ನಿರ್ಮಲಾ ಸೀತಾರಾಮನ್ ಈ "6 ಬಜೆಟ್‌ ಸೀರೆಗಳ" ವಿಶೇಷತೆ ತಿಳಿಯಿರಿ -ಮಾಹಿತಿ ಇಲ್ಲಿದೆ

ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ ಅವರು ಗುರುವಾರ (ಫೆಬ್ರವರಿ 1) ಮಧ್ಯಂತರ ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದು, ಅವರು ಮಂಡನೆ ಮಾಡಿದ 6ನೆ ಕೇಂದ್ರ ಬಜೆಟ್‌ ಇದಾಗಿದೆ. ಹಾಗೆಯೇ ನಿರ್ಮಲಾ ಸೀತಾರಾಮನ್‌ ಅವರು 6 ಬಾರಿಯೂ ಬಜೆಟ್‌ ಅನುಮೋದಿಸಿದ ವೇಳೆ ಸಾಂಪ್ರದಾಯಿಕ ಉಡುಗೆ ಸೀರೆಯಲ್ಲಿ ಮಿಂಚಿಸಿದ್ದಾರೆ. ಹಾಗಾದರೆ 6 ಬಾರಿ ಯಾವ್ಯಾವ ರೀತಿಯ ಸೀರೆಯನ್ನು ಧರಿಸಿದ್ದಾರೆ, ಇವುಗಳ ವಿಶೇಷತೆ ಏನು ಎನ್ನುವ ಮಾಹಿತಿ ಇಲ್ಲಿ ತಿಳಿಯಿರಿ.

ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸುವ ಜೊತೆಗೆ ಸೀರೆ ವಿಚಾರಕ್ಕೂ ಕೂಡ ಸುದ್ದಿಯಾಗುತ್ತಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರಿಗೆ ಭಾರತೀಯ ಜವಳಿಗಳ ಮೇಲೇ ಅಪಾರ ಪ್ರೀತಿ ಹೊಂದಿದವರಾಗಿದ್ದಾರೆ. ಈ ಹಿನ್ನೆಲೆ ಅವರು ಪ್ರತಿ ಬಾರಿಯಂತೆಯೇ ಈ ವರ್ಷವೂ ಕೂಡ ಮಧ್ಯಂತರ ಬಜೆಟ್‌ ಮಂಡನೆಗೆ ಕೈಯಿಂದ ನೇಯ್ದ ಜವಳಿ ಮತ್ತು ಕರಕುಶಲವಿರುವ ಸೀರೆ ಧರಿಸಿ ಮಿಂಚಿದ್ದಾರೆ. ಹೀಗೆ 6 ಬಾರಿಯೂ ಕೂಡ ಒಂದೊಂದು ರೀತಿಯ ಸೀರೆಯುಟ್ಟು ಗಮನ ಸೆಳೆದಿದ್ದಾರೆ.

Union budget sarees: Know the specialty of Nirmala Sitharamans these 6 sarees , know details

6 ಬಾರಿ ಧರಿಸಿದ ಸೀರೆಗಳಿವು

1. 2019ರಲ್ಲಿ ಗುಲಾಬಿ, ಚಿನ್ನದ ಬಾರ್ಡರ್‌ವುಳ್ಳ‌ ಮಂಗಳಗಿರಿ ಸೀರೆ ಧರಿಸಿ ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದರು.

2. 2020ರಲ್ಲಿ ಹಳದಿ ಚಿನ್ನದ ರೇಷ್ಮೆ ಸೀರೆಯುಟ್ಟು ಬಜೆಟ್‌ ಮಂಡಿಸಿದ್ದರು.

3. 2021ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಸೀರೆಯುಟ್ಟು ಬಜೆಟ್‌ ಅನುಮೋದಿಸಿದ್ದರು.

4. 2022ರಲ್ಲಿ ಕಂದು ಬಣ್ಣದ ಸೀರೆಯುಟ್ಟು ಕೇಂದ್ರ ಬಜೆಟ್‌ ಮಂಡನೆ.

5. 2023ರಲ್ಲಿ ಕೆಂಪು ಬಣ್ಣದ ಬಾರ್ಡರ್‌ ಸೀರೆಯುಟ್ಟು ಕೇಂದ್ರ ಬಜೆಟ್‌ ಮಂಡನೆ.

6. 2024ರಲ್ಲಿ ತುಸಾರ್‌ ಸಿಲ್ಕ್‌ ಸೀರೆ ಧರಿಸಿ ಮಧ್ಯಂತರ ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದರು.

