• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಬಾರಿಯ ದೀಪಾವಳಿ ಹೊಗೆಯ ಚೆಲ್ಲಾಟವಾಗದೆ ಪರಿಸರ ಸ್ನೇಹಿಯಾಗಲಿ

|

ಬೆಳಕಿನ ಹಬ್ಬದ ದೀಪಾವಳಿಯನ್ನು ಪಟಾಕಿ ಬದಲು ಹಣತೆ ಬೆಳಗುವುದರ ಮೂಲಕ ಮತ್ತಷ್ಟು ಮೆರುಗು ನೀಡಬಹುದು.

ದೀಪಾವಳಿಯು ಜ್ಞಾನದ ಸಂಕೇತವೆನ್ನುವುದು ಮೂಲೆಗುಂಪಾಗಿ ಕಿವಿಗರಚುವ ಅಸಹನೀಯ ಸದ್ದಿನ, ಆಘಾತಕಾರಿ ಸ್ಫೋಟ ಮತ್ತು ಹೊಗೆಯ ಚೆಲ್ಲಾಟವಾಗಿದೆ.

ಇನ್ನೇನು ದೀಪಾವಳಿಗೆ ಒಂದು ವಾರ ಬಾಕಿ ಇದೆ. ಬಟ್ಟೆಗಳು, ಗೃಹಾಲಂಕಾರ ವಸ್ತುಗಳ ಜೊತೆ ಜನರು ಪಟಾಕಿಗಳನ್ನು ಕೊಳ್ಳಲು ಸಿದ್ಧರಾಗಿದ್ದಾರೆ. ಆದರೆ ಪಟಾಕಿ ಬಿಟ್ಟು ಹಣತೆಯನ್ನು ಬೆಳಗಿ ಎನ್ನುವುದು ನಮ್ಮ ಆಶಯವಾಗಿದೆ.

ಯಾವುದೇ ಬಗೆಯ ಪಟಾಕಿ ಸಿಡಿಸಿದ ಹಲವು ವಾರಗಳ ನಂತರವೂ ವಾತಾವರಣದಲ್ಲಿ ಮೆಗ್ನೀಶಿಯಂ, ಗಂಧಕದ ನೈಟ್ರೇಟ್ , ಸಾರಜನಕದ ಡೈ ಆಕ್ಸೈಡ್ ಮುಂತಾದ ನಂಜಿನ ವಸ್ತುಗಳು ಕಡಿಮೆಯಾಗುವುದಿಲ್ಲ. ಉಸಿರಾಟ ತೊಂದರೆ, ಕಣ್ಣುರಿ , ಗಂಟಲುನೋವು ಬಾಧಿಸುತ್ತದೆ.

ದೀಪಾವಳಿ ಬಂದರೆ ಸಾಕು ಅಯ್ಯೋ ದೀಪಾವಳಿ ಬಂತಪ್ಪ ನಾನು ಎಲ್ಲಾದ್ರೂ ಹೋಗಿಬಿಡ್ತೀನಿ ಎಂದು ಹೇಳುವವರೇ ಹೆಚ್ಚು. ಯಾಕಪ್ಪಾ ಹಬ್ಬ ಆಚರಣೆ ಬಿಟ್ಟು ಊರು ಬಿಟ್ಟು ಹೋಗುವ ಮಾತು ಆಡ್ತಾರಲ್ಲಾ ಎಂದು ನೋಡ್ತಿದೀರ.

ಬರಬರುತ್ತ ಹಬ್ಬಗಳ ಆಶಯಗಳುಅಯೋಮಯವಾಗುತ್ತಿವೆ. ಆಡಂಬರ, ಅಬ್ಬರ, ಗೌಜು, ಶ್ರೀಮಂತಿಕೆ ತೋರಿಕೆ ದುಂದುಗಾರಿಕೆಗಳ ಮೆರವಣಿಗೆಯೇ ಹಬ್ಬವೆನಿಸಿದೆ. ನಮ್ಮ ಲಂಗುಲಗಾಮಿಲ್ಲದ ಸಡಗರಗಳು ವ್ಯಾಪಾರಿಗಳಲ್ಲಿ ಲಾಭಕೋರತನವನ್ನು ಹೆಚ್ಚಿಸಿದೆ.

ದೀಪಾವಳಿ ಮರುದಿನ ಬೆಂಗಳೂರಲ್ಲಂತೂ ಕಸದ ರಾಶಿಯದ್ದೇ ಕಾರುಬಾರು, ಕಾಗದ ಚಿಂದಿ, ಅರೆಸುಟ್ಟ ರಾಸಾಯನಿಕಗಳು, ಕುಡಿಕೆ ಚೂರು, ಲೋಹದ ಕಡ್ಡಿಗಳು, ತಂತಿಗಳುವಗೈರೆ ಟನ್ನುಗಟ್ಟಲೆ. ಇದರ ವಿಲೇವಾರಿಯು ಆಡಳಿತಕ್ಕೆ ದೊಡ್ಡ ಸವಾಲಾಗಿದೆ.

