ಗಾಂಧೀಜಿಗೆ 'ಮಹಾತ್ಮ' ಬಿರುದು ಕೊಟ್ಟಿದ್ಯಾರು? ಆರ್‌ಟಿಐ ಕಾರ್ಯಕರ್ತ ಕೇಳಿದ ಪ್ರಶ್ನೆಗೆ ಅಚ್ಚರಿಯ ಉತ್ತರ
ಸಾರ್ವಜನಿಕ ಹಿತಾಸಕ್ತಿಯ ಯಾವದೇ ವಿಷಯದ ಬಗ್ಗೆ ಮಾಹಿತಿ ಪಡೆಯಲು ಆರ್‌ಟಿಐ ಕಾಯಿದೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹೈದರಾಬಾದ್‌ನ ಆರ್‌ಟಿಐ ಕಾರ್ಯಕರ್ತರು ಈಗ ಗಾಂಧೀಜಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ಅರಿಯಲು ಇದನ್ನು ಬಳಸಿಕೊಂಡಿದ್ದು, ಮೋಹನ್ ದಾಸ್ ಕರಮಚಂದ್ ಗಾಂಧಿ ಅವರಿಗೆ ಯಾವಾಗ ಮತ್ತು ಯಾವ ಆಧಾರದ ಮೇಲೆ ಮಹಾತ್ಮ ಎಂಬ ಬಿರುದು ನೀಡಲಾಯಿತು ಎಂದು ಮಾಹಿತಿ ಕೇಳಿದ್ದು, ಇದಕ್ಕೆ ಉತ್ತರ ಕೂಡ ಸಿಕ್ಕಿದೆ!
ಎಲ್ಲರಿಗೂ ಗೊತ್ತಿರುವಂತೆ ಕವಿ ಮತ್ತು ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ ಅವರು 1915ರಲ್ಲಿ ಗಾಂಧಿಯರಿಗೆ ಮಹಾತ್ಮ ಎಂದು ಕರೆದರು ಎಂದು ದಾಖಲಾಗಿದೆ. ತಮ್ಮ ಆತ್ಮಚರಿಯತ್ರೆಯಲ್ಲಿ ಠಾಗೋರ್ ಅವರು ಈ ಬಿರುದು ನೀಡಿದರ, ನಂತರ ಗಾಂಧಿಯನ್ನು ಗುರುದೇವ ಎಂದು ಕರೆದರು. ಆದರೆ ಇದು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸಮಾಧಾನ ತರದ ಕಾರಣ ಈ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು.

ಹೈದರಾಬಾದ್‌ನ ಆರ್‌ಟಿಐ ಕಾರ್ಯಕರ್ತ ರಾಜು ಮಾಲ್ತುಮ್ಕರ್ ಅವರು ಎಂಕೆ ಗಾಂಧಿಯವರಿಗೆ ಮಹಾತ್ಮ ಎಂದು ಕರೆಯುವ ಗೌರವವನ್ನು ಹೇಗೆ, ಯಾವಾಗ ಮತ್ತು ಏಕೆ ನೀಡಲಾಯಿತು ಎಂದು ತಿಳಿಯಲು ಕೋರಿ ಪ್ರಧಾನ ಮಂತ್ರಿ ಕಚೇರಿಗೆ (ಪಿಎಂಒ) ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಮೂಲಕ ರಾಷ್ಟ್ರಪಿತ ಎಂದು ಗಾಂಧೀಜಿಯನ್ನು ಯಾವಾಗ ಕರೆಯಲಾಯಿತು ಎಂದು ತಿಳಿಯಲು ಅವರು ಪ್ರಯತ್ನ ಪಟ್ಟರು.
ಪ್ರಧಾನ ಮಂತ್ರಿ ಕಚೇರಿ ಹೇಳಿದ್ದೇನು?
ಪಿಎಂಒ ಅಧಿಕಾರಿಗಳು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಚ್‌ಆರ್) ಮತ್ತು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ (ಎನ್‌ಎಐ), ಪುರಾತತ್ವ ಇಲಾಖೆಗೆ ಹೆಚ್ಚಿನ ಮಾಹಿತಿ ನೀಡುವಂತೆ ಅರ್ಜಿಯನ್ನು ರವಾನಿಸಿದ್ದಾರೆ. ಇದನ್ನು ಆದರಿಸಿ ಐಸಿಎಚ್‌ಆರ್ ಆರ್‌ಟಿಐ ಕಾರ್ಯಕರ್ತ ರಾಜು ಮಾಲ್ತುಮ್ಕರ್ ಅವರಿಗೆ ಉತ್ತರ ಕೂಡ ನೀಡಿದೆ.
"ಐಸಿಎಚ್‌ಆರ್ ನನಗೆ ಪತ್ರವೊಂದನ್ನು ಬರೆದಿದೆ, ಅದರಲ್ಲಿ ಈ ಬಗ್ಗೆ ಯಾವುದೇ ಸಾಕ್ಷ್ಯಚಿತ್ರ ಮಾಹಿತಿಯನ್ನು ಹೊಂದಿಲ್ಲ ಎಂದು ಅದು ಉಲ್ಲೇಖಿಸಿದೆ. ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಕೂಡ ಈ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಎಂದು ಹೇಳಿದೆ. ತಿಳಿದುಕೊಳ್ಳಲು ಬಯಸುವ ಯಾವುದೇ ಹೆಚ್ಚಿನ ಮಾಹಿತಿಗಾಗಿ ಅವರ ಗ್ರಂಥಾಲಯ ಮತ್ತು ಆರ್ಕೈವಲ್ ಸೌಲಭ್ಯಗಳನ್ನು ಬಳಸಿಕೊಳ್ಳಲು ನಾನು ಸ್ವಾಗತಿಸುತ್ತೇನೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ" ರಾಜು ಹೇಳಿದರು.
ಗಾಂಧೀಜಿಯನ್ನು ಹೊರತುಪಡಿಸಿ ಇನ್ನಿಬ್ಬರಿಗೆ ಕೂಡ ಮಹಾತ್ಮ ಎನ್ನುವ ಬಿರುದು ನೀಡಲಾಗಿದೆ. ಪ್ರಮುಖ ಲೀಗ್ ಬೇಸ್‌ಬಾಲ್ ಕಾರ್ಯನಿರ್ವಾಹಕ ಮಹಾತ್ಮ ವೆಸ್ಲೆ ಬ್ರಾಂಚ್ ರಿಕಿ ಮತ್ತು ಸಮಜಾ ಸುಧಾರಕರಾದ ಜ್ಯೋತಿರಾವ್ ಗೋವಿಂದರಾವ್ ಫುಲೆ ಅವರಿಗೆ ಮಹಾತ್ಮ ಜೋತಿಬಾ ಫುಲೆ ಎಂದೂ ಕರೆಯುತ್ತಾರೆ.
"ನಮಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರದಿಂದ ಗುರುತಿಸಲ್ಪಟ್ಟವರು ಬೇರೆಯವರಿರುವಾಗ, ಗಾಂಧೀಜಿ ಹೆಸರು ಏಕೆ ಇಲ್ಲ? ಎಂದು ರಾಜು ಪ್ರಶ್ನಿಸಿದರು. ಅವರು ಈ ಬಗ್ಗೆ ಸತ್ಯ ಸಂಗತಿಯನ್ನು ತಿಳಿಯಲು ಬಯಸುತ್ತಾರೆ.












Click it and Unblock the Notifications