ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಬಂಧನ

ಮುಂಬೈ, ಆಗಸ್ಟ್‌ 9: ಮಹಾತ್ಮ ಗಾಂಧಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಅವರನ್ನು ಮುಂಬೈನಲ್ಲಿ ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥ ಕಾರ್ಯಕ್ರಮಕ್ಕೆ ತೆರಳುವ ಕೆಲವೇ ಕ್ಷಣಗಳ ಮೊದಲು ಪೊಲೀಸರು ಒಂದೆರಡು ಗಂಟೆಗಳ ಕಾಲ ಬಂಧಿಸಿದ್ದ ಘಟನೆ ನಡೆದಿದೆ.

ಕ್ವಿಟ್ ಇಂಡಿಯಾ ದಿನದ ಸ್ಮರಣಾರ್ಥ ಕಾರ್ಯಕ್ರಮವನ್ನು ವಾರ್ಷಿಕವಾಗಿ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆಸಲಾಗುತ್ತದೆ, ಗ್ರಾಂಟ್ ರೋಡ್ ಉಪನಗರ ರೈಲು ನಿಲ್ದಾಣದ ಬಳಿ ಇದನ್ನು ಮೊದಲು ಗೋವಾಲಿಯಾ ಟ್ಯಾಂಕ್ ಮೈದಾನ ಎಂದು ಕರೆಯಲಾಗುತ್ತಿತ್ತು.

Mahatma Gandhis grandson Tushar Gandhi arrested in Mumbai

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನಾನು ಆಗಸ್ಟ್ 9 ರ ಕ್ವಿಟ್ ಇಂಡಿಯಾ ದಿನದ ನೆನಪಿಗಾಗಿ ಮನೆಯಿಂದ ಹೊರಟಾಗ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ನನ್ನನ್ನು ಬಂಧಿಸಲಾಗಿದೆ. ಈ ಐತಿಹಾಸಿಕ ದಿನಾಂಕದಂದು ನನ್ನ ಮುತ್ತಜ್ಜರಾದ ಬಾಪು ಮತ್ತು ಬಾ ಅವರನ್ನು ಸಹ ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ ಎಂದು ನನಗೆ ಹೆಮ್ಮೆ ಇದೆ ಎಂದು ತುಷಾರ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ನನ್ನನ್ನು ಈಗ ಬಿಡುಗಡೆ ಮಾಡಲಾಗಿದೆ. ಕ್ರಾಂತಿ ಮೈದಾನಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಇನ್ ಕ್ವಿಲಾಬ್ ಜಿಂದಾಬಾದ್ ಎಂದು ತುಷಾರ್ ಗಾಂಧಿ ಬರೆದುಕೊಂಡಿದ್ದಾರೆ. ಈ ಭ್ರಷ್ಟ ಸರ್ಕಾರ ನಮ್ಮ ಶಾಂತಿ ಮತ್ತು ಅಹಿಂಸೆಗೆ ಭಯ ಪಡುತ್ತಿರುವುದು ಏಕೆ? ಎಂದು ಸರ್ಕಾರದ ವಿರುದ್ಧ ತುಷಾರ್ ಗಾಂಧಿ ಕಿಡಿ ಕಾರಿದ್ದಾರೆ.

ಕೆಲವು ಗಂಟೆಗಳ ನಂತರ ಸಾಂತಾಕ್ರೂಜ್ ಠಾಣೆ ಪೊಲೀಸರು ತುಷಾರ್ ಗಾಂಧಿ ಅವರನ್ನು ಬಿಡುಗಡೆ ಮಾಡಿದರು. ಸರ್ಕಾರದ ಹೊಸ ಅಭಿಯಾನ "ಮೇರಿ ಮಾತಿ, ಮೇರಾ ದೇಶ್" ಅನ್ನು ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ಪ್ರಾರಂಭಿಸಿದರು. ಹೀಗಾಗಿ ಸ್ಥಳದಲ್ಲಿ ಕೆಲ ಗಂಟೆಗಳ ಕಾಲ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಇಂದು ಕ್ವಿಟ್ ಇಂಡಿಯಾ ದಿನದ 81 ನೇ ವಾರ್ಷಿಕೋತ್ಸವವಾಗಿದೆ. ಕ್ವಿಟ್ ಇಂಡಿಯಾ ಚಳುವಳಿಯು 1942 , ಆಗಸ್ಟ್ 9ರಂದು ನಡೆದ ನಾಗರಿಕ ದಂಗೆಯಾಗಿದೆ. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಆಂದೋಲನವು ಸ್ವಾತಂತ್ರ್ಯಕ್ಕಾಗಿ ಹೋರಾಟದ ಅಂತಿಮ ಹಂತಗಳಲ್ಲಿ ಒಂದಾಗಿದೆ. ಗಮನಾರ್ಹವಾದ ಈ ದಿನ, ಸಾವಿರಾರು ಭಾರತೀಯರು ಬೀದಿಗಿಳಿದು ಬ್ರಿಟಿಷರ ಆಡಳಿತದ ವಿರುದ್ಧ ಪ್ರತಿಭಟಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+