Gandhi Jayanthi: ಗಾಂಧೀಜಿ ಸಂಘಟಿಸಿದ 7 ಅವಿಸ್ಮರಣೀಯ ಹೋರಾಟಗಳು
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬೆಳಕು, ಬ್ರಿಟಿಷರ ಕತ್ತಲೆಯ ಹಾದಿಯಲ್ಲಿ ಕೋಟ್ಯಂತರ ಭಾರತೀಯರ ದಾರಿದೀಪ ಮಹಾತ್ಮ ಗಾಂಧೀಜಿ ಜಯಂತಿ ಸಂಭ್ರಮ ಕಳೆಗಟ್ಟಿದೆ. ಗಾಂಧೀಜಿ ಅವರ 154ನೇ ಜಯಂತಿಗೆ ಇಡೀ ಜಗತ್ತು ಸಜ್ಜಾಗಿದೆ. ಈ ಸಂದರ್ಭದಲ್ಲಿ ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನ ನಾವು ನೆನೆಯಬೇಕಿದೆ. ಹೀಗಾಗಿ ಗಾಂಧೀಜಿ ಅವರು ಸಂಘಟಿಸಿದ 7 ಅವಿಸ್ಮರಣೀಯ ಹೋರಾಟಗಳನ್ನು ತಿಳಿಯೋಣ ಬನ್ನಿ.
ಅದು 1869ರ ಅಕ್ಟೋಬರ್ 2, ಗುಜರಾತ್‌ನ ಪೋರಬಂದರ್ ಜಗತ್ತು ಮರೆಯದ ಮಹಾತ್ಮನ ಹುಟ್ಟಿಗೆ ಸಾಕ್ಷಿಯಾಗಿತ್ತು. ಕರಮಚಂದ್ ಗಾಂಧಿ ಮತ್ತು ಪುತಲೀಬಾಯಿ ದಂಪತಿ ಮಗನಾಗಿ ಮಹಾತ್ಮ ಗಾಂಧೀಜಿ ಜನಿಸಿದರು. ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಸಂಪ್ರದಾಯದ ರೀತಿ ಗಾಂಧೀಜಿ ಅವರು ತಮ್ಮ 13ನೇ ವಯಸ್ಸಿಗೆ ಮದುವೆಯಾದರು. ಹೀಗೆ ಮದುವೆಯ ಬಳಿಕ ತಮ್ಮ ಶಿಕ್ಷಣ ಮುಗಿಸಿದ ಗಾಂಧೀಜಿ ಅವರು ವೃತ್ತಿ ಜೀವನಕ್ಕಾಗಿ ದಕ್ಷಿಣ ಆಫ್ರಿಕಾಗೆ ವಲಸೆ ಹೋಗಬೇಕಾಯಿತು.

ಭಾರತಕ್ಕೆ ಗಾಂಧೀಜಿ ಭರ್ಜರಿ ಎಂಟ್ರಿ!
ಅದು ಮೊದಲನೇ ಮಹಾಯುದ್ಧದ ಸಮಯ ಆಗ ಗಾಂಧೀಜಿ ಅವರು ಭಾರತಕ್ಕೆ ವಾಪಸ್ ಬಂದರು. ಹೀಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಬರುವವರೆಗೆ ಒಂದು ಲೆಕ್ಕ, ಗಾಂಧೀಜಿ ಬಂದ ಬಳಿಕ ಮತ್ತೊಂದು ಲೆಕ್ಕ. ಯಾವಾಗ ಗಾಂಧೀಜಿ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆಜ್ಜೆ ಇಡುತ್ತಾರೋ ಅಲ್ಲಿಂದಲೇ ಬ್ರಿಟಿಷರ ಎದೆ ನಡುಗಲು ಶುರು ಆಗುತ್ತದೆ. ಹಾಗಾದರೆ ಗಾಂಧೀಜಿ ಅವರು ಸಂಘಟಿಸಿದ ಹಾಗೂ ಭಾರತದ ಸ್ವಾತಂತ್ರ್ಯಕ್ಕಾಗಿ ಕೈಗೊಂಡು 7 ಅವಿಸ್ಮರಣೀಯ ಹೋರಾಟಗಳನ್ನು ಇಲ್ಲಿ ಸ್ಮರಿಸೋಣ.
