Union Budget 2023; ಬಜೆಟ್‌ನಲ್ಲಿ ಉಲ್ಲೇಖಿಸಿದ ಅಮೃತ ಕಾಲ ಏನು?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಅಮೃತ ಕಾಲ ಎಂಬ ಪದವನ್ನು ಉಲ್ಲೇಖಿಸಿದರು. ಈ ಬಗ್ಗೆ ಚರ್ಚೆಗಳು ಆರಂಭವಾಗಿದೆ.
ನವದೆಹಲಿ, ಫೆಬ್ರವರಿ 01; ಲೋಕಸಭೆಯಲ್ಲಿ ಬುಧವಾರ ಬಜೆಟ್ ಭಾಷಣ ಆರಂಭಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಮೃತ ಕಾಲದ ಮೊದಲ ಬಜೆಟ್ ಎಂದು ಹೇಳಿದರು. ಬಜೆಟ್‌ನಲ್ಲಿ ಬಗ್ಗೆ ಆಸಕ್ತಿ ಇರುವ ಜನರು ಇದು ಏನು ಎಂದು ಹುಡುಕಾಟ ನಡೆಸಿದ್ದಾರೆ.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ ಅಮೃತ ಕಾಲ ಎಂಬ ಪದದ ಬಗ್ಗೆ ಗೂಗಲ್‌ನಲ್ಲಿ ಜನರು ಮಾಹಿತಿ ಹುಡುಕುತ್ತಿದ್ದಾರೆ. "ಈ ಬಜೆಟ್ ಅಮೃತ ಕಾಲದ ಮೊದಲ ಬಜೆಟ್" ಎಂದು ಸಚಿವರು ಹೇಳಿದ್ದಾರೆ.
ಬಜೆಟ್ ಭಾಷಣ ಆರಂಭಿಸಿದ ಸಚಿವರು, "ಇದು ಅಮೃತ ಕಾಲದ ಮೊದಲ ಬಜೆಟ್. ವಿಶ್ವವು ಭಾರತೀಯ ಆರ್ಥಿಕತೆಯನ್ನು ಪ್ರಕಾಶಮಾನವಾದ ನಕ್ಷತ್ರವೆಂದು ಗುರುತಿಸಿದೆ" ಎಂದರು.

"ಭಾರತವು ಸ್ವಾತಂತ್ಸ್ಯೋವದ ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿದ್ದು, ಮುಂದಿನ 25 ವರ್ಷಗಳ ಅಭಿವೃದ್ಧಿಯ ಅಮೃತ ಕಾಲವೆಂದು ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ" ಎಂದು ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ್ದಾರೆ.
"ಅಮೃತ ಕಾಲದ ಪರಿಕಲ್ಪನೆಯು ಮೂಲ ಸೌಕರ್ಯ, ಉತ್ಪಾದನೆ, ಡಿಜಿಟಲ್ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಒಳಗೊಂಡಿದೆ. ಅದು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಿಸಲಿದೆ" ಎಂದು ತಿಳಿಸಿದರು.
ಬಜೆಟ್ ಭಾಷಣದಲ್ಲಿ ಸಚಿವರು, "ಆರ್ಥಿಕತೆಯನ್ನು ಜಾಗತಿಕವಾಗಿ ಮೂರನೇ ಸ್ಥಾನಕ್ಕೇರಿಸಲಿದೆ. ಅಂತಹ ಬೆಳವಣಿಗೆಯನ್ನು ಸಾಧಿಸಲು ನಾವೀನ್ಯತೆ ಮತ್ತು ಸುಧಾರಣೆ ಎಂಬುದು ಪ್ರಮುಖ ಸಾಧನವಾಗಲಿದೆ" ಎಂದೂ ಹೇಳಿದ್ದಾರೆ.
"ಅಮೃತ ಕಾಲಕ್ಕೆ ನೀಲನಕ್ಷೆಯನ್ನು ನೀಡುತ್ತದೆ" ಎಂದು ಹೇಳಿರುವ ನಿರ್ಮಲಾ ಸೀತಾರಾಮನ್ ಸರ್ಕಾರಕ್ಕೆ ಮಾರ್ಗದರ್ಶನ ನೀಡಬಲ್ಲ ಏಳು ಪ್ರಮುಖ ಕ್ಷೇತ್ರಗಳನ್ನು ಬಜೆಟ್‌ನಲ್ಲಿ ಉಲ್ಲೇಖಿಸಿದರು.
ಬಜೆಟ್‌ನಲ್ಲಿ ವಿವರಿಸಿದ 7 ಪ್ರಮುಖ ಕ್ಷೇತ್ರಗಳು; ಸಮಗ್ರ ಅಭಿವೃದ್ಧಿ, ಅಂತಿಮ ಗುರಿ ತಲುಪುವುದು, ಮೂಲ ಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯ ಅನ್ವೇಷಣೆ, ಹಸಿರು ಅಭಿವೃದ್ಧಿ, ಯುವ ಶಕ್ತಿ, ಹಣಕಾಸು ವಲಯ












Click it and Unblock the Notifications