Budget 2024: ಭಾರತೀಯ ರೈಲ್ವೆಯಲ್ಲಿ ಹಸಿರು ಕ್ರಾಂತಿ: ವಿದ್ಯುದೀಕರಣದಲ್ಲಿ ಮಹತ್ವದ ಹೆಜ್ಜೆ
ಬೆಂಗಳೂರು, ಜನವರಿ 23: ದೇಶದ ರೈಲ್ವೆ ಜಾಲವನ್ನು 2030 ರ ಹೊತ್ತಿಗೆ ಒಟ್ಟಾರೆಯಾಗಿ ಶೂನ್ಯ ಕಾರ್ಬನ್ ಹೊರಸೂಸುವ ಅಂದರೆ ವಿದ್ಯುದೀಕರಣಗೊಳಿಸುವ ಗುರಿ ಹೊಂದಿರುವ ಭಾರತೀಯ ರೈಲ್ವೇಯು ಇಂಗಾಲದ ಹೊರಸೂಸುವಿಕೆ ಕಡಿಮೆಗೆ ಅನೇಕ ಯೋಜನೆ ಕೈಗೊಂಡಿದೆ. ಅದರ ಬಳಕೆಗಾಗಿ ಶಕ್ತಿ ದಕ್ಷ ತಂತ್ರಜ್ಞಾನಗಳನ್ನು ಅಳವಡಿಕೆಗೆ ಯೋಜಿಸಿದೆ.
ಭಾರತೀಯ ರೈಲು ಜಾಲವು ಸಂಪೂರ್ಣವಾಗಿ ಹೊಸ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾದ ಮೂರು-ಹಂತದ ಎಲೆಕ್ಟ್ರಿಕ್ ಇಂಜಿನ್‌ಗಳ ತಯಾರಿಕೆಗೆ ಪರಿವರ್ತನೆಗೊಳ್ಳುತ್ತಿದೆ. ಭವಿಷ್ಯದಲ್ಲಿ ಈ ರೈಲುಗಳು ಸಂಚಾರ ಸೇವೆ ನೀಡಲಿವೆ. ಮುಖ್ಯವಾಗಿ ಹೆಡ್-ಆನ್ ಜನರೇಷನ್ (HOG) ತಂತ್ರಜ್ಞಾನವನ್ನು ಅಳವಡಿಕೆ, ಕಟ್ಟಡಗಳು ಮತ್ತು ಕೋಚ್‌ಗಳಲ್ಲಿ LED ದೀಪಗಳ ಅಳವಡಿಕೆ, ಸ್ಟಾರ್-ರೇಟೆಡ್ ಉಪಕರಣಗಳು, ಜಲ ಸಂರಕ್ಷಣೆ ಮತ್ತು ನಿರ್ವಹಣಾ ಅಭ್ಯಾಸಗಳನ್ನು ಅನುಷ್ಠಾನಗೊಳಿಸುವುದು. ಅರಣ್ಯೀಕರಣದಲ್ಲಿ ಸಕ್ರಿಯವಾಗಿ ರೈಲ್ವೆಯು ತೊಡಗಿಸಿಕೊಂಡಿದೆ.

ರೈಲ್ವೆಯ ಯೋಜನೆಗಳಲ್ಲಿ ಪ್ರಮುಖವಾದುದೆಂದರೆ ವಿದ್ಯುದ್ದೀಕರಣ. ಈ ಯೋಜನೆಯಿಂದ ವಾರ್ಷಿಕ ಇಂಧನಕ್ಕೆ ಖರ್ಚಾಗುವ ಸಾಕಷ್ಟು ಹಣ ಉಳಿತಾಯವಾಲಿದೆ. ಈ ಬಾರಿ ಬಜೆಟ್‌ನಲ್ಲಿ ಇನ್ನಷ್ಟು ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
59,096 ಕಿಮೀ ಎಲೆಕ್ಟ್ರಿಫಿಕೇಷನ್
ಕೇಂದ್ರ ರೈಲ್ವೆ ಸಚಿವಾಲಯವು ಕಳೆದ ವರ್ಷ 2023ರ ಜೂನ್ 30ರ ಹೊತ್ತಿಗೆ ಭಾರತೀಯ ರೈಲ್ವೆಯ (IR) ಬ್ರಾಡ್ ಗೇಜ್ ನೆಟ್‌ವರ್ಕ್‌ನ 59,096 ರೂಟ್ ಕಿ.ಮೀ ಅನ್ನು (RKM) ವಿದ್ಯುದ್ದೀಕರಣಗೊಳಿಸಿದೆ ಎಂದು ಅಧಿಕೃತವಾಗಿ ತಿಳಿಸಿದೆ.
