Gandhi Jayanthi: ಕನ್ನಡಿಗರು ಮತ್ತು ಗಾಂಧೀಜಿ ನಡುವಿನ ಸಂಬಂಧ!

ಕನ್ನಡಿಗರಿಗೆ ದೇಶಪ್ರೇಮ ಏನು ಎಂಬುದನ್ನ ಹೇಳಿಕೊಡುವ ಅಗತ್ಯತೆ ಇಲ್ಲ. ಏಕೆಂದರೆ ಈ ನಾಡು ಇಡೀ ದೇಶಕ್ಕೆ ದೇಶಪ್ರೇಮದ ಪಾಠ ಕಲಿಸಿದೆ. ಅದ್ರಲ್ಲೂ ಭಾರತ ಸ್ವತಂತ್ರವಾದಾಗ ಮೊಟ್ಟಮೊದಲು ಭಾರತದಲ್ಲಿ ವಿಲೀನವಾಗಲು ಒಪ್ಪಿಗೆ ಸೂಚಿಸಿದ ನಾಡು ನಮ್ಮದು. ಈ ಕನ್ನಡ ನಾಡಿಗೆ ಅಂತಹ ಶಕ್ತಿ ಇದೆ, ಇತಿಹಾಸವೂ ಇದೆ. ಹೀಗಾಗಿಯೇ ಕನ್ನಡಿಗರ ಜೊತೆಗೆ ಮಹಾತ್ಮ ಗಾಂಧೀಜಿ ಅವರ ಒಡನಾಟ ಕೂಡ ಆತ್ಮೀಯವಾಗಿತ್ತು.

ದೇಶದ ಸ್ವಾತಂತ್ರ್ಯ ಹೋರಾಟದ ಅಡಿಪಾಯ ಮಹಾತ್ಮ ಗಾಂಧೀಜಿ ಅವರು. ಹೀಗೆ ಭಾರತ ಸ್ವಾತಂತ್ರ್ಯ ಪಡೆಯಲು ದೇಶದ ಮೂಲೆ ಮೂಲೆಗೂ ಗಾಂಧೀಜಿ ಅವರು ಭೇಟಿ ನೀಡಿದ್ದರು. ಅದರಲ್ಲೂ ಕನ್ನಡ ನಾಡಿಗೆ ಹಲವು ಬಾರಿ ಗಾಂಧೀಜಿ ಅವರು ಭೇಟಿ ನೀಡಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೂಡ ಪತ್ನಿ ಜೊತೆಯಲ್ಲಿ ಮಹಾತ್ಮ ಗಾಂಧೀಜಿ ಆಗಮಿಸಿದ್ದರು. ಹಾಗಾದ್ರೆ ಒಟ್ಟಾರೆ ಎಷ್ಟುಬಾರಿ ರಾಷ್ಟ್ರಪಿತ ಕನ್ನಡ ನಾಡಿಗೆ ಬಂದಿದ್ದಾರೆ? ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ, ಮುಂದೆ ಓದಿ.

Discover how many times Mahatma Gandhi visited Karnataka

ಕನ್ನಡ ನಾಡಿಗೆ ಗಾಂಧೀಜಿ ಭೇಟಿ

ಅಷ್ಟಕ್ಕೂ ಮಹಾತ್ಮ ಗಾಂಧೀಜಿ ಅವರು 1915ರಲ್ಲಿ ಆಫ್ರೀಕಾದಿಂದ ಭಾರತಕ್ಕೆ ಮರಳಿ ಬಂದ ಬಳಿಕ, ಕೆಲವೇ ದಿನಗಳ ಅಂತರದಲ್ಲಿ ಕನ್ನಡ ನಾಡಿಗೂ ಭೇಟಿ ನೀಡಿದ್ದರು. ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಸೂಚನೆ ಹಿನ್ನೆಲೆ ದೇಶ ಪರ್ಯಟನೆ ಹೊರಟ ಅವರಿಗೆ, ಈ ನಾಡು ಕೂಡ ಕೈಬೀಸಿ ಕರೆದಿತ್ತು. 1915ರ ಮೇ 8ರಂದು ಬೆಂಗಳೂರಿಗೆ ತಮ್ಮ ಪತ್ನಿ ಜೊತೆಗೆ ಆಗಮಿಸಿದ್ದ ಮಹಾತ್ಮ ಗಾಂಧೀಜಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಗೋಪಾಕೃಷ್ಣ ಗೋಖಲೆ ಅವರ ಭಾವಚಿತ್ರ ಅನಾವರಣ ಮಾಡಿದರು.

ಮಂಗಳೂರಿಗೆ ಬಂದಿದ್ದರು ಗಾಂಧೀಜಿ

1920ರಲ್ಲಿ ಆಗಿನ ಕಾಲದಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಮಂಗಳೂರು ಭಾಗಕ್ಕೂ ಭೇಟಿ ನೀಡಿದ್ದರು ಮಹಾತ್ಮ ಗಾಂಧೀಜಿ ಅವರು. ಅಸಹಕಾರ ಚಳವಳಿಯ ಭಾಗವಾಗಿ ಕರ್ನಾಟಕ ಕರಾವಳಿ ಭಾಗ ಮಂಗಳೂರಿಗೆ ಭೇಟಿ ಕೊಟ್ಟು, ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿದ್ದರು ಭಾರತದ ರಾಷ್ಟ್ರಪಿತ. ಆಗ ಕೂಡ ಗಾಂಧೀಜಿ ಅವರನ್ನು ನೋಡಲು, ಕಡಲ ನಗರಿಯಲ್ಲಿ ಸಾಗರದಂತೆ ಜನ ಸೇರಿದ್ದರು. ಮುಂದೆ ಮಂಗಳೂರಿನಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಲು ಈ ಭೇಟಿ ಕೂಡ ಕಾರಣವಾಗಿತ್ತು.