1) ಮೊದಲನೇ ಮಹಾಯುದ್ಧ
ಮಹಾತ್ಮ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾ ಬಿಟ್ಟು ಬರುವಾಗ ಒಂದು ಕ್ರಾಂತಿಯ ಕಿಡಿ ಹೊತ್ತಿಸಿ ಬಂದಿದ್ದರು. ಹೀಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಮಹಾತ್ಮ ಗಾಂಧೀಜಿ ಸೃಷ್ಟಿಸಿದ್ದ ಬಿರುಗಾಳಿಗೆ ಬ್ರಿಟಿಷರು ತತ್ತರಿಸಿದ್ದರು. ಈ ಕಾರಣಕ್ಕೇ ಗಾಂಧೀಜಿ ಅವರು ಭಾರತಕ್ಕೆ ಬಂದ ನಂತರ ಅವರನ್ನು ಆಗಿನ ವೈಸ್‌ರಾಯ್ ಆಗಿದ್ದ ಲಾರ್ಡ್ ಚೆಲ್ಮ್ಸ್‌ಫೋರ್ಡ್ ಆಹ್ವಾನಿಸಿದರು. ಮೊದಲ ಮಹಾಯುದ್ಧದ ಸಮ್ಮೇಳನದಲ್ಲಿ ಗಾಂಧೀಜಿ ಅವರನ್ನು ದೆಹಲಿಗೆ ಆಹ್ವಾನಿ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಯುದ್ಧಕ್ಕೆ ಭಾರತೀಯ ಸೈನಿಕರನ್ನು ಕಳುಹಿಸಲು ಗಾಂಧೀಜಿ ಅವರಿಂದ ಸಹಾಯ ಕೇಳಿದರು ಬ್ರಿಟಿಷರು, ಹೀಗೆ ಸಹಾಯ ಮಾಡಲು ಗಾಂಧೀಜಿ ಒಪ್ಪಿದರೂ ಕೂಡ ತಮ್ಮ ಅಹಿಂಸಾ ತತ್ವ ಮರೆಯಲಿಲ್ಲ. ವೈಸ್‌ರಾಯ್‌ಗೆ ಪತ್ರ ಬರೆದು, ನಾನು ಯುದ್ಧದಲ್ಲಿ ವೈಯಕ್ತಿಕವಾಗಿ ಯಾರನ್ನೂ ಕೊಲ್ಲುವುದಿಲ್ಲ, ಅದು ಸ್ನೇಹಿತನೇ ಇರಲಿ ಅಥವಾ ವೈರಿಯೇ ಆಗಿರಲಿ ಎಂದು ಪತ್ರದಲ್ಲಿ ತಿಳಿಸಿದ್ದರು. ಹೀಗೆ ಮೊದಲ ಮಹಾಯುದ್ಧದಲ್ಲಿ ಭಾರತೀಯರ ವಿಶ್ವಾಸ ಗಳಿಸಲು ಬ್ರಿಟಿಷರಿಗೆ ಇದರಿಂದ ಸಹಾಯವಾಗಿತ್ತು.
