Union Budget 2023: ಕೃಷಿ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರ ಘೋಷಣೆಗಳೇನು? ತಿಳಿಯಿರಿ
2023 ಮತ್ತು 2024 ನೇ ಆರ್ಥಿಕ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಕೃಷಿ ಕ್ಷೇತ್ರಕ್ಕೆ ಒಂದಷ್ಟು ಘೋಷಣೆಗಳನ್ನು ಮಾಡಿದ್ದಾರೆ.
ಬೆಂಗಳೂರು, ಫೆಬ್ರುವರಿ 01: 2023 ಮತ್ತು 2024 ನೇ ಆರ್ಥಿಕ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಕೃಷಿ ಕ್ಷೇತ್ರಕ್ಕೆ ಒಂದಷ್ಟು ಘೋಷಣೆಗಳನ್ನು ಮಾಡಿದ್ದಾರೆ.
ಯುವ ಉದ್ಯಮಿಗಳಿಂದ ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಕೃಷಿ ವೇಗ ನೀಡುವ ಉದ್ದೇಶದ ನಿಧಿ ಆರಂಭಿಸಲಾಗುವುದು. ಕೃಷಿಯಲ್ಲಿ ಹೆಚ್ಚು ಮಂದಿ ಅವಲಂಬಿಸಿರುವ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಗಮನದಲ್ಲಿಟ್ಟುಕೊಂಡು ಕೃಷಿ ಸಾಲದ ಗುರಿಯನ್ನು ರೂ.20 ಟ್ರಿಲಿಯನ್‌ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಹಿಂದಿನ ವರ್ಷ ಸರ್ಕಾರವು 2022-23 ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿ ರೂ.16.50 ಟ್ರಿಲಿಯನ್‌ನಿಂದ ರೂ.18 ಟ್ರಿಲಿಯನ್‌ಗೆ ಏರಿಕೆ ಮಾಡಿದ್ದೇವೆ. ಕೇಂದ್ರ ಸರ್ಕಾರ 10 ಮಿಲಿಯನ್ ರೈತರನ್ನು ನೈಸರ್ಗಿಕ ಕೃಷಿ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಅವರು ವಿವರಿಸಿದರು.

ಕೃಷಿ ಮೂಲಭೂತ ಸೌಕರ್ಯಕ್ಕಾಗಿ ಡಿಜಿಟಲ್ ವ್ಯವಸ್ಥೆ ಪ್ರಬಲಗೊಳಿಸುವುದು. ಅಂತರ್ಗತ ರೈತ-ಕೇಂದ್ರಿತ ಪರಿಹಾರಗಳನ್ನು ಸಕ್ರಿಯಗೊಳಿಸುವ ಜೊತೆಗೆ ಕೃಷಿ ಒಳಹರಿವು, ಮಾರುಕಟ್ಟೆ ಇಂಟೆಲ್ ಹಾಗೂ ಕೃಷಿ ಉದ್ಯಮ, ಸ್ಟಾರ್ಟ್‌ಅಪ್ ಬೆಂಬಲಿಸಲಾಗುವುದು.
ಇನ್ನೂ ಪರ್ಯಾಯ ರಸಗೊಬ್ಬರ ಬಳಕೆ ಹೆಚ್ಚಳ ಸಂಬಂಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು ಸರ್ಕಾರ PM PRANAM ಯೋಜನೆ ಆರಂಭಿಸಲಿದೆ ಎಂದರು.
ಕೃಷಿಗೆ ಪೂರಕವಾದ ಬಜೆಟ್
ಕೃಷಿ ವಲಯಕ್ಕೆ ಅತ್ಯಗತ್ಯಾವಾಗಿ ಬೇಕಾದ ಸೌಲಭ್ಯಗಳನ್ನು ಪೂರೈಸುವತ್ತ ಕೇಂದ್ರ ಬಜೆಟ್ ಹೆಚ್ಚು ಒತ್ತು ನೀಡಿದೆ. ಕೃಷಿಗೆ ಹೆಚ್ಚು ಸಾಲ ಲಭಿಸುವಂತೆ ಮಾಡುವುದು, ಅನುಕೂಲಕ್ಕೆ ತಕ್ಕ ಹಾಗೇ ಡಿಜಿಟಲ್ ಮೂಲಸೌಕರ್ಯ ವ್ಯವಸ್ಥೆ ಮಾಡುವ ಜೊತೆಗೆ ಸೂಕ್ತ ಬಂಡವಾಳ ಹೂಡಿಕೆಗೆ ಅನುಮಾಡಿಕೊಡಲು ಸರ್ಕಾರ ಮುಂದಾಗಿದೆ. ಈ ಎಲ್ಲ ಅಂಶಗಳು ಕೃಷಿ ವಲಯದ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಡೆಲಾಯ್ಟ್ ಇಂಡಿಯಾ ಸಂಸ್ಥೆ ಪಾಲುದಾರರಾದ ಆನಂದ್ ರಾಮನಾಥನ್ ಪ್ರತಿಕ್ರಿಯಿಸಿದ್ದಾರೆ.

ಕೃಷಿ ಉತ್ಪನ್ನಗಳ ರಫ್ತುಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. ಮೀನುಗಾರಿಕೆ ವಿಭಾಗದಲ್ಲಿ ಅಧಿಕ ಹೂಡಿಕೆ ಮತ್ತು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದು, ಬೆಳೆ ವೈವಿಧ್ಯತೆ ಅನುಸರಿಸುವುದು, ಸುಸ್ಥಿರತೆ ಕಾಪಾಡುವುದು ಹಾಗೂ ಪೌಷ್ಟಿಕಾಂಶದತ್ತ ದೃಷ್ಠಿ ಹರಿಸುವುದು ಬಜೆಟ್‌ನ ಪ್ರಮುಖ ಅಂಶಗಳಾಗಿವೆ.
ಅದೇ ರೀತಿ ಸಹಕಾರಿ ಸಂಘಗಳು ಮತ್ತು ಉತ್ಪಾದಕ ಸಮೂಹಗಳ ಉತ್ತಮ ನಿರ್ವಹಣೆಯಿಂದ ರೈತರಿಗೆ ಸಹಾಯವಾಗಲಿದೆ. ಆಗ್ರಿ-ಟೆಕ್ ಉದ್ಯಮಗಳಲ್ಲಿ ಸ್ಟಾರ್ಟ್-ಅಪ್‌ಗಳನ್ನು ಉತ್ತೇಜಿಸಲು ಸರ್ಕಾರ ತೀರ್ಮಾನಿಸಿದೆ. ಬೆಳೆ ಇಳುವರಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಿ ಸಮರ್ಪಕ ಮಾರುಕಟ್ಟೆಯ ಬೇಡಿಕೆ ಈಡೇರಿಸುವ ಅಂಶಗಳು ಬಜೆಟ್‌ನಲ್ಲಿ ಅಡಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications