Get Updates
Get notified of breaking news, exclusive insights, and must-see stories!

ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಕೆ ಮನವಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ, ಜುಲೈ. 23: ಏಪ್ರಿಲ್ 11 ರಂದು ಮದ್ರಾಸ್ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯವು ತಮಿಳುನಾಡಿನ ನ್ಯಾಯಾಲಯಗಳು ಮತ್ತು ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಸಂತ ತಿರುವಳ್ಳುವರ್ ಹೊರತುಪಡಿಸಿ ಯಾವುದೇ ನಾಯಕರ ಫೋಟೋಗಳು, ಪ್ರತಿಮೆಗಳು ಅಥವಾ ಭಾವಚಿತ್ರಗಳನ್ನು ಹೊಂದಿರಬಾರದು ಎಂಬ ಹಿಂದಿನ ನಿರ್ಧಾರವನ್ನು ಪುನರುಚ್ಚರಿಸಿದೆ.

ತಮಿಳುನಾಡು ಮತ್ತು ಪುದುಚೇರಿಯ ನ್ಯಾಯಾಲಯಗಳು ಮಹಾತ್ಮಾ ಗಾಂಧಿ ಮತ್ತು ತಮಿಳು ಕವಿ ಸಂತ ತಿರುವಳ್ಳುವರ್ ಅವರ ಭಾವಚಿತ್ರಗಳನ್ನು ಮಾತ್ರ ಪ್ರದರ್ಶಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಸುತ್ತೋಲೆಯಲ್ಲಿ ತಿಳಿಸಿದೆ. ಹೊಸದಾಗಿ ನಿರ್ಮಿಸಲಾದ ನ್ಯಾಯಾಲಯದ ಪ್ರವೇಶ ದ್ವಾರದಿಂದ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತೆಗೆದುಹಾಕುವಂತೆ ಆಲಂದೂರಿನ ವಕೀಲರ ಸಂಘದ ಮನವೊಲಿಸುವಂತೆ ಕಾಂಚೀಪುರಂ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಿದೆ.

Madras High Court declines request to install Dr. BR Ambedkar portrait in courts

ಹಾಗಾಗಿ ರಾಜ್ಯದ ನ್ಯಾಯಾಲಯಗಳ ಒಳಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವಂತೆ ವಿವಿಧ ವಕೀಲರ ಸಂಘಗಳು ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಜುಲೈ 7 ರಂದು ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಸುತ್ತೋಲೆಯಲ್ಲಿ ಹೈಕೋರ್ಟ್‌ನ ಪೂರ್ಣ ನ್ಯಾಯಾಲಯವು ಅಕ್ಟೋಬರ್ 2008 ರಿಂದ ಹಿಂದಿನ ನಿರ್ಣಯಗಳ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಂಡಿದೆ. ನ್ಯಾಯಾಲಯದ ಒಳಗೆ ಡಾ. ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರದರ್ಶಿಸಲು ವಕೀಲರ ಗುಂಪು ಮಾಡಿದ ಮನವಿಯನ್ನು ತಿರಸ್ಕರಿಸಿದೆ.

