Get Updates
Get notified of breaking news, exclusive insights, and must-see stories!

Vande Bharat Express: ದಕ್ಷಿಣ ಭಾರತಕ್ಕೆ ಮೂರು ಹೊಸ ವಂದೇ ಭಾರತ್‌ ರೈಲುಗಳು- ಮಾರ್ಗ, ಮಾಹಿತಿ, ವಿವರ

ನವದೆಹಲಿ, ಸೆಪ್ಟೆಂಬರ್‌ 14: ಭಾರತೀಯ ರೈಲ್ವೇಯು 9 ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲು ಮುಂದಾಗಿದೆ. ಅವುಗಳಲ್ಲಿ ಹೆಚ್ಚಿನವು ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಸಂಚರಿಸಲಿವೆ. ಕೆಲ ತಿಂಗಳಲ್ಲೇ ಈ ಎರಡೂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಇಲ್ಲಿ ಗಮನಾರ್ಹವಾಗಿದೆ.

ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಈ ಹೊಸ ರೈಲುಗಳ ಕೋಚ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.

Vande Bharat Express: Three More Trains For South India Soon- Know routes, price, details

ವಂದೇ ಭಾರತ್ ಎಕ್ಸ್‌ಪ್ರೆಸ್‌ ಭಾರತದ ಮೊದಲ ಸೆಮಿ ಹೈ ಸ್ಪೀಡ್‌ ರೈಲಾಗಿದೆ. ಇದು ಸುಲಭ ಮತ್ತು ಸರಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಭಾರತೀಯ ರೈಲ್ವೇ ಈಗ ಇನ್ನೂ 9 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲು ಮುಂದಾಗಿದೆ. ಅದರಲ್ಲಿ 5 ರೈಲುಗಳನ್ನು ಅಂತಿಮಗೊಳಿಸಲಾಗಿದ್ದು, ಇವುಗಳು ಉತ್ತರ ಭಾರತದ ರಾಜ್ಯಗಳಲ್ಲಿ ಸಂಚಾರ ನಡೆಸಲಿವೆ. 3 ರೈಲುಗಳನ್ನು ದಕ್ಷಿಣ ರೈಲ್ವೆಗೆ ನೀಡಲಾಗಿದೆ. ಇದಕ್ಕಾಗಿ ಮಾರ್ಗಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ. 4 ನೇ ರೈಲಿನ ವಿವರಗಳು ಇನ್ನೂ ತಿಳಿದುಬಂದಿಲ್ಲ.

ಉತ್ತರ ಭಾರತದಲ್ಲಿ ಸಂಚಾರ ನಡೆಸಲಿರುವ ಐದು ರೈಲುಗಳು

ಇಂದೋರ್ - ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್
ಜೈಪುರ - ಉದಯಪುರ ವಂದೇ ಭಾರತ್ ಎಕ್ಸ್‌ಪ್ರೆಸ್
ಪುರಿ - ರೂರ್ಕೆಲಾ ವಂದೇ ಭಾರತ್ ಎಕ್ಸ್‌ಪ್ರೆಸ್
ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
ಜೈಪುರ - ಚಂಡೀಗಢ ವಂದೇ ಭಾರತ್ ಎಕ್ಸ್‌ಪ್ರೆಸ್

Vande Bharat Express: Three More Trains For South India Soon- Know routes, price, details

ಈ ಕುರಿತು ಮಧ್ಯಪ್ರದೇಶದಲ್ಲಿ ಮಾತನಾಡಿರುವ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರು, 'ವಂದೇ ಭಾರತ್ ಈ ಮಾರ್ಗದಲ್ಲಿ ಓಡುವ ಸಮಯ ಬಂದಿದೆ. ನಿಮ್ಮ ಸಂಸತ್ ಸದಸ್ಯ ಸುಧೀರ್ ಗುಪ್ತಾ ಅವರು ಈಗಾಗಲೇ ಅದನ್ನು ವಿನಂತಿಸಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ನಿಮ್ಮ ಮಾರ್ಗದಲ್ಲಿ ಚಲಿಸುತ್ತದೆ. ಪುರಿ-ರೂರ್ಕೆಲಾ ಮಾರ್ಗದ ವಂದೇ ಭಾರತ್ ರೈಲಿಗೆ ಸೆಪ್ಟೆಂಬರ್ 30 ರಂದು ಪ್ರಧಾನಿ ಮೋದಿ ಅವರು ಮಾಡುವ ಸಾಧ್ಯತೆಯಿದೆ' ಎಂದು ಅವರು ಹೇಳಿದ್ದಾರೆ.

