Get Updates
Get notified of breaking news, exclusive insights, and must-see stories!

Budget 2024: ಈ ವರ್ಷ ಭಾರತೀಯ ರೈಲ್ವೆಗೆ ಶೇ.25 ರಷ್ಟು ಹೆಚ್ಚು ಅನುದಾನ ಹಂಚಿಕೆ? ಅಂಕಿ ಸಂಖ್ಯೆ, ವಿವರ

ಬೆಂಗಳೂರು, ಜನವರಿ 29: ಇದೇ ಫೆಬ್ರುವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಕೇಂದ್ರ ಆಯವ್ಯಯ-2024 (Central Budget 2024) ಮಂಡಿಸಲಿದ್ದಾರೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಮೊದಲು ಮಂಡನೆಯಾಗಲಿರುವ ಈ ಬಜೆಟ್ ಮೇಲೆ ಭಾರೀ ನಿರೀಕ್ಷೆಗಳು ಇವೆ. ವಿವಿಧ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಸಿಗುತ್ತದೆ? ಅದರಲ್ಲೂ ರೈಲ್ವೆ ಇಲಾಖೆಗೆ ಎಷ್ಟು ಅನುದಾನ ಸಿಗುತ್ತದೆ? ಎಂಬ ಕುತೂಹಲ ಹೆಚ್ಚಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಮೊದಲಿನಂತೆಯೆ ಟ್ರೆಂಡ್ ಪಾಲಿಸುವ ಸಾಧ್ಯತೆ ಇದೆ. ಅಂದರೆ ಪ್ರತಿ ವರ್ಷದಿಂದ ವರ್ಷಕ್ಕೆ ಹೆಚ್ಚು ಅನುದಾನ ಘೋಷಣೆ ಮಾಡುವುದು. ಅದೇ ರೀತಿ 2024-25ರ ಆರ್ಥಿಕ ವರ್ಷದಲ್ಲಿ ಸರ್ಕಾರದಿಂದ ರೈಲ್ವೆಗೆ ಹೆಚ್ಚಿನ ಹಂಚಿಕೆ ಪಡೆಯುವ ಸಾಧ್ಯತೆ ಇದೆ ಎಂದು ಉದ್ಯಮ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Union Budget 2024: Expected 25 Percent More Grant Govt Will Allocated to Railways Than Last Year

ಹಿಂದಿನ ವರ್ಷಗಳ ಹಂಚಿಕೆ, ಹೆಚ್ಚಳದ ಮಾಹಿತಿ

ಕಳೆದ ಸಾಲಿನಲ್ಲಿ ( 2023-24) ಭಾರತೀಯ ರೈಲ್ವೆಗೆ 2.4 ಲಕ್ಷ ಕೋಟಿ ರೂ. ಅನುದಾನ ಹಂಚಿಕೆ ಆಗಿತ್ತು. ಇದು ಅದರ ಹಿಂದಿನ ವರ್ಷವಾದ 2022-23ರ ಹಣಕಾಸು ವರ್ಷದಲ್ಲಿ ಹಂಚಿಕೆಯಾಗಿದ್ದ 1.37 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು. ಈ ಬಾರಿಯು ಕಳೆದ ಸಾಲಿಗಿಂತ ಅತ್ಯಧಿಕ ಹಣವನ್ನು ರೈಲ್ವೆ ಅಭಿವೃದ್ಧಿ, ನಿರ್ವಹಣೆಗೆ ಮುಡಿಪಾಗಿಡುವ ನಿರೀಕ್ಷೆ ಇದೆ.

2023-24 ರ ಹಣಕಾಸು ವರ್ಷದಲ್ಲಿ ಹಂಚಿಕೆಯು 2013-14 ರ ಹಣಕಾಸು ವರ್ಷದಲ್ಲಿ ಮೀಸಲಿಟ್ಟ ಮೊತ್ತಕ್ಕಿಂತ ಒಂಬತ್ತು ಪಟ್ಟು ಹೆಚ್ಚು ಎಂದು ಕಳೆದ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದರು. ಇದೆಲ್ಲ ಗಮನಿಸಿದರೆ ಪ್ರತಿ ವರ್ಷದಂತೆ ಈ ಬಾರಿಯು ಹೆಚ್ಚು ಹಂಚಿಕೆ ಸಿಗುವ ಸಂಭವವಿದೆ.