"ಇತ್ತೀಚೆಗೆ ಏಪ್ರಿಲ್ 11, 2013 ರಂದು, ಫುಲ್ ಕೋರ್ಟ್ ಇದೇ ರೀತಿಯ ಮನವಿಯನ್ನು ಪರಿಗಣಿಸಿತು ಮತ್ತು ಹಿಂದಿನ ಎಲ್ಲಾ ನಿರ್ಣಯಗಳನ್ನು ಪುನರುಚ್ಚರಿಸಿತು. ಮಹಾತ್ಮ ಗಾಂಧೀಜಿ ಮತ್ತು ಸಂತ ತಿರುವಳ್ಳುವರ್ ಅವರ ಪ್ರತಿಮೆಗಳು ಮತ್ತು ಭಾವಚಿತ್ರಗಳನ್ನು ಹೊರತುಪಡಿಸಿ, ಯಾವುದೇ ಇತರ ಭಾವಚಿತ್ರಗಳು ಮತ್ತು ಚಿತ್ರಗಳನ್ನು ನ್ಯಾಯಾಲಯದ ಆವರಣದೊಳಗೆ ಎಲ್ಲಿಯೂ ಪ್ರದರ್ಶಿಸಬಾರದು ಎಂದು ಸರ್ವಾನುಮತದಿಂದ ನಿರ್ಣಯಿಸಿತು" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸುತ್ತೋಲೆಯ ಪ್ರಕಾರ, ಅಕ್ಟೋಬರ್ 22, 2008 ರಂದು ಪೂರ್ಣ ನ್ಯಾಯಾಲಯವು ತಮಿಳುನಾಡು ಡಾ ಬಿಆರ್ ಅಂಬೇಡ್ಕರ್ ವಕೀಲರ ಸಂಘವು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತು, ಇದು ರಾಜ್ಯದ ನ್ಯಾಯಾಲಯದ ಸಭಾಂಗಣಗಳಲ್ಲಿ ಡಾ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರದರ್ಶಿಸಲು ಅನುಮತಿ ಕೋರಿತ್ತು.

Madras High Court declines request to install Dr. BR Ambedkar portrait in courts

ಮಾರ್ಚ್ 11, 2010 ರಂದು, ಫುಲ್ ಕೋರ್ಟ್ ಯಾವುದೇ ರಾಜಕೀಯ ನಾಯಕರ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸಲು ತೀರ್ಮಾನಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅಂತಹ ಪ್ರತಿಮೆಗಳಿಗೆ ಉಂಟಾದ ಹಾನಿಯನ್ನು ಗಮನದಲ್ಲಿರಿಸಿಕೊಂಡಿದೆ. ತರುವಾಯ, ಏಪ್ರಿಲ್ 2011 ರಲ್ಲಿ, ನ್ಯಾಯಾಲಯದ ಸಭಾಂಗಣಗಳಲ್ಲಿ ಯಾವುದೇ ಭಾವಚಿತ್ರಗಳ ಪ್ರದರ್ಶನವನ್ನು ನಿಷೇಧಿಸಲು ನಿರ್ಧರಿಸಿದೆ.

ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ, 2013ರ ಏಪ್ರಿಲ್ 20ರಂದು ಪೂರ್ಣ ನ್ಯಾಯಾಲಯವು ಕಾಂಚೀಪುರಂನ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ, ಹೊಸದಾಗಿ ನಿರ್ಮಿಸಿರುವ ನ್ಯಾಯಾಲಯದ ಕಟ್ಟಡದ ಪ್ರವೇಶ ದ್ವಾರದಲ್ಲಿ ಹಾಕಿರುವ ಡಾ.ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವಂತೆ ಆಳಂದು ನ್ಯಾಯಾಲಯದ ವಕೀಲರ ಸಂಘಕ್ಕೆ ಮನವರಿಕೆ ಮಾಡಿಕೊಡುವಂತೆ ಆದೇಶಿಸಿತ್ತು. ಕಡಲೂರು ವಕೀಲರ ಸಂಘದ ಇದೇ ರೀತಿಯ ಮನವಿಯನ್ನು ತಿರಸ್ಕರಿಸಿದೆ.

ಹಿಂದಿನ ಎಲ್ಲಾ ನಿರ್ಧಾರಗಳನ್ನು ಪುನರುಚ್ಚರಿಸುತ್ತಾ, ಹೊಸದಾಗಿ ಹೊರಡಿಸಿದ ಸುತ್ತೋಲೆಯಲ್ಲಿ ಸಂಬಂಧಪಟ್ಟ ಜಿಲ್ಲಾ ಮತ್ತು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಪೂರ್ಣ ನ್ಯಾಯಾಲಯದ ಆದೇಶಗಳು ಮತ್ತು ನಿರ್ಣಯಗಳನ್ನು ಪಾಲಿಸಬೇಕು ಎಂದು ಆದೇಶಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+