25 ಸಕ್ರಿಯ ವಂದೇ ಭಾರತ್ ರೈಲುಗಳಲ್ಲಿ, ನಾಗ್ಪುರ- ಬಿಲಾಸ್‌ಪುರ್ ಎಕ್ಸ್‌ಪ್ರೆಸ್ ಶೇ 106.40 ರಷ್ಟು ಹೆಚ್ಚಿನ ಆಕ್ಯುಪೆನ್ಸಿಯನ್ನು ವರದಿ ಮಾಡಿದೆ.

ಭಾರತೀಯ ರೈಲ್ವೆಯ ಪ್ರಕಾರ, ಆಗಸ್ಟ್ 15 ರಿಂದ ಸೆಪ್ಟೆಂಬರ್ 8 ರ ವರೆಗೆ ಮಧ್ಯ ರೈಲ್ವೆ ಪ್ರದೇಶದಲ್ಲಿ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರ ಸಂಖ್ಯೆ 1.22. ಲಕ್ಷ ಆಗಿದೆ. ಈ ಅವಧಿಯಲ್ಲಿ ಭಾರತೀಯ ರೈಲ್ವೆಗೆ 10.72 ಕೋಟಿ ರೂಪಾಯಿ ಆದಾಯ ಬಂದಿದೆ.

ವಂದೇ ಭಾರತ್ ರೈಲು ಸುಲಭ ಮತ್ತು ಪರಿಣಾಮಕಾರಿಯಾದ ಉನ್ನತ ದರ್ಜೆಯ ಸೌಕರ್ಯಗಳನ್ನು ಒದಗಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ನಿರ್ಮಿಸಲಾಗಿದೆ. ಇದು ಪ್ರಯಾಣದಲ್ಲಿ ಸಾಧ್ಯವಾದಷ್ಟು ಉತ್ತಮ ಅನುಭವವನ್ನು ನೀಡುತ್ತದೆ.

Vande Bharat Express: Three More Trains For South India Soon- Know routes, price, details

ಸರಾಸರಿಯಾಗಿ, ಇದು ಪ್ರಯಾಣದ ಸಮಯವನ್ನು ಸುಮಾರು ಶೇ 15 ರಷ್ಟು ಕಡಿಮೆ ಮಾಡುತ್ತದೆ. ಇದುವರೆಗೂ ಲಭ್ಯವಿರುವ ರೈಲುಗಳಲ್ಲಿ ವಂದೇ ಭಾರತ್ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯವಾಗಿರುವ ರೈಲಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಈಗಿರುವ ವಂದೇ ರೈಲುಗಳ ಪಟ್ಟಿ

1. ಮುಂಬೈ - ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ (22229/22230)
ಪ್ರಯಾಣದ ಸಮಯ - 10 ಗಂಟೆ 5 ನಿಮಿಷಗಳು
ದರ: ರೂ. 1,970 ರಿಂದ ರೂ. 3,535.

2 - ಪಾಟ್ನಾ - ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್ (22349/22350)
ಪ್ರಯಾಣದ ಸಮಯ - 6 ಗಂಟೆಗಳು
ದರ: 1,025 ರಿಂದ 1,930 ರೂ.

3. ಕೆಎಸ್‌ಆರ್‌ ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (20661/20662)
ಪ್ರಯಾಣದ ಸಮಯ - 6 ಗಂಟೆ 25 ನಿಮಿಷಗಳು.
ದರ: ರೂ 1,185 ರಿಂದ ರೂ 2,265 ವರೆಗೆ ಇರುತ್ತದೆ.

Vande Bharat Express: Three More Trains For South India Soon- Know routes, price, details

4. ರಾಣಿ ಕಮಲಾಪತಿ - ಜಬಲ್‌ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ (20173/20174)
ಪ್ರಯಾಣದ ಸಮಯ 4 ಗಂಟೆ 35 ನಿಮಿಷಗಳು
ದರ: ರೂ 1,055 ರಿಂದ ರೂ 1,880 ವರೆಗೆ ಇರುತ್ತದೆ.