3 ಲಕ್ಷ ಕೋಟಿ ರೂ.ಹಂಚಿಕೆ ನಿರೀಕ್ಷೆ

ಈ ವರ್ಷ ವಿಶ್ಲೇಷಕರು ರೈಲ್ವೆಗೆ ಬಜೆಟ್ ಹಂಚಿಕೆಯು ಅಭೂತಪೂರ್ವ ಮಟ್ಟವನ್ನು ತಲುಪುವ ನಿರೀಕ್ಷೆ ಎಂದು ಭಾವಿಸಿದ್ದಾರೆ. 2024-25 ರ ಆರ್ಥಿಕ ವರ್ಷದಲ್ಲಿ 3 ಲಕ್ಷ ಕೋಟಿ ರೂಪಾಯಿ ಹಂಚಿಕೆ ನಿರೀಕ್ಷೆ ಇದೆ. ಇದು ಹಿಂದಿನ ವರ್ಷಕ್ಕಿಂತ ಶೇಕಡಾ 25 ರಷ್ಟು ಗಣನೀಯ ಏರಿಕೆ ಎಂದು ಅವರು ವಿಶ್ಲೇಷಿಸಿದ್ದಾರೆ.

2023-24 ವರ್ಷವು ಭಾರತೀಯ ರೈಲ್ವೆ ಇಲಾಖೆ ಮಟ್ಟಿಗೆ ಘಟನಾತ್ಮಕ ವರ್ಷವೆಂದು ಸಾಬೀತಾಯಿತು. ಇದು ರಾಷ್ಟ್ರವ್ಯಾಪಿ ಹಲವಾರು ಹೊಸ ವಂದೇ ಭಾರತ್ ರೈಲುಗಳ ಉದ್ಘಾಟನೆ ಮತ್ತು ಯಾವುದೇ ಅಲಂಕಾರಗಳಿಲ್ಲದ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನ ಪರಿಚಯದಿಂದ ಗುರುತಿಸಲ್ಪಟ್ಟಿದೆ.

Union Budget 2024: Expected 25 Percent More Grant Govt Will Allocated to Railways Than Last Year

ಈ ಮಧ್ಯೆ ಒಡಿಶಾದಲ್ಲಿ ಸಂಭವಿಸಿದ ಕಂಡು ಕೇಳರಿಯದ ರೈಲು ದುರಂತವು ಸಹ ರೈಲ್ವೆ ವಲಯದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಈ ದುರ್ಘಟನೆಯಲ್ಲಿ ಸುಮಾರು 300 ಜನರು ಪ್ರಾಣ ಬಿಟಿದ್ದಾರೆ.

ಭವಿಷ್ಯದಲ್ಲಿ ರೈಲ್ವೆ ಮತ್ತಷ್ಟು ಆಧುನಿಕರಣ?

ಪ್ರಸಕ್ತ 2024-25ರ ಹಣಕಾಸು ವರ್ಷದ ಮಧ್ಯಂತರ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಹಣಕಾಸು ಸಚಿವರು ಬಂಡವಾಳ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತಾರೆ ಎಂಬ ವಿಶ್ವಾಸ ದಟ್ಟವಾಗಿದೆ. ಈ ಅನುದಾನದಲ್ಲಿ ಭಾರತೀಯ ರೈಲ್ವೆ ಮತ್ತಷ್ಟು ಆಧುನೀಕರಣಗೊಳ್ಳಲಿದೆ. ರೈಲ್ವೆ ಸಾರಿಗೆ ಮತ್ತಷ್ಟು ಸುಗಮಗೊಳಿಸುವ ಉದ್ದೇಶ ಇದೆ.

ದೇಶದಲ್ಲಿ ವೇಗದ ರೈಲುಗಳು, ನವೀಕರಿಸಿದ ರೈಲು ನಿಲ್ದಾಣಗಳು, ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳ ಅಳವಡಿಕೆ, ಸರಕು ಸಾಗಣೆ ಕಾರಿಡಾರ್‌ಗಳ ಅಭಿವೃದ್ಧಿ ಸಹ ಈ ಹಂಚಿಕೆಯಲ್ಲಿ ಒಳಗೊಂಡಿರಲಿದೆ.

ಕೇವಲ ರೈಲ್ವೆ ಮಾತ್ರವಲ್ಲದೇ 2024-25ರಲ್ಲಿ ರಸ್ತೆಗಳು, ಹೆದ್ದಾರಿಗಳು ಮತ್ತು ರೈಲ್ವೇಗಳಂತಹ ಮೂಲಸೌಕರ್ಯ ಕ್ಷೇತ್ರಗಳಿಗೆ ಸಾಕಷ್ಟು ಹಂಚಿಕೆ ಒದಗಿಸುವ ನಿರೀಕ್ಷೆಗಳು ಇವೆ. ಹೊಸ ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಉತ್ಪಾದನೆಯನ್ನು ಪ್ರೋತ್ಸಾಹಿಸುವಲ್ಲಿ ನಿಟ್ಟಿನಲ್ಲಿ ಸರ್ಕಾರವು ರಕ್ಷಣಾ ವೆಚ್ಚ ಮತ್ತಷ್ಟು ಏರಿಕೆ ಮಾಡುವ ಸಂಭವವಿದೆ ಎಂದು ತಜ್ಞರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+