂಗಿಗೆ ತುಪ್ಪ ಸವರಿದ್ದೇಕೆ..?. ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಚಕಾರ ಎತ್ತದಿರುವುದೇಕೆ..?" ಎಂದು ಸರಣಿ ಪ್ರಶ್ನೆಗಳನ್ನು ಹಾಕಿದೆ.

ಮುಂದುವರಿದು, "ಸಬ್ ಅರ್ಬನ್ ರೈಲು ಕಾಮಗಾರಿಗೆ ನಿಗದಿಪಡಿಸಿದ್ದ ಕಾಲಮಿತಿ ಮುಗಿಯುತ್ತಿದೆ. 18 ಸಾವಿರ ಕೋಟಿಯ ಯೋಜನೆಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಹಣ ನೀಡಿದ್ದು ಕರ್ನಾಟಕದೆಡೆಗೆ ಕೇಂದ್ರ ಸರ್ಕಾರಕ್ಕಿರುವ ತಾತ್ಸಾರ ಮನೋಭಾವಕ್ಕೆ ನಿದರ್ಶನ. ನಿಗದಿತ ಕಾಲಮಿತಿಯಲ್ಲಿ ಖಂಡಿತವಾಗಿಯೂ ಪೂರ್ಣಗೊಳಿಸುವ ಇರಾದೆ ಬಿಜೆಪಿಗಿಲ್ಲ" ಎಂದು ಕಿಡಿಕಾರಿದೆ.

ರಾಜ್ಯದ ರೈತರಿಗೆ ಬಜೆಟ್‌ನಲ್ಲಿ ಯಾವುದೇ ಕೊಡುಗೆಯಿಲ್ಲ ಎಂದು ಆರೋಪಿಸಿರುವ ಕಾಗ್ರೆಸ್, "ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದ ರೈತರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು ಬಿಜೆಪಿ..? ಕೃಷಿ ಡಿಜಿಟಲೀಕರಣ ಎಂಬ ಆಕರ್ಷಕ ಪದವನ್ನು ಪರಿಚಯಿಸಿದಾಕ್ಷಣ ರೈತರ ಸಮಸ್ಯೆ ಬಗೆಹರಿಯದು. ಬೆಳೆಯನ್ನು ಡಿಜಿಟಲ್ ತಾಂತ್ರಿಕತೆಯಲ್ಲಿ ಬೆಳೆಯಲಾಗದು ಎಂಬ ವಾಸ್ತವು ಪ್ರಧಾನಿಗೆ ತಿಳಿದಂತಿಲ್ಲ..!" ಎಂದು ಟೀಕಿಸಿದೆ.

English summary
Union Budget 2023: Karnataka congress reaction on Finance Minister Nirmala Sitharaman's union budget. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X