Budget 2024: ಫುಲ್ ಬಜೆಟ್ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಮಾಹಿತಿ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಗುರುವಾರ ಮಂಡಿಸುತ್ತಿದ್ದಾರೆ. ವಿತ್ತ ಸಚಿವೆಯಾಗಿ ಅವರ ಆರನೇ ಬಜೆಟ್ ಮಂಡನೆ. ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ಮಧ್ಯಂತರ ಬಜೆಟ್ ಅನ್ನು ಮಂಡಿಸಲಾಗುತ್ತಿದೆ. ಹೊಸ ಸರ್ಕಾರ ರಚನೆಯ ನಂತರ ಸಮಗ್ರ ಬಜೆಟ್ ಅನ್ನು ಮಂಡಿಸಲಾಗುತ್ತದೆ.
ಲೋಕಸಭೆ ಚುನಾವಣೆಯ ನಂತರ ಸರ್ಕಾರ ಸ್ಥಾಪನೆಯಾಗುವವರೆಗೆ ಅವಧಿಯಲ್ಲಿ ಹಣಕಾಸಿನ ಅಗತ್ಯತೆಗಳನ್ನು ಮಧ್ಯಂತರ ಬಜೆಟ್ ತಿಳಿಸುತ್ತದೆ. ಇನ್ನು, ಬಜೆಟ್ ಮಂಡನೆ ಬಳಿಕ ಸಂಪೂರ್ಣ ಬಜೆಟ್ ಡಾಕ್ಯುಮೆಂಟ್ ಅನ್ನು ನೋಡಲು ಆಸಕ್ತಿ ಹೊಂದಿರುವವರಿಗೆ ಸರ್ಕಾರವು ಬಜೆಟಟ್ ಕಾಪಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದೆ. ಬಜೆಟ್ ಮಂಡನೆ ಬಳಿಕ ಸಂಪೂರ್ಣ ಭಾಷಣ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಆಸಕ್ತಿ ಇರುವ ಸಾರ್ವಜನಿಕರು ಪಿಡಿಎಫ್ (PDF) ಆವೃತ್ತಿಯನ್ನು www.indiabudget.gov.in. ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. ಇದರ ಜೊತೆಗೆ ಈ ವೆಬ್‌ಸೈಟ್‌ನಲ್ಲಿ ಹಿಂದಿನ ಬಜೆಟ್ ಭಾಷಣಗಳನ್ನು ಕೂಡ ಪಡೆಯಬಹುದು. ಸರ್ಕಾರವು Android ಮತ್ತು iOS ಪ್ಲಾಟ್‌ಫಾರ್ಮ್‌ಗಳಿಗೆ ಯೂನಿಯನ್ ಬಜೆಟ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಬಳಕೆದಾರರು ಬಜೆಟ್ ಡಾಕ್ಯುಮೆಂಟ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ಇತ್ತೀಚಿನ ಬಜೆಟ್‌ನಲ್ಲಿನ ವಿವರಗಳನ್ನು ಪಡೆಯಲು ಅವಕಾಶ ನೀಡುತ್ತದೆ.
ಅಧಿಕೃತ ವೆಬ್‌ಸೈಟ್ ಮೂಲಕ ಬಜೆಟ್ ಕಾಪಿ ಡೌನ್‌ಲೋಡ್ ಮಾಡುವುದು ಹೇಗೆ?
* www.indiabudget.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
* "ಬಜೆಟ್ ಭಾಷಣಗಳು" ಎಂದಿರುವ ವಿಭಾಗಕ್ಕೆ ಭೇಟಿ ನೀಡಿ
* ಪುಟದಲ್ಲಿ "ಬಜೆಟ್ 2024" ಎಂದು ಲೇಬಲ್ ಮಾಡಿ ಇತ್ತೀಚೆಗೆ ಸೇರಿಸಲಾದ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ಅದು ನಿಮ್ಮನ್ನು ಹೊಸ ಪುಟಕ್ಕೆ ಮಾರ್ಗ ನೀಡುತ್ತೆ. ಅಲ್ಲಿ ನೀವು ಬಜೆಟ್ 2024 ರ ಡೌನ್‌ಲೋಡ್ ಲಿಂಕ್ ಅನ್ನು ನೋಡಬಹುದು.
* ಪಿಡಿಎಫ್ ಡಾಕ್ಯುಮೆಂಟ್ ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ.
ಯೂನಿಯನ್ ಬಜೆಟ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?
* www.indiabudget.gov.in ಗೆ ಭೇಟಿ ನೀಡಿ.
* ಪುಟದ ಬಲಭಾಗದಲ್ಲಿರುವ "ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ" ಟಿಕ್ಕರ್ ಅನ್ನು ಆಯ್ಕೆ ಮಾಡಿ.
* ಅದು ನಿಮ್ಮನ್ನು ಯೂನಿಯನ್ ಬಜೆಟ್ ಆಪ್ ಡೌನ್‌ಲೋಡ್ ಕೇಂದ್ರಕ್ಕೆ ನಿರ್ದೇಶಿಸುತ್ತದೆ
* ನೀವು Android ಸಾಧನವನ್ನು ಬಳಸುತ್ತಿದ್ದರೆ, Android ಅಪ್ಲಿಕೇಶನ್ ಬಟನ್ ಕ್ಲಿಕ್ ಮಾಡಿ. iPhone ಅಥವಾ iPad ಬಳಕೆದಾರರಿಗೆ, Apple App Store ಐಕಾನ್ ಆಯ್ಕೆಮಾಡಿ.
* ಅಧಿಕೃತ ಅಪ್ಲಿಕೇಶನ್ ಒಳಗೆ, ಯೂನಿಯನ್ ಬಜೆಟ್ PDF ಗಾಗಿ ಡೌನ್‌ಲೋಡ್ ಲಿಂಕ್ ಸಿಗಲಿದೆ.
ಯೂನಿಯನ್ ಬಜೆಟ್ ಅಪ್ಲಿಕೇಶನ್
ಕೇಂದ್ರ ಬಜೆಟ್ 2021 ರ ಮಂಡನೆಗೆ ಮೊದಲು, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಹಲ್ವಾ ಸಮಾರಂಭದಲ್ಲಿ ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದರು, ಆರ್ಥಿಕ ವ್ಯವಹಾರಗಳ ಇಲಾಖೆಯ (DEA) ಮೇಲ್ವಿಚಾರಣೆಯಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) iOS ಮತ್ತು Android ಪ್ಲಾಟ್‌ಫಾರ್ಮ್‌ಗಳಿಗೆ ಅಪ್ಲಿಕೇಶನ್ ಅನ್ನು ರಚಿಸಿದೆ. ಬಜೆಟ್ ಡಾಕ್ಯೂಮೆಂಟ್ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಸಿಗಲಿದೆ. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಉಚಿತ ಡೌನ್‌ಲೋಡ್‌ಗೆ ಸುಲಭವಾಗಿ ಲಭ್ಯವಿದೆ.












Click it and Unblock the Notifications