2) ಚಂಪಾರಣ್ಯ ಸತ್ಯಾಗ್ರಹ
ಬ್ರಿಟಿಷರು ಭಾರತೀಯ ಕೃಷಿಕರ ವಿರುದ್ಧ ಅದೆಷ್ಟು ಕ್ರೂರವಾಗಿ ವರ್ತಿಸುತ್ತಿದ್ದರು ಎಂದರೆ, ಭಾರತದ ರೈತರ ಬಳಿ ಅತಿಹೆಚ್ಚು ತೆರಿಗೆ ವಸೂಲಿ ಮಾಡುವ ಜೊತೆಗೆ ಅವರು ಹೇಳಿರುವ ಬೆಳೆಯನ್ನೇ ಭಾರತದ ಕೃಷಿಕರು ಬೆಳೆಯಬೇಕಿತ್ತು. ಹೀಗೆ ಬಿಹಾರ ಚಂಪಾರಣ್ಯ ಜಿಲ್ಲೆಯಲ್ಲಿ ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯಲ್ಲಿ ರೈತರು ಕಂಗಾಲಾಗಿ ಹೋಗಿದ್ರು. ಇಂಡಿಗೋ ಬೆಳೆ ಬೆಳೆಯಲು ರೈತರ ಮೇಲೆ ಒತ್ತಡ ಹೇರಲಾಗುತ್ತಿತ್ತು. ಆದರೆ ಪ್ರತಿಭಟನೆ ನಡೆಸುವ ರೈತರಿಗೆ ಬ್ರಿಟಿಷ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು.
ಹೀಗೆ ಈ ಅನ್ಯಾಯದ ವಿರುದ್ಧ 1917ರಲ್ಲಿ ಮಹಾತ್ಮ ಗಾಂಧೀಜಿ ಅಖಾಡಕ್ಕೆ ಪ್ರವೇಶವನ್ನು ಮಾಡಿದರು. ಯಾವಾಗ ಗಾಂಧೀಜಿ ಅಖಾಡಕ್ಕೆ ಎಂಟ್ರಿ ಕೊಟ್ಟರೋ, ಆಗ ಪರಿಸ್ಥಿತಿ ಪೂರ್ತಿ ಬದಲಾಗಿ ಹೋಗಿತ್ತು. ಅಲ್ಲಿಯವರೆಗೂ ರೈತರ ಮೇಲೆ ಒತ್ತಡ ಹೇರುತ್ತಿದ್ದ ಬ್ರಿಟಿಷ್ ಪಡೆಗೆ ಗಾಂಧೀಜಿ ಅವರ ಅಹಿಂಸಾ ಚಳುವಳಿ & ಸತ್ಯಾಗ್ರಹ ಹಾದಿ ಭಯ ಹುಟ್ಟಿಸಿತ್ತು. ಹೀಗಾಗಿ ಕೊನೆಗೂ ರೈತರಿಗೆ ಇಂಡಿಗೋ ಬೆಳೆಯಿಂದ ಬ್ರಿಟಿಷರು ರಿಯಾಯಿತಿ ನೀಡಿದ್ದರು.
3) ಖೇಡಾ ಸತ್ಯಾಗ್ರಹ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯ ಹೆಸರು ಏಕೆ ಅಚ್ಚಳಿಯದೆ ಉಳಿದಿದೆ? ಎಂಬ ಪ್ರಶ್ನೆಗೆ ಗಾಂಧೀಜಿ ಅವರ ಚಳವಳಿಗಳೇ ಉತ್ತರ ನೀಡುತ್ತವೆ. ಅದರಲ್ಲೂ ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯಲ್ಲಿ ಮಹಾತ್ಮರು ನಡೆಸಿದ ಸತ್ಯಾಗ್ರಹ ಭಾರತದ ರೈತರಲ್ಲಿ ಹೊಸ ಭರವಸೆ ಮೂಡಿಸಿತ್ತು. 1918ರಲ್ಲಿ ನಡೆದಿದ್ದ ಖೇಡಾ ಸತ್ಯಾಗ್ರಹ ಬ್ರಿಟಿಷರಿಗೆ ಸರಿಯಾಗದ ಪಾಠ ಕಲಿಸಿತ್ತು. ಅಷ್ಟಕ್ಕೂ ಭೀಕರ ಪ್ರವಾದಿಂದ ಖೇಡಾ ಪ್ರದೇಶ ತತ್ತರಿಸಿ ಹೋಗಿತ್ತು. ಈ ಪರಿಸ್ಥಿತಿಯಲ್ಲೂ ತೆರಿಗೆ ಕಟ್ಟುವಂತೆ ಬ್ರಿಟಿಷ್ ಅಧಿಕಾರಿಗಳು ಒತ್ತಡ ಹೇರುತ್ತಿದ್ದರು.