ಈ ಇನ್ನೊಂದು ಹೆಜ್ಜೆ ಮುಂದಿಡಬೇಕಿದೆ.ಆಯಾ ಬಡಾವಣೆಗಳಲ್ಲಿನ ಮೈದಾನಗಳಲ್ಲೇ ಸಾವ್ರತ್ರಿಕವಾಗಿ ಪಟಾಕಿ ಸಿಡಿಸುವುದು , ಗಾಳಿಪಟ ಹಾರಿಸಿ ಸಂಭ್ರಮಿಸುವ ಹಾಗೆ . ಕೆರೆಯಂಗಳವಾದರೆ ಇನ್ನೂ ಚೆಂದ. ಇದರಿಂದ ಎಲ್ಲರೂ ಒಟ್ಟಾಗಿ ಬಾಣ, ಬಿರುಸು, ಮತಾಪು ಹಚ್ಚುವ ಉಲ್ಲಾಸ.

ದೀಪಗಳ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಪರಿಸರಕ್ಕೆ ಹಾನಿಕಾರಕ ಪಟಾಕಿಗಳನ್ನು ಸಿಡಿಸಿ ಮಾಲಿನ್ಯ ಮಾಡುವುದನ್ನು ತಡೆಯಲು ಪರಿಸರ ರಕ್ಷಣೆಗೆ ಸರ್ಕಾರ ಮುಂದಾಗಿದೆ.

ಈ ಹಿಂದೆ 2018ರಲ್ಲಿ ದೀಪಾವಳಿ ಹಬ್ಬಕ್ಕೂ ಮುಂಚೆಯೇ ಸುಪ್ರೀಂ ಕೋರ್ಟ್ ಪರಿಸರ ಮಾಲಿನ್ಯ ಉಂಟುಮಾಡುವ ಪಟಾಕಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿತ್ತು. ಹಾಗೆಯೇ ಕಡಿಮೆ ಕೆಮಿಕಲ್ ಬಳಸಿ ತಯಾರಿಕೆ ಮಾಡುವ ಹಸಿರು ಪಟಾಕಿಗಳ ತಯಾರಿಕೆ ಹಾಗೂ ಮಾರಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಆದೇಶಿಸಿತ್ತು.

ಆದರೆ ಆಗ ಈ ಬಗ್ಗೆ ಹಲವು ಪಟಾಕಿ ತಯಾರಕರು ಹಾಗೂ ಮಾರಾಟಗಾರರಿಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣಕ್ಕೆ ಆಗ ಹಸಿರು ಪಟಾಕಿ ಮಾರುಕಟ್ಟೆಗೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ತಯಾರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಈ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಈ ಹಸಿರು ಪಟಾಕಿಯಿಂದ ಶೇ.30ರಷ್ಟು ಮಾಲಿನ್ಯ ಕಡಿಮೆಯಾಗಲಿದೆ. ಆದ್ದರಿಂದ ಭಾವನೆ ಹಾಗೂ ಪರಿಸರಕ್ಕೆ ಅಡ್ಡಿಯಾಗದಂತೆ ಪರಿಸರ ಸ್ನೇಹಿ ಪಟಾಕಿಗಳನ್ನು ಪರಿಚಯಿಸಲಾಗುತ್ತಿದೆ.

ಹಸಿರು ಪಟಾಕಿಗಳನ್ನು ವೈಜ್ಞಾನಿಕ ಹಾಗೂ ಕೈಗಾರಿಕ ಸಂಶೋಧನ ಕೌನ್ಸಿಲ್(ಸಿಎಸ್‍ಐಆರ್) ತಯಾರಿಸಿದೆ. ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳಲ್ಲಿ ಕಡಿಮೆ ಕೆಮಿಕಲ್ ಬಳಸಲಾಗುತ್ತದೆ. ಹೀಗಾಗಿ ಇದರಿಂದ ಪರಿಸರಕ್ಕೆ ಹೆಚ್ಚು ಹಾನಿ ಆಗುವುದಿಲ್ಲ. ಜೊತೆಗೆ ಸಾಮಾನ್ಯ ಪಟಾಕಿಗಳಿಂತ ಈ ಹಸಿರು ಪಟಾಕಿಗಳ ಬೆಲೆಯೂ ಕಡಿಮೆ ಇದೆ ಎನ್ನಲಾಗಿದೆ.

English summary
The excitement and celebratory spirit that Deepawali brings is unmatchable. Celebrating eco friendly Deepawali with friends and family has its own charm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X