ಇದರಲ್ಲಿ ಒಟ್ಟು ಒಂಬತ್ತು ವರ್ಷಗಳಲ್ಲಿ 37,011 ಆರ್‌ಕೆಎಂ ವಿದ್ಯುದೀಕರಣ ಮಾಡಲಾಗಿದೆ. ಇತ್ತೀಚೆಗೆ ರೈಲ್ವೆ ಇಲಾಖೆ ಯಾವ ರಾಜ್ಯಗಳಲ್ಲಿ ಎಷ್ಟೇಷ್ಟು ಕಿಲೋ ಮೀಟರ್ ಟ್ರ್ಯಾಕ್ ವಿದ್ಯುದೀಕರಣಗೊಂಡಿದೆ ಎಂಬದ ಪಟ್ಟಿ ಬಿಡುಗಡೆ ಮಾಡಿತು. ಈ ಮೂಲಕ ಶೇಕಡಾ 93ರಷ್ಟು ವಿದ್ಯುದೀಕರಣ ಮಾಡಲಾಗಿದೆ ಎಂದು ತಿಳಿಸಿತ್ತು.
ರಾಜ್ಯವಾರು ವಿದ್ಯುದೀಕರಣದ ಮಾಹಿತಿ
ಇನ್ನೂ ಈಗಾಗಲೇ ಆಗಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂದರೆ 14 ರಾಜ್ಯಗಳು/ಯುಟಿಗಳು ಶೇಕಡಾ 100ರಷ್ಟು ವಿದ್ಯುದೀಕರಣ ಮಾಡಲಾಗಿದೆ ಎಂದು ತಿಳಿಸಿದೆ. ಹಾಗಾದರೆ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜೂನ್ 30ರವರೆಗೆ ವಿದ್ಯುದೀಕರಣಗೊಂಡಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ರಾಜ್ಯದಲ್ಲಿ 2,844 ರೂಟ್ಸ್ ಕಿಲೋ ಮೀಟರ್ (RKM), ಅದೇ ರೀತಿ ತೆಲಂಗಾಣ -1,858 ಆರ್‌ಕೆಎಂ, ಪುದುಚೆರಿ - 21, ಉತ್ತರ ಪ್ರದೇಶ - 8,482, ಉತ್ತರಾಖಂಡ - 347, ಬಿಹಾರ - 3,614, ಆಂಧ್ರಪ್ರದೇಶ - 3,841, ತಮಿಳುನಾಡು - 3,659, ಮಹಾರಾಷ್ಟ್ರ- 5,441 ಆರ್‌ಕೆಎಂ, ಚಂಡೀಗಢ - 16 ಆರ್‌ಕೆಎಂ, ಛತ್ತೀಸ್‌ಗಢ -1,199 ಆರ್‌ಕೆಎಂ.

ರಾಷ್ಟ್ರ ರಾಜಧಾನಿ ನವದೆಹಲಿ- 183 ಆರ್‌ಕೆಎಂ, ಹರಿಯಾಣ - 1,701, ಹಿಮಾಚಲ ಪ್ರದೇಶ - 67, ಜಮ್ಮು ಮತ್ತು ಕಾಶ್ಮೀರ - 298, ಜಾರ್ಖಂಡ್- 2,558 ಆರ್‌ಕೆಎಂ, ಮಧ್ಯಪ್ರದೇಶ -4,822, ಮೇಘಾಲಯ- 9, ಒಡಿಶಾ - 2,822, ಪಶ್ಚಿಮ ಬಂಗಾಳ - 3,682, ಕೇರಳ - 947, ಗುಜರಾತ್ -3,435, ಪಂಜಾಬ್- 1,915, ರಾಜಸ್ಥಾನ- 4 147, ಅಸ್ಸಾಂ -801 ಆರ್‌ಕೆಎಂ ವಿದ್ಯುದೀಕರಣ ಮಾಡಲಾಗಿದೆ. ಉಳಿದಂತೆ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾದಲ್ಲಿ ಒಂದೇ ಒಂದು ಕಿಮೀ ಟ್ರ್ಯಾಕ್ ಎಲೆಕ್ಟ್ರಿಫಿಕೇಷನ್ ಆಗಿಲ್ಲ ಎಂದು ರೈಲ್ವೆ ತಿಳಿಸಿದೆ.