ಹೀಗೆ ಎಲ್ಲವೂ ಕೈಮೀರಿ ಹೋಗಿದ್ದ ಸಮಯದಲ್ಲೇ ಗಾಂಧೀಜಿ ಅವರು ಅಖಾಡಕ್ಕೆ ಪ್ರವೇಶ ಮಾಡುತ್ತಾರೆ. 1918ರಲ್ಲಿ ಬ್ರಿಟಿಷರ ವಿರುದ್ಧ ಸತ್ಯಾಗ್ರಹ ಆರಂಭಿಸಿ, ತೆರಿಗೆ ಮನ್ನಾ ಮಾಡಿ ಎಂದು ಸಹಿ ಸಂಗ್ರಹ ಚಳವಳಿ ಆರಂಭಿಸಿದರು. ಕೊನೆಗೆ ರೈತರು & ಮಹಾತ್ಮ ಗಾಂಧೀಜಿ ಅವರ ಹೋರಾಟಕ್ಕೆ ಮಣಿದ ಬ್ರಿಟಿಷರ ಆಡಳಿತ, ರೈತರಿಗೆ ಸಮಸ್ಯೆ ಮುಗಿಯುವವರೆಗೆ ಈ ತೆರಿಗೆ ಕುಣಿಕೆಯಿಂದ ಮುಕ್ತಿ ಕೊಟ್ಟಿತ್ತು. ಹೀಗೆ ನೇಣಿಗೆ ಕೊರಳು ಒಡ್ಡಬೇಕಿದ್ದ ಅನ್ನದಾತರ ಕುಟುಂಬವನ್ನು ಅಂದು ಗಾಂಧೀಜಿ ಅವರು ರಕ್ಷಿಸಿದ್ದರು.

4) ಖಿಲಾಫತ್ ಚಳವಳಿ
ಮಹಾತ್ಮ ಗಾಂಧೀಜಿ ಅವರು ರಾಷ್ಟ್ರ ನಾಯಕರಾಗಿ ಗುರುತಿಸಿಕೊಂಡ, ದೊಡ್ಡ ಚಳುವಳಿ 'ಖಿಲಾಫತ್' ಹೋರಾಟ. ಮೊದಲ ಮಹಾಯುದ್ಧದ ನಂತರ, ಮುಸ್ಲಿಮರು ತಮ್ಮ ಖಲೀಫ್ ಅಥವಾ ಧಾರ್ಮಿಕ ನಾಯಕನ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆಗ ಶುರುವಾಗಿದ್ದ ಹೋರಾಟಕ್ಕೆ ಮಹಾತ್ಮ ಗಾಂಧೀಜಿ ಅವರು ಕೂಡ ಬೆಂಬಲ ನೀಡಿ ಅಖಾಡಕ್ಕೆ ಇಳಿದರು. 1919ರಿಂದ 1922ರವರೆಗೂ ನಡೆದ ಹೋರಾಟಕ್ಕೆ ಮಹಾತ್ಮ ಗಾಂಧೀಜಿ ಬಲವನ್ನ ತುಂಬಿ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ್ದರು.