5. ಇಂದೋರ್ - ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್ (20911/20912)
ಪ್ರಯಾಣದ ಸಮಯ - 3 ಗಂಟೆಗಳು
ದರ: 950 ರಿಂದ 1,525 ರೂ.

6. ಜೋಧ್‌ಪುರ - ಸಬರಮತಿ (ಅಹಮದಾಬಾದ್) ವಂದೇ ಭಾರತ್ ಎಕ್ಸ್‌ಪ್ರೆಸ್ (12461/12462)
ಪ್ರಯಾಣದ ಸಮಯ 6 ಗಂಟೆ 10 ನಿಮಿಷಗಳು.
ದರ: 1,280 ರಿಂದ 2,350 ರೂ.

7. ಗೋರಖ್‌ಪುರ - ಲಕ್ನೋ ಚಾರ್‌ಬಾಗ್ ವಂದೇ ಭಾರತ್ ಎಕ್ಸ್‌ಪ್ರೆಸ್ (22549/22550)
ಪ್ರಯಾಣದ ಸಮಯ 4 ಗಂಟೆ 15 ನಿಮಿಷಗಳು
ದರ: 724 ರಿಂದ 1,470 ರೂ.

8. ತಿರುವನಂತಪುರಂ ಸೆಂಟ್ರಲ್ - ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ (20633/20634)
ಮಾರ್ಗ: ತಿರುವನಂತಪುರಂ ಸೆಂಟ್ರಲ್ - ಕಾಸರಗೋಡು
ಪ್ರಯಾಣದ ಸಮಯ 7 ಗಂಟೆ 50 ನಿಮಿಷಗಳು
ದರ: ರೂ 1,520 ರಿಂದ ರೂ 2,880 ವರೆಗೆ ಇರುತ್ತದೆ.

9. ಸಿಕಂದರಾಬಾದ್ - ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ (20701/20702)
ಮಾರ್ಗ: ಸಿಕಂದರಾಬಾದ್ - ತಿರುಪತಿ
ಪ್ರಯಾಣದ ಸಮಯ - 08 ಗಂಟೆ 15 ನಿಮಿಷಗಳು
ದರ: ರೂ 1,680 ರಿಂದ ರೂ 2,661 ವರೆಗೆ ಇರುತ್ತದೆ.

10. ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ (20822/20834)
ಮಾರ್ಗ: ಸಿಕಂದರಾಬಾದ್- ವಿಶಾಖಪಟ್ಟಣ
ಪ್ರಯಾಣದ ಸಮಯ 8 ಗಂಟೆ 30 ನಿಮಿಷಗಳು
ದರ: 1,665 ರಿಂದ 3,120 ರೂ.

11. ಅಜ್ಮೀರ್ - ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (20977/20978)
ಮಾರ್ಗ: ಅಜ್ಮೀರ್ - ದೆಹಲಿ
ಪ್ರಯಾಣದ ಸಮಯ - 5 ಗಂಟೆ 15 ನಿಮಿಷಗಳು
ದರ: ರೂ 1,085 ರಿಂದ ರೂ 2,270 ವರೆಗೆ ಇರುತ್ತದೆ.

12. ದೆಹಲಿ-ಡೆಹ್ರಾಡೂನ್ ವಂದೇ ಭಾರತ್ ಎಕ್ಸ್‌ಪ್ರೆಸ್ (22457/22458)
ಮಾರ್ಗ: ದೆಹಲಿ-ಡೆಹ್ರಾಡೂನ್
ಪ್ರಯಾಣದ ಸಮಯ - 4 ಗಂಟೆ 45 ನಿಮಿಷಗಳು
ದರ: Rs1,065 ರಿಂದ Rs1,890 ವರೆಗೆ.