ಬೆಳಗಾವಿ ಅಧಿವೇಶನದ ಸವಿಸವಿ ನೆನಪು

ಇನ್ನು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಮಹಾತ್ಮ ಗಾಂಧೀಜಿ ಅವರು ಒಮ್ಮೆ ಮಾತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದರಲ್ಲೂ ಕನ್ನಡಿಗರ ನೆಲದಲ್ಲಿ ನಡೆದಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನದಲ್ಲೇ ಗಾಂಧೀಜಿ ಅವರನ್ನು ಅಧ್ಯಕ್ಷರ ಪಟ್ಟಕ್ಕೆ ಆಯ್ಕೆ ಮಾಡಿದ್ದರು ಮುಖಂಡರು. ಕಾಂಗ್ರೆಸ್‌ನ 39ನೇ ಅಧಿವೇಶನ ಬೆಳಗಾವಿಯಲ್ಲಿ 2 ದಿನಗಳ ಕಾಲ ನಡೆದಿತ್ತು. ಡಿಸೆಂಬರ್ 26, 1924ರಲ್ಲಿ ನಡೆದ ಅಧಿವೇಶನಕ್ಕೆ ಮಹಾತ್ಮ ಗಾಂಧೀಜಿಯವರು ಬಂದಿದ್ದರು. ಅಧಿವೇಶನ ಆರಂಭಕ್ಕೆ ಮುನ್ನ ಬೆಳಗಾವಿಗೆ ಬಂದಿದ್ದ ಗಾಂಧೀಜಿ ಅಹಿಂಸಾ ನೀತಿ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದರು.

Discover how many times Mahatma Gandhi visited Karnataka

ಜಾತಿ ಪದ್ಧತಿ ವಿರುದ್ಧ ಜಾಗೃತಿ

ಮಹಾತ್ಮ ಗಾಂಧೀಜಿ ಅವರು ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಹೊರಾಡಿದ್ದ ವ್ಯಕ್ತಿ ಹಾಗೂ ವ್ಯಕ್ತಿತ್ವ. ಅದ್ರಲ್ಲೂ ಭಾರತದ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ ಪದ್ಧತಿ ವಿರುದ್ಧ ಅವರು ನಡೆಸಿದ ಹೋರಾಟ ದೊಡ್ಡದು. ಹೀಗೆ ಗಾಂಧೀಜಿ ಅವರು 1934 ಮತ್ತು 1936ರಲ್ಲಿ 'ಹರಿಜನ ಪ್ರವಾಸ' ಕೈಗೊಂಡು ಅಸ್ಪೃಶ್ಯತೆ ವಿರುದ್ಧ ಜಾಗೃತಿ ಮೂಡಿಸಿದರು. ಹೀಗೆ 1934 & 1936ರಲ್ಲಿ ಕನ್ನಡ ನಾಡಿಗೆ ಎರಡು ಬಾರಿ ಬಂದಿದ್ದರು. ಅಸ್ಪೃಶ್ಯತೆ ಆಚರಣೆ ಮಾಡದಂತೆ ನೇರ ಸಲಹೆ ನೀಡುತ್ತಿದ್ದರು ಗಾಂಧೀಜಿ.

1934 ಮತ್ತು 1936ರಲ್ಲಿ 'ಹರಿಜನ ಪ್ರವಾಸ'ದ ನಂತರ ಗಾಂಧೀಜಿ ಅವರು ಮತ್ತೆ ಕನ್ನಡದ ನೆಲಕ್ಕೆ ಬಂದಿದ್ದು 1937ರಲ್ಲಿ. ಆಗ ಖಾದಿ ಪ್ರಚಾರಕ್ಕೆ ಮಹಾತ್ಮ ಗಾಂಧೀಜಿ ಬಂದಿದ್ದರು. ಈ ಮೂಲಕ ಭಾರತದ ನೆಲದ ಬಟ್ಟೆಗಳನ್ನೇ ಬಳಕೆ ಮಾಡಲು ಗಾಂಧೀಜಿ ಮಾರ್ಗದರ್ಶನ ನೀಡಿದ್ದರು. ಅಲ್ಲದೆ ಗಾಂಧೀಜಿ ಅವರು ಖಾದಿ ಬಳಕೆ ಬಗ್ಗೆ ಕರ್ನಾಟಕದಲ್ಲಿ ಕೈಗೊಂಡಿದ್ದ ಪ್ರಚಾರದಿಂದ ಬಹುತೇಕರು ಪ್ರಭಾವಿತರಾದರು. ಬ್ರಿಟಿಷರ ಕುತಂತ್ರ ವಿರುದ್ಧ & ವ್ಯಾಪಾರ ನೀತಿಗಳನ್ನು ಅರಿತು ಭಾರತ ನೆಲದ ಉತ್ಪನ್ನಗಳಿಗೆ ಬೆಂಬಲವಾಗಿ ನಿಂತರು ಕನ್ನಡಿಗರು. ಹೀಗೆ ಗಾಂಧೀಜಿ ಅವರ ಕರ್ನಾಟಕ ಭೇಟಿಯ ಪ್ರತಿಯೊಂದು ಕ್ಷಣ ಕೂಡ ಅವಿಸ್ಮರಣೀಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+