5) ಅಸಹಕಾರ ಚಳವಳಿ
ಬ್ರಿಟಿಷರು ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಬಗ್ಗಲೇ ಇಲ್ಲ. ಆಗ ಗಾಂಧೀಜಿ ಅವರಿಗೆ ಪ್ರಮುಖ ವಿಚಾರವೊಂದು ಅರ್ಥವಾಗಿತ್ತು. ಬ್ರಿಟಿಷರು ಭಾರತದಲ್ಲಿ ಇರಲು ಸಾಧ್ಯವಾಗಿದ್ದು ಭಾರತೀಯರ ಸಹಕಾರದಿಂದ ಎಂಬುದನ್ನು ಗಾಂಧೀಜಿ ಅರಿತರು. ಇದೇ ವಿಚಾರವನ್ನ ತಮ್ಮ ಹೋರಾಟದ ಅಸ್ತ್ರ ಮಾಡಿಕೊಂಡು 1920ರಲ್ಲಿ ಮೊದಲ ಬಾರಿಗೆ 'ಅಸಹಕಾರ ಚಳವಳಿ'ಗೆ ಕರೆ ನೀಡಿದರು ಮಹಾತ್ಮ ಗಾಂಧೀಜಿ. ಜಲಿಯನ್ ವಾಲಾಬಾಗ್ ದುರ್ಘಟನೆಯಲ್ಲಿ ಬ್ರಿಟಿಷ್ ಅಧಿಕಾರಿಗಳ ದುರಹಂಕಾರ ಅರ್ಥವಾಗಿ ಅಸಹಕಾರ ಚಳವಳಿಗಳಿಗೆ ದೊಡ್ಡ ಮಟ್ಟದಲ್ಲೇ ಪ್ರಚಾರ ನೀಡಿದರು. ಮುಂದೆ 'ಅಸಹಕಾರ ಚಳವಳಿ' ಭಾರತದ ಹೃದಯವಾಗಿತ್ತು.
6) ದಂಡಿ ಉಪ್ಪಿನ ಸತ್ಯಾಗ್ರಹ
1930ರ ಮಾರ್ಚ್ 12ರಂದು ಆರಂಭವಾದ ದಂಡಿ ಉಪ್ಪಿನ ಸತ್ಯಾಗ್ರಹ ಇಡೀ ಜಗತ್ತಿಗೆ ಭಾರತ ನೀಡಿದ ಪ್ರಮುಖ ಚಳವಳಿಯ ಮಾದರಿ ಎನ್ನಬಹುದು. ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿ ಸಾಂಪ್ರದಾಯಿಕವಾಗಿ ಭಾರತೀಯರು ಉಪ್ಪಿನ ಉತ್ಪಾದನೆ ಮಾಡುತ್ತಿದ್ದರು. ಹೀಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು ಭಾರತೀಯರು. ಆದರೆ ಬ್ರಿಟಿಷ್ ಆಳ್ವಿಕೆ ಉಪ್ಪಿನ ಉತ್ಪಾದನೆ ಮತ್ತು ಮಾರಾಟ ನಿಷೇಧಿಸುವ ಕಾನೂನು ಜಾರಿಗೆ ತಂದು ಉಪ್ಪಿನ ಮೇಲೆ ಮನಸ್ಸಿಗೆ ಬಂದಂತೆ ತೆರಿಗೆ ವಿಧಿಸಿತ್ತು. ಇದು ಭಾರತೀಯರನ್ನ ರೊಚ್ಚಿಗೆಬ್ಬಿಸಿ, ಇದೇ ಹೋರಾಟ ಮುಂದೆ ಬ್ರಿಟಿಷರ ಬುಡಕ್ಕೆ ಬಿಸಿನೀರು ಕಾಯಿಸಿತ್ತು.
