Budget 2024: ಸುಂಕ ಇಳಿಕೆಯ ಸಿಹಿ ಸುದ್ದಿ: ಈ ವರ್ಷ ಅಗ್ಗವಾಗಲಿವೆ 'ಮೊಬೈಲ್' ಫೋನುಗಳು
ನವದೆಹಲಿ, ಫೆಬ್ರವರಿ 01: ಕೇಂದ್ರ ಸರ್ಕಾರ ಬಜೆಟ್ ಮಂಡನೆಯ ಮುನ್ನ ದಿನವೇ ಭಾರತೀಯರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ದೇಶದಲ್ಲಿ ಮೊಬೈಲ್ ಉತ್ಪಾದನೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಆಮದು ಸುಂಕವನ್ನು ಕಡಿಮೆ ಮಾಡಿದೆ. ಇದರಿಂದಮೊಬೈಲ್‌ಗಳು ಈ ವರ್ಷ ಅಗ್ಗವಾಗಲಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೊಬೈಲ್ ಉತ್ಪಾದನೆಯನ್ನು ಅಗ್ಗವಾಗಿಸುವ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಕೆಲವು ಮೊಬೈಲ್ ಘಟಕಗಳ ಮೇಲಿನ ಆಮದು ಸುಂಕವನ್ನು ಶೇಕಡಾ 15ರಿಂದ ಶೇಕಡಾ 10 ಇಳಿಕೆ ಮಾಡುವುದಾಗಿ ಬುಧವಾರ ಘೋಷಣೆ ಮಾಡಿದೆ.

ಗೆಜೆಟ್ ಅಧಿಸೂಚನೆಯ ಪ್ರಕಾರ, ಮೊಬೈಲ್ ಬ್ಯಾಟರಿ ಕವರ್, ಮುಖ್ಯ ಕವರ್, ಜಿಎಸ್‌ಎಂ ಆಂಟೆನಾ ಮತ್ತು ಇತರ ಘಟಕಗಳಂತಹ ಘಟಕಗಳ ಮೇಲಿನ ಆಮದು ಸುಂಕವನ್ನು ಸರ್ಕಾರವು ಶೇಕಡಾ 10ಕ್ಕೆ ಇಳಿಕೆ ಮಾಡಿದೆ. ಈ ಕ್ರಮವು ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ವೇಗ ನೀಡುವ ಜೊತೆಗೆ ದೇಶದಿಂದ ಸ್ಮಾರ್ಟ್‌ಫೋನ್ ರಫ್ತು ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಬಹುದು ಎಂದು ಊಹಿಸಲಾಗಿದೆ.
ಮೊಬೈಲ್ ಉತ್ಪಾದನೆ ಬಲಪಡಿಸಲು ಈ ಕ್ರಮ
ಮೊಬೈಲ್ ಫೋನ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಸ್ಟಮ್ ಸುಂಕಗಳನ್ನು ತರ್ಕಬದ್ಧಗೊಳಿಸಿ ಮೊಬೈಲ್ ತಯಾರಿಕಾ ವಲಯಕ್ಕೆ ಅಗತ್ಯ ಖಚಿತತೆ ಮತ್ತು ಸ್ಪಷ್ಟತೆ ಒದಗಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಈ ಸಂಬಂಧ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ಹೇಳುವುದಾಗಿ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

2018 ರಲ್ಲಿ ಈ ಸುಂಕ ಎಷ್ಟಿತ್ತು?
2018 ರಲ್ಲಿ ಕೇಂದ್ರ ಸರ್ಕಾರ ಹಂತ ಹಂತದ ಉತ್ಪಾದನಾ ಕಾರ್ಯಕ್ರಮದ (PMP) ಅಡಿ ಸ್ಮಾರ್ಟ್‌ಫೋನ್‌ಗಳ ಇದೇ ವಸ್ತುಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 5ರಿಂದ 15ರಷ್ಟಕ್ಕೆ ಏರಿಕೆ ಮಾಡಿತ್ತು. ಇದೀಗ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ವೆಚ್ಚವನ್ನು ಕಡಿಮೆ ಮಾಡಲು ಸುಂಕ ಕಡಿತ ಮಾಡಲಾಗುತ್ತಿದೆ. ಇತ್ತೀಚೆಗೆ ಇಂಡಿಯನ್ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಸಹ ಸುಂಕ ಕಡಿತಕ್ಕೆ ಶಿಫಾರಸು ಮಾಡಿತ್ತು ಎಂದು ತಿಳಿದು ಬಂದಿದೆ.
ಭಾರತದಲ್ಲಿ ರಫ್ತು 3 ಪಟ್ಟು ಏರಿಕೆ?
ದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಮೊಬೈಲ್ ಫೋನ್ ರಫ್ತು $39 ಶತಕೋಟಿಗೆ ಅಂದರೆ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಸರ್ಕಾರದ ಇಂತಹ ದಿಟ್ಟ ಹೆಜ್ಜೆಗಳು ಭಾರತದಲ್ಲಿ ಮೊಬೈಲ್ ಉತ್ಪಾದನೆಯನ್ನು ಸ್ಪರ್ಧಾತ್ಮಕಗೊಳಿಸುತ್ತದೆ ಎಂದು ICEA ಅಧ್ಯಕ್ಷ ಪಂಕಜ್ ಮೊಹಿಂದ್ರೂ ಹೇಳಿದರು.
ಭಾರತವು ಇಲೆಕ್ಟ್ರಾನಿಕ್ಸ್ ವಸ್ತುಗಳ ರಫ್ತಿನಲ್ಲಿ ಕೆಲವು ವರ್ಷಗಳ ಹಿಂದೆ 9 ನೇ ಸ್ಥಾನದಲ್ಲಿತ್ತು. ಅದು 2024 ರಲ್ಲಿ 5ನೇ ಸ್ಥಾನಕ್ಕೆ ಬರಲಿದೆ. ಮೊಬೈಲ್‌ಗಳು ಎಲೆಕ್ಟ್ರಾನಿಕ್ಸ್ ರಫ್ತುಗಳಲ್ಲಿ ಶೇಕಡಾ 52 ರಷ್ಟು ಪ್ರಗತಿ ಕಂಡಿದ್ದೇವೆ. ಕಳೆದ 8 ವರ್ಷಗಳಲ್ಲಿ ಆಮದು ಪರ್ಯಾಯದಿಂದ ರಫ್ತು ವಿಚಾರದಲ್ಲಿ ಬೆಳವಣಿ ಸಾಧಿಸಲಾಗಿದೆ.
ಸದ್ಯ ಬಜೆಟ್ ಮಂಡನೆ ದಿನಗಳು ಹತ್ತಿರ ಬರುತ್ತಿದ್ದಂತೆ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (GTRI) ಮುಂಬರುವ ಬಜೆಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಘಟಕಗಳ ಮೇಲಿನ ಆಮದು ಸುಂಕ ಕಡಿತಗೊಳಿಸದಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.












Click it and Unblock the Notifications