13. ಹಜರತ್ ನಿಜಾಮುದ್ದೀನ್ - ರಾಣಿ ಕಮಲಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ (20172/20171)
ಮಾರ್ಗ: ಹಜರತ್ ನಿಜಾಮುದ್ದೀನ್ - ರಾಣಿ ಕಮಲಪತಿ
ಪ್ರಯಾಣದ ಸಮಯ - 7 ಗಂಟೆ 10 ನಿಮಿಷಗಳು
ದರ: ರೂ 1,665 ರಿಂದ ರೂ 3,120 ವರೆಗೆ ಇರುತ್ತದೆ.

14. ನವದೆಹಲಿ - ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ (22435-22436)
ಮಾರ್ಗ: ನವದೆಹಲಿ - ವಾರಣಾಸಿ
ಪ್ರಯಾಣದ ಸಮಯ - 8 ಗಂಟೆ 0 ನಿಮಿಷಗಳು
ದರ: ರೂ 1,805 ರಿಂದ ರೂ 3,335 ವರೆಗೆ ಇರುತ್ತದೆ.

15. ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (ಜೆ&ಕೆ) ವಂದೇ ಭಾರತ್ ಎಕ್ಸ್‌ಪ್ರೆಸ್ (22439/22440)
ಮಾರ್ಗ: ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ
ಪ್ರಯಾಣದ ಸಮಯ - 8 ಗಂಟೆ 0 ನಿಮಿಷಗಳು
ದರ: 1,000 ರೂ.ನಿಂದ 3,000 ರೂ.

16. ನವದೆಹಲಿ - ಹಿಮಾಚಲ ಪ್ರದೇಶದ ಅಂಬ್ ಅಂಡೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ (22447/22448)
ಮಾರ್ಗ: ದೆಹಲಿಯಿಂದ ಅಂಡೌರಾ
ಪ್ರಯಾಣದ ಸಮಯ - 5 ಗಂಟೆ 25 ನಿಮಿಷಗಳು
ದರ: 1,000 ರೂ.ನಿಂದ 2,000 ರೂ.

17. ಚೆನ್ನೈ - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ (20643/20644)
ಮಾರ್ಗ: ಚೆನ್ನೈ - ಕೊಯಮತ್ತೂರು
ಪ್ರಯಾಣದ ಸಮಯ - 5 ಗಂಟೆ 50 ನಿಮಿಷಗಳು
ದರ: 1,317 ರಿಂದ 2,661 ರೂ.

18. ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ (20607/20608)
ಮಾರ್ಗ: ಚೆನ್ನೈ - ಮೈಸೂರು
ಪ್ರಯಾಣದ ಸಮಯ - 6 ಗಂಟೆ 30 ನಿಮಿಷಗಳು
ದರ: 1,000 ರೂ.ನಿಂದ 2,000 ರೂ.

19. ನಾಗ್ಪುರ - ಬಿಲಾಸ್ಪುರ್ ವಂದೇ ಭಾರತ್ ಎಕ್ಸ್ಪ್ರೆಸ್ (20825/20826)
ಮಾರ್ಗ: ನಾಗ್ಪುರ - ಬಿಲಾಸ್ಪುರ್
ಪ್ರಯಾಣದ ಸಮಯ - 5 ಗಂಟೆ 5 ನಿಮಿಷಗಳು
ದರ: ರೂ 1,890 ರಿಂದ ರೂ 1,000 ವರೆಗೆ ಇರುತ್ತದೆ.

20. ಹೊಸ ಜಲ್ಪೈಗುರಿ - ಗುವಾಹಟಿ ವಂದೇ ಭಾರತ್ ಎಕ್ಸ್‌ಪ್ರೆಸ್ (22227/22228)
ಮಾರ್ಗ: ಹೊಸ ಜಲ್ಪೈಗುರಿ - ಗುವಾಹಟಿ
ಪ್ರಯಾಣದ ಸಮಯ: 05 ಗಂಟೆ 30 ನಿಮಿಷಗಳು
ದರ: ರೂ 495 ರಿಂದ ರೂ 2,025

21. ಹೌರಾ - ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ (22895/22896)
ಮಾರ್ಗ: ಹೌರಾದಿಂದ ಪುರಿಗೆ
ಪ್ರಯಾಣದ ಸಮಯ: 04 ಗಂಟೆ 25 ನಿಮಿಷಗಳು
ದರ: ರೂ 1,265 ರಿಂದ ರೂ 2,420

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+