Budget 2024: ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ನೇರ ಪ್ರಸಾರ ಎಲ್ಲಿ ವೀಕ್ಷಿಸಬೇಕು? ಮಾಹಿತಿ ಇಲ್ಲಿದೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಅಧಿಕಾರಾವಧಿಯ ಆರನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. 2024-2025ರ ಹಣಕಾಸು ವರ್ಷದ ಬಜೆಟ್‌ನ ನೇರ ಪ್ರಸಾರವನ್ನು ಎಲ್ಲಿ ಮತ್ತು ಹೇಗೆ ನೋಡುವುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತವಾಗಿ ಆರನೇ ಬಜೆಟ್ ಮಂಡಿಸುವ ಮೂಲಕ ದಾಖಲೆಯನ್ನು ಮಾಡಿದ್ದಾರೆ. ಐದು ಪೂರ್ಣ ಪ್ರಮಾಣದ ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿರುವ ದಾಖಲೆ ಇರುವುದು ಇದುವರೆಗೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿ ಮಾತ್ರ. ಈಗ ಅದನ್ನು ನಿರ್ಮಲಾ ಸೀತಾರಾಮನ್ ಮುರಿಯಲಿದ್ದಾರೆ.

ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡನೆ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಸತತ ಐದು ಬಜೆಟ್‌ಗಳನ್ನು ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ. ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ಹಿಂದಿನ ದಾಖಲೆಗಳನ್ನು ಪುಡಿ ಪುಡಿ ಮಾಡಲಿದ್ದಾರೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿ 1959-1964 ರ ನಡುವೆ ಐದು ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದರು.
ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2024-25 ರ ಮಧ್ಯಂತರ ಬಜೆಟ್ ವೋಟ್-ಆನ್-ಅಕೌಂಟ್ ಆಗಿದ್ದು, ಏಪ್ರಿಲ್ ಮತ್ತು ಮೇ ಚುನಾವಣೆ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಕೆಲವು ಮೊತ್ತವನ್ನು ಖರ್ಚು ಮಾಡಲು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ.
ಬಜೆಟ್ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?
ಲೋಕಸಭೆಯಲ್ಲಿ ಫೆಬ್ರವರಿ 1, ಗುರುವಾರ 2024-25ರ ಆರ್ಥಿಕ ವರ್ಷದ ಬಜೆಟ್ ಹಂಚಿಕೆಗಳು ಮತ್ತು ಆದಾಯ ನಿರೀಕ್ಷೆಗಳನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ. ಕೆಳಮನೆಯಲ್ಲಿ ಭಾಷಣ ಮುಗಿದ ನಂತರ ರಾಜ್ಯಸಭೆಯಲ್ಲಿ ಬಜೆಟ್ ಮಂಡಿಸಲಾಗುತ್ತದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಲು, ವೀಕ್ಷಕರು ಸಂಸದ್ ನಡಾವಳಿಗಳಿಗೆ ಮೀಸಲಾಗಿರುವ ದೂರದರ್ಶನ ಚಾನೆಲ್ Sansad TV ಯನ್ನು ನೋಡಬಹುದು. ಭಾರತದ ಅಧಿಕೃತ ಸಾರ್ವಜನಿಕ ಪ್ರಸಾರಕ ದೂರದರ್ಶನದ ಸುದ್ದಿ ವಾಹಿನಿ ಡಿಡಿ ನ್ಯೂಸ್ ಕೂಡ ಭಾಷಣವನ್ನು ನೇರ ಪ್ರಸಾರ ಮಾಡುತ್ತದೆ. ಸರ್ಕಾರವು ತನ್ನ ವೀಡಿಯೊ ಪೋರ್ಟಲ್ ವೆಬ್‌ಕಾಸ್ಟ್‌ನಲ್ಲಿ ನೇರ ಪ್ರಸಾರವನ್ನು ಸಹ ನಡೆಸಲಿದೆ. Sansad TV ತನ್ನ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಸಹ ಮಾಡಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಾರ್ಗಸೂಚಿಯನ್ನು ಓದಲು ಶುರು ಮಾಡುತ್ತಿದ್ದಂತೆ oneindia kannada ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಮತ್ತು ವೆಬ್‌ಸೈಟ್‌ನಲ್ಲಿ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಬಹುದು.
ಬಜೆಟ್ ದಾಖಲೆಗಳು
ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ಬಜೆಟ್ 2024 ಡಾಕ್ಯುಮೆಂಟ್‌ಗಳನ್ನು ಸಾಮಾನ್ಯ ಜನರು ಪಡೆಯಬಹುದು. ವಾರ್ಷಿಕ ಹಣಕಾಸು ಹೇಳಿಕೆ, ಅನುದಾನದ ಬೇಡಿಕೆ ಮತ್ತು ಸಂವಿಧಾನದಿಂದ ಕಡ್ಡಾಯಗೊಳಿಸಿದ ಹಣಕಾಸು ಮಸೂದೆ ಸೇರಿದಂತೆ ಎಲ್ಲಾ ಅಗತ್ಯ ಬಜೆಟ್ ದಾಖಲೆಗಳನ್ನು ಬಜೆಟ್ ಭಾಷಣದ ನಂತರ ಪಡೆಯಬಹುದು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿರುವ ದ್ವಿಭಾಷಾ ಅಪ್ಲಿಕೇಶನ್ ಅನ್ನು Android, iOS ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್‌ನಿಂದ ಡೌನ್‌ಲೋಡ್ ಮಾಡಬಹುದು.












Click it and Unblock the Notifications