2014 ಆದ ಟ್ರ್ಯಾಕ್ ವಿದ್ಯುದೀಕರಣವೇಷ್ಟು?
ಭಾರತೀಯ ರೈಲ್ವೆಯ ಈ ವಿದ್ಯುದೀಕರಣ ಉಪಕ್ರಮ ಸುಸ್ಥಿರ ಸಾರಿಗೆ ಪ್ರಮುಖ ವಿಧಾನವಾಗಿದೆ. ಇದು ಪರಿಸರಕ್ಕೂ ಪೂರಕವಾಗಿದೆ. ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬನೆ ತಪ್ಪಿಸುತ್ತದೆ. ಭಾರತದ ಸ್ವಾತಂತ್ರ್ಯದಿಂದ 2014 ರವರೆಗೆ, ಕೇವಲ 21,413 ರೂಟ್ ಕಿಲೋಮೀಟರ್ (RKMs) ರೈಲ್ವೆ ಹಳಿಗಳು ವಿದ್ಯುದ್ದೀಕರಿಸಲ್ಪಟ್ಟವು.
ನಂತರದ 2014-2023 ರ ಮಧ್ಯದಲ್ಲಿ ಭಾರತವು ವಿದ್ಯುದೀಕರಣದ ಪ್ರಯತ್ನಗಳಲ್ಲಿ ಗಮನಾರ್ಹವಾದ ವೇಗ ಪಡೆದುಕೊಂಡಿದೆ. ಸದ್ಯ 37,011 ರೂಟ್ ಕಿಲೋಮೀಟರ್ (RKM) ಟ್ರ್ಯಾಕ್‌ಗಳು ಎಲೆಕ್ಟ್ರಿಕ್ ಲೈನ್ ಆಗಿ ಬದಲಾಗಿವೆ.
2019-2023ರಲ್ಲಿ ಅತ್ಯಧಿಕ ವಿದ್ಯುದೀಕರಣ
ಒಟ್ಟು ವಿದ್ಯುದೀಕರಣದ ಪೈಕಿ 2019-2023ರ ನಡುವೆ ಸುಮಾರು ಶೇಕಡಾ 50ರಷ್ಟು ಸಂಭವಿಸಿದೆ. ಭಾರತೀಯ ರೈಲ್ವೆಯು 2030ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆ ಗುರಿ ಇಲಾಖೆ ಹೊಂದಿದೆ.
ಇನ್ನೂ ಪ್ರಸಕ್ತ ವರ್ಷ 2023-24ರ ವೇಳೆಗೆ ಭಾರತೀಯ ರೈಲ್ವೆ ತನ್ನ ಮಿಷನ್ ಶೇಕಡಾ 100 ವಿದ್ಯುದ್ದೀಕರಣದತ್ತ ಸಾಗುತ್ತಿದೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 2022-23 ರ ಆರ್ಥಿಕ ವರ್ಷದಲ್ಲಿ 6,565 ರೂಟ್ ಕಿಲೋಮೀಟರ್ (RKM) ವಿದ್ಯುದೀಕರಣ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್ 2023ರ ಹೊತ್ತಿಗೆ, ಸುಮಾರು 60,451 RKM ವಿದ್ಯುದೀಕರಣ ಮೂಲಕ ವಿದ್ಯುದೀಕರಣ ಶೇಕಡಾ 92ರಷ್ಟು ಸಾಧಿಸಿದಂತಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.












Click it and Unblock the Notifications