ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಗಾಂಧಿ ಕಾಲಿಟ್ಟ ನೆಲದಲ್ಲಿ ಅರಾಜಕತೆ

By Mahesh
|
Google Oneindia Kannada News

Gandhian heritage site in South Africa vandalised
ಜೋಹಾನ್ಸ್ ಬರ್ಗ್, ಆ.25: ಮಹಾತ್ಮ ಗಾಂಧಿ ಸ್ಥಾಪಿತ ಶತಮಾನದಷ್ಟು ಹಳೆಯದಾದ ಐತಿಹಾಸಕ ಟೊಲ್ ಸ್ಟಾಯ್ ಫಾರ್ಮ್ ಈಗ ಕಳ್ಳರ, ಪುಂಡರ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ವಸ್ತು ಸಂಗ್ರಹಾಲಯ ಹಾಗೂ ಕೌಶಲ್ಯ ತರಬೇತಿ ಕೇಂದ್ರವಾಗಬೇಕಾದ ತಾಣ ಈಗ ಸರಣಿ ಕಳ್ಳತನದಿಂದ ದುಃಸ್ಥಿತಿಯಲ್ಲಿದೆ.

ಟೊಲ್ ಸ್ಟಾಯ್ ತೋಟದ ಭೂಮಿಯನ್ನು ಗಾಂಧೀಜಿಗೆ ಅವರ ಆಪ್ತ ಸ್ನೇಹಿತ ಗೃಹವಿನ್ಯಾಸಕಾರ ಹರ್ಮನ್ ಕಲೆನ್ಬಾಕ್ ಅವರು ನೀಡಿದ್ದರು. ನಿರಾಶ್ರಿತರಿಗೆ ಆಶ್ರಯ ತಾಣವಾಗಿರುವ ಈ ಪ್ರದೇಶ, ಆಫ್ರಿಕಾದಲ್ಲಿ ವರ್ಣಬೇಧನೀತಿ ಸಂತ್ರಸ್ತರಿಗೆ ವಸತಿ ಕೆಂದ್ರವಾಗಿತ್ತು.

ಗಾಂಧಿ ಶತಮಾನೋತ್ಸವ ಸಮಿತಿಯ ಮುಖ್ಯಸ್ಥೆಯಾಗಿರುವ ಗಾಂಧೀಜಿ ಮರಿಮೊಮ್ಮಗಳಾದ ಕೀರ್ತಿ ಮೆನನ್ , ಸ್ಥಳೀಯ ನಗರ ಪಾಲಿಕೆಯೊಡನೆ ಮಾತುಕತೆ ನಡೆಸಿ ಟೊಲ್ ಸ್ಟಾಯ್ ಫಾರ್ಮ್ ಅನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ್ದರು.

ಮ್ಯೂಸಿಯಂ, ಸ್ಥಳೀಯ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಕೇಂದ್ರ ಸ್ಥಾಪನೆಗೆ ಅಗತ್ಯವಾದ ನಿಧಿ ಕೂಡಾ ಸಂಗ್ರಹವಾಗಿತ್ತು.ಗಾಂಧೀಜಿಯನ್ನು ಬಂಧಿಸಿಡಲಾಗಿದ್ದ ಓಲ್ಡ್ ಫೋರ್ಟ್ ಸೆರೆಮನೆಯಲ್ಲೂ ಸ್ಮಾರಕ ನಿರ್ಮಾಣಕ್ಕೆ ಸಾಕಷ್ಟು ಹಣ ಸಂಗ್ರಹವಾಗಿತ್ತು.

ಆದರೆ, 70 ರ ದಶಕದಲ್ಲಿ ಗಾಂಧೀಜಿಯ ಕಟ್ಟಾ ಅನುಯಾಯಿಯಾಗಿದ್ದ ಹೀರಾ ದಂಪತಿಗಳು ಅಸುರಕ್ಷತಾ ಕಾರಣಗಳಿಂದ ಟೊಲ್ ಸ್ಟಾಯ್ ಫಾರ್ಮ್ ತೊರೆದ ಮೇಲೆ , ಇಡೀ ಪ್ರದೇಶ ಪಾಳು ಬೀಳತೊಡಗಿತು. ಗುಜರಾತಿನ ಮಹೇಶ್ ಭಾಯ್ ಕೊಥಾರಿ ಈ ತೋಟದ ಮಾಲೀಕತ್ವ ವಹಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆದರೂ, ಪ್ರಯೋಜನವಾಗಲಿಲ್ಲ.

ಒಟ್ಟಿನಲ್ಲಿ, ಜೋಹಾನ್ಸ್ ಬರ್ಗ್ ನ ಗಾಂಧಿ ಸ್ಮಾರಕ ಸಮಿತಿ, ಶತಮಾನೋತ್ಸವ ಸಮಿತಿ, ಕಲೆ ಮತ್ತು ಸಂಸ್ಕೃತಿ ಇಲಾಖೆಯ ಕೈಲಿ ಟೊಲ್ ಸ್ಟಾಯ್ ಫಾರ್ಮ್ ನ ಭವಿಷ್ಯ ಅಡಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X