1930ರ ಮೇ 4ರಂದು ದಂಡಿಯಲ್ಲಿ ಉಪ್ಪು ತಯಾರಿಸಿ, ಬ್ರಿಟಿಷರ ಕಾನೂನು ಮುರಿದ ಕಾರಣ ಮಹಾತ್ಮಾ ಗಾಂಧೀಜಿ ಅವರನ್ನು ಬಂಧಿಸಲಾಗಿತ್ತು. ದಂಡಿಯಲ್ಲಿ ಗಾಂಧೀಜಿಯವರು ಒಂದು ಹಿಡಿ ಮಣ್ಣು ಮತ್ತು ಉಪ್ಪು ತೆಗೆದುಕೊಂಡು ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನು ನಾನು ಅಲುಗಾಡಿಸುತ್ತಿದ್ದೇನೆ ಎಂದು ಘೋಷಿಸಿದರು. ಮುಂದೆ ಭಾರತದ ಮೂಲೆ ಮೂಲೆಗೂ ಈ ಉಪ್ಪಿನ ಸತ್ಯಾಗ್ರಹ ಹಬ್ಬಿತ್ತು. ಕೊನೆಗೂ ಬ್ರಿಟಿಷರು ಭಾರತೀಯರ ಎದುರು ಸೋತರು.
7) ಬ್ರಿಟಿಷರೇ ಭಾರತ ಬಿಟ್ಟು ತೊಲಗಿ!
ಜಗತ್ತನ್ನ ಆಳಿದ್ದ ಬ್ರಿಟಿಷರಿಗೆ ಗಾಂಧೀಜಿ ಅವರನ್ನ ನಿಭಾಯಿಸುವುದೇ ದೊಡ್ಡ ತಲೆನೋವು ತರಿಸಿತ್ತು. ಅದರಲ್ಲೂ ಪ್ರತಿಬಾರಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾ ಮೋಸ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಭಾರತೀಯರು ತಿರುಗಿಬಿದ್ದರು. ಇದೇ ಚಳವಳಿ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಬೇಕು ಎಂದು ಮಹಾತ್ಮ ಗಾಂಧೀಜಿ ಕೂಡ ದೃಢ ನಿಲುವು ತಳೆದರು. ಇದರ ಪರಿಣಾಮ 1942ರ ಆಗಸ್ಟ್ 8ರಂದು ಆರಂಭವಾದ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಚಳವಳಿ ದೊಡ್ಡ ಗೆಲುವು ತಂದುಕೊಟ್ಟಿತ್ತು. ಇನ್ನು 2ನೇ ಮಹಾಯುದ್ಧದಲ್ಲಿ ನಲುಗಿ ಹೋಗಿದ್ದ ಬ್ರಿಟಿಷರಿಗೆ ಮತ್ತೊಂದು ಸಮಸ್ಯೆ ಎದುರಾಗಿ, ಮೆತ್ತಗಾಗಿ ಹೋದರು.
ಭಾರತೀಯ ಸೈನಿಕರನ್ನು 2ನೇ ಮಹಾಯುದ್ಧಕ್ಕೆ ಬ್ರಿಟಿಷರು ಬಳಸಿಕೊಳ್ಳಲು ಮುಂದಾದಾಗ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಚಳವಳಿ ಸ್ಫೋಟಗೊಂಡಿತು. ಕೊನೆಗೆ ಈ ಚಳವಳಿ ದೊಡ್ಡ ಸ್ವರೂಪ ಪಡೆದಾಗ ಮೆತ್ತಗಾದ ಬ್ರಿಟಿಷರು, ಭಾರತಕ್ಕೆ ಸ್ವಾತಂತ್ರ್ಯ ನೀಡುವ ಬಗ್ಗೆ ವಾಗ್ದಾನ ನೀಡಿ ಬೀಸುವ ದೊಣ್ಣೆಯಿಂದ ಪಾರಾದರು. ಬಳಿಕ ಮುಂದೆ ಭಾರತಕ್ಕೆ 1947ರ ಹೊತ್ತಿಗೆ ಸ್ವಾತಂತ್ರ್ಯ ಸಿಗಲು ಇದೇ ಹೋರಾಟ ಪ್ರಮುಖ ಕಾರಣವಾಗಿತ್ತು.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ












Click it and Unblock the Notifications