ನಿರ್ಮಾಲಾ ಸೀತಾರಾಮನ್‌ ಅವರು ನೀಲಿಬಣ್ಣದ ಸೀರೆಯುಟ್ಟು 2024-25ರ ಮಧ್ಯಂತರ ಕೇಂದ್ರ ಬಜೆಟ್‌ ಮಂಡನೆ ಮಾಡಿದ್ದರು. ಈ ನೀಲಿ ಬಣ್ಣದ ತುಸಾರ್‌ ಸಿಲ್ಕ್‌ ಸೀರೆ ತುಂಬಾ ವೈಶಿಷ್ಟ್ಯತಯನ್ನು ಹೊಂದಿದೆ.‌ ಈ ಸೀರೆ ಮಧ್ಯದಲ್ಲಿ ಕೆನೆ ಬಣ್ಣದ ಚಿತ್ರವಿದೆ. ಬಳ್ಳಿ ಹಾಗೂ ಎಲೆಗಳಿಂದ ಕೂಡಿರುವ ಚಿತ್ರ ಸೀರೆಯಲ್ಲಿ ಕಂಡುಬಂದಿದೆ. ಇನ್ನಯ ಈ ತುಸಾರ್‌ ರೇಷ್ಮೆಯು ಅದರ ವಿಶಿಷ್ಟ ವಿನ್ಯಾಸ ಮತ್ತು ಚಿನ್ನದ ಹೊಳಪಿಗೆ ಹೆಸರುವಾಸಿ ಆಗಿದೆ.

2019ರಲ್ಲಿ ಗುಲಾಬಿ, ಚಿನ್ನದ ಬಾರ್ಡರ್‌ ಮಂಗಳಗಿರಿ ಸೀರೆಯುಟ್ಟು ಕೇಂದ್ರ ಬಜೆಟ್‌ ಮಂಡನೆ ಮಾಡಿ ಗಮನ ಸೆಳೆದಿದ್ದರು. ಇನ್ನು 2020ರಲ್ಲಿ ಎರಡನೇ ಬಜೆಟ್‌ ಮಂಡನೆ ಮಾಡುವ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಳದಿ-ಚಿನ್ನದ ರೇಷ್ಮೆ ಸೀರೆ ಧರಿಸಿ ಗಮನ ಸೆಳೆದಿದ್ದರು. ಹಳದಿ ಬಣ್ಣವು ಸಮೃದ್ಧಿಯನ್ನು ಸಂಕೇತಿಸುತ್ತದೆ. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಭರವಸೆಯನ್ನು ಪ್ರತಿಬಿಂಬಿಸುತ್ತದೆ.

2021ರಲ್ಲಿ ನಿರ್ಮಲಾ ಸೀತಾರಾಮನ್‌ ಅವರು 3ನೇ ಬಜೆಟ್‌ ಮಂಡನೆ ಮಾಡುವ ವೇಳೆ ಹೈದರಾಬಾದ್‌ನ ಪೋಚಂಪಲ್ಲಿ ಗ್ರಾಮದಲ್ಲಿ ತಯಾರಿಸುವ ಕೆಂಪು ಹಾಗೂ ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯನ್ನು ಧರಿಸಿ ಗಮನ ಸೆಳೆದಿದ್ದರು. ಅಲ್ಲದೆ ಈ ವೇಳೆ ಸೀರೆಗೊಪ್ಪುವ ಚಿನ್ನದ ಸರ, ಬಳೆಗಳು ಮತ್ತು ಕಿವಿಯೋಲೆಯನ್ನು ಧರಿಸಿ ಮಿಂಚಿದ್ದರು.

2022ರಲ್ಲಿ ಬಜೆಟ್‌ ಮಂಡನೆ ಸಂದರ್ಭದಲ್ಲಿ ಸೀತಾರಾಮನ್ ಒಡಿಶಾದ ಗಂಜಾಂ ಜಿಲ್ಲೆಯ ಬೊಮ್ಕೈ ಗ್ರಾಮದಲ್ಲಿ ತಯಾರಿಸ್ಪಡುವ ಬೊಮ್ಕೈ ಸೀರೆಯನ್ನು ಧರಿಸಿದ್ದರು. ಈ ಬಿಳಿ-ಬಿಳಿ ಬಾರ್ಡರ್‌ ಇರುವ ಕಂದು ಬಣ್ಣದ ಸೀರೆಯನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

2023ರಲ್ಲಿ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಕೆಂಪು ಬಣ್ಣದ ಬಾರ್ಡರ್‌ ಸೀರೆಯುಟ್ಟು ಬಜೆಟ್‌ ಮಂಡನೆ ಮಾಡಿದ್ದರು. ಈ ಟೆಂಪಲ್‌ ಸೀರೆಗಳನ್ನು ಹತ್ತಿ, ರೇಷ್ಮೆ ಅಥವಾ ಮಿಶ್ರಣದಿಂದ ತಯಾರಿ ಮಾಡಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಇಂತಹ ಸೀರೆಗಳನ್ನು ಧರಿಸಲಾಗುತ್ತದೆ. ಸೀತಾರಾಮನ್ ಅವರು ಬಜೆಟ್ ದಿನದಂದು ಕಪ್ಪು ಅಂಚು, ಗೋಲ್ಡ್‌ ಬಣ್ಣದ ಬಾರ್ಡರ್‌ ಇರುವ ಟೆಂಪಲ್‌ ಸೀರೆ ಧರಿಸಿದ್ದರು. ಈ ಸುಂದರವಾದ ಸೀರೆಯು ನಕ್ಷತ್ರದಂತಹ ವಿನ್ಯಾಸವನ್ನು ಕೂಡ ಒಳಗೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+